ಒಂದು ಶಿಕಾರಿಯ ಕಥೆ : ನಾಯಕ ನಟನಾಗಿ ಪ್ರಮೋದ್ ಶೆಟ್ಟಿ

ಬೆಂಗಳೂರು, ಜ 08, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯಯ ಪ್ರಾಥಮಿಕ ಶಾಲೆ ಕಾಸರಗೋಡು, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರ ‘ಒಂದು ಶಿಕಾರಿಯ ಕಥೆ’ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಈ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಧಾರಿತ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಐವತ್ತರ ಅಸುಪಾಸಿನ ಪ್ರಸಿದ್ಧ ಕಾದಂಬರಿಕಾರನ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ ಪಿ ಶೇಷಾದ್ರಿಯವರ ಜತೆ ಸಹಾಯಕ ನಿರ್ದೇಶಕಾಗಿ ಅನುಭವ ಪಡೆದಿರುವ ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ರಾಜೀವ್ ಶೆಟ್ಟಿ, ಸಚಿನ್ ಶೆಟ್ಟಿ ಬಂಡವಾಳ ಹೂಡಿದ್ದು, ಶೆಟ್ಟೀಸ್ ಫಿಲ್ಮ್ ಫ್ಯಾಕ್ಟರಿ ನಿರ್ಮಿಸಿದೆ.ಪತ್ನಿಯನ್ನು ತೊರೆದು ಏಕಾಂಗಿಯಾಗಿ ವಾಸಿಸುತ್ತಿರುವ ಕರಾವಳಿ ಭಾಗದ ಈ ವಿರಕ್ತ ಕಾದಂಬರಿಕಾರನ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳು, ಆ ಮೂಲಕ ಒಬ್ಬ ಸಾಹಿತಿ ಲೇಖನಿಯನ್ನು ಬಿಟ್ಟು ಕೋವಿಯನ್ನು ಹಿಡಿಯಬೇಕಾಗಿ ಬರುವ ಸಂದಿಗ್ಧತೆಯುಳ್ಳ ಕಥೆಯನ್ನು ಚಿತ್ರ ಒಳಗೊಂಡಿದೆಮಲೆನಾಡು ಸಂಸ್ಕೃತಿಯ ಅನಾವರಣದೊಂದಿಗೆ ಎಂಬತ್ತರ ದಶಕದ ಹಿನ್ನೆಲೆಯ ಕಥೆ ೧೦ ನಿಮಿಷ ಬರಲಿದ್ದು ಅದಕ್ಕಾಗಿ ನೂರು ವರ್ಷಕ್ಕೂ ಹಳೆಯ ಮನೆಯೊಂದನ್ನು ತೀರ್ಥಹಳ್ಳಿಯಲ್ಲಿ ಹುಡುಕಿ ಅಲ್ಲಿ ಚಿತ್ರೀಕರಿಸಿರುವುದು ಚಿತ್ರದ ವಿಶೇಷತೆ.ಯಕ್ಷಗಾನ ಕಲೆ ಚಿತ್ರದ ಪ್ರಮುಖ ಅಂಶವಾಗಿ ಬರಲಿದ್ದು ೧೦ ವರ್ಷಕ್ಕೂ ಹೆಚ್ಚಿನ ಯಕ್ಷಗಾನ ಕಲೆಯ ಅನುಭವ ಇರುವ ಪ್ರಸಾದ್ ಚೆರ್ಕಾಡಿಯವರು ಯಕ್ಷಗಾನ ಕಲಾವಿದನಾಗಿ ಅಭಿನಯಿಸಿದ್ದಾರೆ. ಕುಂದಾಪುರದಲ್ಲಿ ಯಕ್ಷಗಾನದ ಸೆಟ್ ಹಾಕಿ ೨ ದಿನ ಇಡೀ ರಾತ್ರಿ ನೈಜ ಯಕ್ಷಗಾನ ಕಲಾವಿದರ ತಂಡದೊಂದಿಗೆ ಚಿತ್ರೀಕರಣ ನಡೆಸಲಾಗಿದೆ. ಪ್ರಮುಖ ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಸಿರಿ ಪ್ರಹ್ಲಾದ್, ಪ್ರಸಾದ್ ಚೆರ್ಕಾಡಿ, ಎಮ್.ಕೆ ಮಠ, ಅಭಿಮನ್ಯು ಪ್ರಜ್ವಲ್, ಶ್ರೀಪ್ರಿಯಾ ಮೊದಲಾದವರಿದ್ದಾರೆ