ಸರ್ಕಾರದ ಸೌಲತ್ತುಗಳು ಪ್ರತಿಯೊಬ್ಬರಿಗೂ ತಲುಪಬೇಕು: ಪೂಜಾರ.

ರಾಣೇಬೆನ್ನೂರು03: ಕಲ್ಲು, ಮಣ್ಣು, ಮರಳು ಜೋಡಿಸಿ ಮನೆ ಕಟ್ಟಿ ಎಲ್ಲರನ್ನು ಬೆಚ್ಚಗಿಡುವ ಕಾರ್ಮಿಕರು  ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಸರ್ಕಾರದ  ಸವಲತ್ತುಗಳನ್ನು ಒದಗಿಸುವ ಮೂಲಕ ಅವರ ಹಿತ ಕಾಪಾಡುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

     ತಾಲೂಕಿನ ಕರೂರ ಗ್ರಾಮದಲ್ಲಿ ಕರ್ನಾಟಕ  ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ  ಸೇವಾ ಸಂಘದ ಗ್ರಾಮ ಸಮಿತಿ ಉದ್ಘಾಟನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ  ಸಂಘಟಿಕರಾಗಿ ಹೋರಾಡುವುದು ನಿಮ್ಮ ಹಕ್ಕು, ಆಗ ಮಾತ್ರ ನಿಮ್ಮ ಪಡೆದುಕೊಳ್ಳಲು ಸಾಧ್ಯ ಎಂದರು.

     ಕಟ್ಟಡ ಕಾರ್ಮಿಕರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಕೆ ವೆಂಕಟೇಶ್ ಮಾತನಾಡಿ, ಹೋರಾಟದ ಮೂಲಕ ಕಾರ್ಮಿಕರ  ಹಕ್ಕುಗಳನ್ನು ಪಡೆಯುವ ಸ್ಥಿತಿ ನಿರ್ಮಾಣ ವಾಗಿದೆ. ಮನೆ ಕಟ್ಟುವ ಶ್ರಮಜೀವಿಗಳಿಗೆ ಮನೆಗಳು ಇಲ್ಲದಂತಾಗಿದೆ. ಕಾರ್ಮಿಕರು ಸಂಘಟನೆಯಾಗಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಚೋಳಪ್ಪ ಕಚ್ಚರಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಾ ಬಕ್ಕಜ್ಜಿ,  ಕಟ್ಟಡ ಕಾರ್ಮಿಕ  ರಾಜ್ಯ ಸೇವಾ ಸಂಘದ ಪ್ರಧಾನ ಕಾರ್ಯದರ್ಶ  ಲೋಕೇಶ್ ನಾಯ್ಕ್, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ತಾಪಂ ಸದಸ್ಯ ರಾಮಪ್ಪ ಬೆನ್ನೂರ, ಜಿ.ಪಂ ಮಾಜಿ ಅಧ್ಯಕ್ಷ ಡಾ| ಬಸವರಾಜ ಶಾಸ್ತ್ರಿ, ಕಾರ್ಮಿಕ  ನಿರೀಕ್ಷಕ ಪಿ.ಜಿ ಬಾಲಾಜಿ, ಪಿಡಿಒ ಜ್ಯೋತಿ ಕಮ್ಮಾರ, ಸುಭಾಸ್ ಸೂವರ್ೆ, ಮೀನಾ ಪಾಟೀಲ್,  ರೇಣುಕಾ ಲಮಾಣಿ, ಮಲ್ಲಿಕಾಜರ್ುನ ಕೊಪ್ಪದ್, ಬಸವರಾಜ ಹಳ್ಳೇರ ಸೇರಿದಂತೆ ಸಂಘದ ಪಾದಾಧಿಕಾರಿಗಳು ಇದ್ದರು.