‘ಶ್ರೀಮನ್ನಾರಾಯಣ’ ಈ ವಾರ ತೆರೆಗೆ

shirmannarayan

ಬೆಂಗಳೂರು, ಡಿ 23 - ರಕ್ಷಿತ್ ಶೆಟ್ಟಿ ಅಭಿನಯದ, ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ’ಅವನೇ ಶ್ರೀಮನ್ನಾರಾಯಣ’  ಇದೇ ಶುಕ್ರವಾರ ಡಿ 27ರಂದು ತೆರೆಗೆ ಬರಲಿದೆ

  ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಕನ್ನಡ ಈ ವಾರ ತೆರೆ ಕಂಡರೆ, ತೆಲುಗಿನಲ್ಲಿ ಜನವರಿ 1, ತಮಿಳು ಮತ್ತು ಮಲಯಾಳದಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17ರಂದು ತೆರೆ ಕಾಣಲಿದೆ

  ಮೂವತ್ತು ವರ್ಷಗಳ ಹಿಂದಿನ ಕಥೆಯನ್ನು ಚಿತ್ರ ಒಳಗೊಂಡಿದ್ದು ಅಮರಾವತಿ ಎಂಬ ಊರಿನ ಸಮಸ್ಯೆಗಳನ್ನು ಬಗೆಹರಿಸುವ ನಾರಾಯಣನಾಗಿ ರಕ್ಷಿತ್ ಮಿಂಚಲಿದ್ದಾರೆ

  ಪುಷ್ಕರ್ ಫ಼ಿಲಂಸ್ ಹಾಗೂ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಕೆ.ಹೆಚ್.ಪ್ರಕಾಶ್ ಅವರು ನಿರ್ಮಿಸಿರುವ ‘ಅವನೇ ಶ್ರೀಮನ್ನಾರಾಯಣ‘ ಚಿತ್ರವನ್ನು ಸಚಿನ್ ನಿರ್ದೇಶಿಸಿದ್ದಾರೆ.

  ಅಜನೀಶ್ ಲೋಕನಾಥ್ ಹಾಗೂ ಚರಣ ರಾಜ್ ಸಂಗೀತ ನಿರ್ದೇಶನವಿದ್ದು, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.  ಕರಮ್ ಚಾವ್ಲಾ ಛಾಯಾಗ್ರಹಣ, ಸಚಿನ್ ಸಂಕಲನ,  ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.  

ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್. ಅಚ್ಯುತಕುಮಾರ್, ಬಾಲಾಜಿ ಮನೋಹರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.