ಸಿದ್ಧಾರೂಢರು ತನ್ನನ್ನು ತಾನು ಅರಿತು ಮಾರ್ಗ ತೋರಿಸಿದವರು

ಲೋಕದರ್ಶನವರದಿ

ರಾಣೇಬೆನ್ನೂರು03: ತನ್ನನ್ನು ತಾನರಿತು ನಡೆಯುವ ಮಾರ್ಗ ತೋರಿಸಿದವರು ಸಿದ್ಧಾರೂಢರು, ಆತ ಶ್ರೀಮಂತರಿಗೆ ಒಲಿಯದೆ ಭಕ್ತಿಗೆ ಒಲಿದವರು, ಭಗವಂತನಲ್ಲಿ ಪ್ರೀತಿ ಉಳ್ಳವರಿಗೆ ಮತ್ತು ಭಕ್ತಿಯನ್ನು ಅರಿತವರಿಗೆ ಭಕ್ತಿಯ ಬಗ್ಗೆ ಹೇಳಬೇಕು. ಅಂತಹ ಮಹಾಕಾರ್ಯ ಮಾಡಿದವರು ಅವರು ಎಂದು ಹುಬ್ಬಳ್ಳಿ ಜಡೇಸಿದ್ದಾಶ್ರಮದ ರಮಾನಂದ ಸ್ವಾಮಿಗಳು ಹೇಳಿದರು. 

    ಇಲ್ಲಿನ ಸಿದ್ಧಾರೂಢ ನಗರದ ಸಿದ್ಧಾರೂಢ ಮಠದಲ್ಲಿ 20ನೇ ವೇದಾಂತ ಪರಿಷತ್ನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು. ಭಕ್ತಿಯ ಪರಿಜ್ಞಾನ ಇಲ್ಲದವರಿಗೆ ಅದರ ಬಗ್ಗೆ ಹೇಳಿದರೆ ಜ್ವರ ಬಂದವರಿಗೆ ನೊರೆಹಾಲು ಕುಡಿಸಲು ಪ್ರಯತ್ನಿಸಿದಂತಾಗುತ್ತದೆ. ಭಕ್ತಿಯಲ್ಲಿ ಕೀರ್ತನ, ದರ್ಶನ, ಪಾದಸೇವನಾ, ದಾಸ್ಯ, ಶಕ್ಯ, ಆತ್ಮನಿವೇದನ, ಶ್ರವಣ, ಶರಣಾಗತ ಸೇರಿದಂತೆ ಒಂಭತ್ತು ಬಗೆಯಿವೆ. ಇವುಗಳಲ್ಲಿ ಯಾವದೇ ಒಂದು ರೀತಿಯಲ್ಲಿ ನಿಷ್ಕಾಮಿಗಳಾಗಿ ಭಕ್ತಿಯನ್ನು ಸಮಪರ್ಿಸಿದರೆ ಭಗವಂತ ಒಲಿಯುತ್ತಾನೆ ಎಂದರು.    

     ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಜಿ  ಮಾತನಾಡಿ, ಮಾನವ ಮುಕ್ತಿ ಪಡೆಯಲು ಗುರು ಕಾರುಣ್ಯ ಅವಶ್ಯವಾಗಿದ್ದು, ಅಂತಪ್ಪ ಗುರುವಿಗೆ ಶರಣಾಗಿ ಭಕ್ತಿಯಿಂದ ಗುರು ಸೇವೆ ಮಾಡಿದಲ್ಲಿ ಅಂತಹ ಫಲವನ್ನು ಪಡೆಯಲು ಸಾಧ್ಯ, ಭಕ್ತರು ಸಾವಿರಾರು ಸಂಖ್ಯೆಯಲ್ಲಿದ್ದರೂ ನಿಜವಾದ ಭಕ್ತ ಒಬ್ಬನೇ ಇರುತ್ತಾನೆ ಆತನನ್ನು ಗುರು ಗುರುತಿಸುತ್ತಾನೆ ಅವನು ಧನ್ಯ ಎಂದರು. 

