ಕಾಂಚೀಪುರಂ(ತಮಿಳುನಾಡು), ಡಿ.1 - ಪರಿಹಾರ ನೀಡಲು ವಿಫಲವಾಗಿದ್ದಕ್ಕೆ ಎಂಜಿನ್ ಜಪ್ತಿ ಮಾಡಲು ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಲು ಮುಂದಾದ ಸಿಬ್ಬಂದಿ ಯತ್ನವನ್ನು ತಿರುಪತಿ-ಪುದುಚೇರಿ ಫಾಸ್ಟ್ ಪ್ಯಾಸೆಂಜರ್ ರೈಲು ವಿಫಲಗೊಳಿಸಿದ ಘಟನೆ ನಡೆದಿದೆ.
20 ವರ್ಷಗಳ ಹಿಂದೆ ರೈಲ್ವೆ ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಕ್ಕೆ ಇನ್ನೂ ಪರಿಹಾರ ನೀಡದ ಪ್ರಕರಣದ ಸಂಬಂಧ ತಮಿಳುನಾಡಿನ ಕಾಂಚೀಪುರಂನ ಉಪ ನ್ಯಾಯಾಲಯ ಎಂಜಿನ್ ಜಪ್ತಿ ಮಾಡುವಂತೆ ನ.23ರಂದು ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಜಾರಿಗೊಳಿಸಲು ನ್ಯಾಯಾಲಯದ ಸಿಬ್ಬಂದಿ ಶುಕ್ರವಾರ ಕಾಂಚೀಪುರಂನ ರೈಲ್ವೆ ನಿಲ್ದಾಣದಲ್ಲಿ ಎಂಜಿನ್ನನ್ನು ಜಪ್ತಿ ಮಾಡಿ ಕಾನೂನು ಪಾಲಿಸಲು ಮುಂದಾದರು. ನ್ಯಾಯಾಲಯದ ಸ್ಪಷ್ಟ ಆದೇಶವಿದೆ. ಎಂಜಿನ್ ಜಪ್ತಿ ಮಾಡಬೇಕೆಂದು ಸಿಬ್ಬಂದಿ ತಿಳಿಸಿದರು. ಇದರಿಂದ ನಿಲ್ದಾಣದಲ್ಲಿ ಮಾತಿನ ಚಕಮಕಿ ಮತ್ತು ಗೊಂದಲದ ವಾತಾವರಣ ನಿಮರ್ಾಣವಾಯಿತು. ಆದರೆ ಇದೇ ವೇಳೆ ಕೋಟರ್್ ಆದೇಶಕ್ಕೆ ಕ್ಯಾರೆ ಎನ್ನದ ತಿರುಪತಿ-ಪುದುಚೇರಿ ಮಾರ್ಗದ ರೈಲು ಅಲ್ಲಿಂದ ಜಾಗ ಖಾಲಿ ಮಾಡಿತು. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಕೋಟರ್್ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲ ಘಟನೆಯನ್ನು ನ್ಯಾಯಾಲಯಕ್ಕೆ ವರದಿ ಮಾಡಿ ರೈಲ್ವೆ ಇಲಾಖೆಯ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.