   ಹುಬ್ಬಳ್ಳಿ ಸಿದ್ಧಾರೂಢಮಠದ ಸಚ್ಚಿದಾನಂದಸ್ವಾಮಿಜಿ ಮಾತನಾಡಿ, ಗುರು ತಾಯಿ ಸ್ವರೂಪಿಯಾಗಿದ್ದು, ಶಿವಾ ತಂದೆ ಸ್ವರೂಪಿ, ದೇವರನ್ನು ನಾವು ಕಂಡಿಲ್ಲ, ದೇವರನ್ನು ತೋರಿಸುವವನೆ ಗುರು. ಹಾಲಿನಲ್ಲಿ ತುಪ್ಪ ಇದ್ದು ಅದು ನಮಗೆ ಹೇಗೆ ಕಾಣಿಸುವುದಿಲ್ಲವೋ ಹಾಗೇಯೆ ದೇವರಿದ್ದಾನೆ ಆದರೆ ನಮಗೆ ಕಾಣಿಸುವುದಿಲ್ಲ, ತುಪ್ಪ ದೊರೆಯ ಬೇಕಾದರೆ ಶ್ರಮವಿದೆ, ಹಾಗೆಯೇ ದೇವರು ದೊರಕಬೇಕಾದರೆ ಗುರು ಸೇವೆ ಶ್ರಮದಲ್ಲಿದೆ ಎಂದರು.ಮಲಿನಗೊಂಡ ಮಗುವನ್ನು ತಂದೆ ಮುಟ್ಟಲಾರ, ಆದರೆ ಅದೆ ತಾಯಿ ಮಲಿನಗೊಂಡ ಮಗುವನ್ನು ಶುಭ್ರಗೊಳಿಸಿದಾಗ ತಂದೆ ಎತ್ತಿ ಮುದ್ದಾಡುತ್ತಾನೆ, ಅದೇ ರೀತಿ ಮಲಿನಗೊಂಡ ಮನುಷ್ಯನ ಮನಸ್ಸನ್ನು ಮಾತೃ ಸ್ವರೂಪಿಯಾದ ಗುರು ಶುಭ್ರಗೊಳಿಸಿದಾಗ ಪರಮಾತ್ಮ ಎತ್ತಿಕೊಳ್ಳುತ್ತಾನೆ, ಅಂತಹ ಮಹಾತ್ಕಾರ್ಯವನ್ನು ಸಿದ್ಧಾರೂಢರು ಮಾಡುತ್ತಿದ್ದರು. ಅವರನ್ನು ಸ್ಮರಿಸುವುದೇ ಮಹಾ ಪುಣ್ಯ ಎಂದು ಶ್ರೀಗಳು ನುಡಿದರು. 

 ಬುದ್ನಿ ಸಿದ್ಧಾರೂಢಮಠದ ಪ್ರಬಾನಂದ ಸ್ವಾಮಿಗಳು ಮಾತನಾಡಿ. ಶಿವಾವತಾರಿ ಹುಬ್ಬಳ್ಳಿಯ ಸಿದ್ಧಾರೂಢರು ಭೌತಿಕವಾಗಿ ನಮ್ಮ ಜೊತೆ ಇರದಿದ್ದರೂ ಅವರು ಇಲ್ಲಿಯೇ ಇದ್ದಾರೆ, ಅವರು ನಮ್ಮ ಜೊತೆ ಇದ್ದಾರೆ ಅನ್ಯತಾ ಭಾವನೆ ಬೇಡ, ಆತ ಭಕ್ತರ ಭವರೋಗ ನಿವಾರಿಸುವ ಗುರುವಾಗಿದ್ದಾನೆ ಎಂದು ನುಡಿದರು.

ತೆಲಗಿಯ ಪೂಣರ್ಾನಂದ ಶರೀಗಳು, ಹುಬ್ಬಳ್ಳಿಯ ಗುರುನಾಥರೂಢ ಸ್ವಾಮಿಗಳು, ಚೌಟಗಿಯ ಲಿಂಗಯ್ಯ ಸ್ವಾಮಿಗಳು, ಸ್ಥಳೀಯ ಆಶ್ರಮದ ಮಲ್ಲಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಉಪದೇಶಾಮೃತ ನೀಡಿದರು. ಭೀಮನಗೌಡ ಹುಲಗಿನಹೊಳಿ, ನಾಗಪ್ಪ ಬೆಳ್ಳೂಡಿ, ದೇವೇಂದ್ರಪ್ಪ, ಕರಬಸಪ್ಪ ಹಳ್ಳಳ್ಳಿ, ಬಿ.ಎಸ್. ರೇವಣ್ಣ, ಕರಬಸಪ್ಪ ಮಾಕನೂರ, ಮಲ್ಲಿಕಾಜರ್ುನ ಹಲಗೇರಿ, ಕರಬಸಪ್ಪ ಮಲ್ಲಾಡದ, ಪೂಣರ್ಿಮಾ ಅಯ್ಯನಗೌಡ್ರ, ಪೂಣರ್ಿಮಾ ಕುರವತ್ತಿ, ಪವನಕುಮಾರ ಮಲ್ಲಾಡದ ಮತ್ತಿತರರಿದ್ದರು.