ಶೊಷೀತ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಿ: ಬಸವರಾಜ ಹೊಳ್ಕರ್

ಶೊಷೀತ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಿ: ಬಸವರಾಜ ಹೊಳ್ಕರ್  The Shoshita community should enter Buddhism in the religion column: Basavaraja Holkar

ವಿಜಯಪುರ  21: ನಗರದ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ 22-09-2025 ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಡಾ ಬಾಬಾಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ತಮ್ಮ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು. 

ಈ ಕುರಿತು ಜಿಲ್ಲೆಯ ಎಲ್ಲಾ ಬೌದ್ಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಬೌದ್ಧ ಉಪಸಕರು, ಎಲ್ಲಾ ದಲಿತ ಸಂಘಟನೆಗಳ ನಾಯಕರು ಮತ್ತು ಎಲ್ಲಾ ಸಮಾಜದ ಮುಖಂಡರು ಜಾಗೃತ ಮೂಡಿಸಬೇಕು ಎಂದು ತಿಳಿಸಿದರು.  ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ತಮ್ಮ ಧರ್ಮ ( ಕಾಲಂ ನಂ.8) ಬೌದ್ಧ (ಕ್ರಮಸಂಖ್ಯೆ 6) ಎಂದು ತಮ್ಮ ಜಾತಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ತಮ್ಮ ಮೂಲ ಜಾತಿ ಹೊಲೆಯ, ಛಲವಾದಿ, ಮಾದಿಗ ಇತ್ಯಾದಿ (ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ತಮ್ಮ ಮೂಲ ಜಾತಿ) ದಾಖಲಿಸಬೇಕೆಂದು ಮನವಿ ಮಾಡಿದರು. ಛಲವಾದಿ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷರಾದ ಚಿದಾನಂದ ಕಾಂಬಳೆ ಮಾತನಾಡಿ ಬಾಬಾಸಾಹೇಬರು ನಮಗೂ ಮನುಷ್ಯರಂತೆ ಬದುಕಲು ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟು ಕೊನೆಗೆ ಬುದ್ಧ ಮಾರ್ಗ ತೊರಿದ್ದಾರೆ ಅದಕ್ಕಾಗಿ ನಾವೆಲ್ಲ ಅವರು ತೊರಿದ ಮಾರ್ಗದಂತೆ ಬೌದ್ಧರಾಗಬೇಕಾಗಿದೆ ಅದಕ್ಕಾಗಿ ನಾವು ಧರ್ಮದ ಕಾಲಂನಲ್ಲಿ ಖಡ್ಡಾಯವಾಗಿ ಬೌದ್ಧ ಎಂದು ಬರೆಸುವಂತೆ ಎಲ್ಲಾ ನೌಕರರಲ್ಲಿ ಮನವಿ ಮಾಡಿದರು. ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷರಾದ ರಾಜಶೇಖರ ಯಡಳ್ಳಿ ಮಾತನಾಡಿಧರ್ಮ ’ಬೌದ್ಧ’ಎಂದು ಜಾತಿ ಹೊಲೆಯ, ಛಲವಾದಿ, ಮಾದಿಗ ಎಂದು ದಾಖಲಿಸಿದರೆ ದಲಿತರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯಗಳು ರದ್ದಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ 1990ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರೆ ಅವರ ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ರದ್ದಾಗದೇ ಯಥಾವತ್ತಾಗಿ ಮುಂದುವರೆಯುತ್ತದೆ ಎಂದು ಹೇಳಿದರು . ಕೇಂದ್ರ ಸರ್ಕಾರದ ಈ ಆದೇಶಕ್ಕೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಮರು ಆದೇಶ ಹೊರಡಿಸಿ, ಪರಿಶಿಷ್ಟ ಜಾತಿಯ ಬೌದ್ಧರಿಗೆ ಮೀಸಲಾತಿ ಸೌಲಭ್ಯ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿ ದಲಿತರು ಗೊಂದಲಕ್ಕೆ ಒಳಗಾಗದೆ, ಭಯ ಬಿಟ್ಟು, ತಮ್ಮ ಧರ್ಮ ಬೌದ್ಧ ಎಂದು ಜಾತಿ ಹೊಲೆಯ, ಮಾದಿಗ ಎಂದು ಕಡ್ಡಾಯವಾಗಿ ದಾಖಲಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೌಕರರ ಸಂಘ ಸದಸ್ಯರಾದ ಪನವನಕುಮಾರ ನಿಂಬಾಳಕರ್ , ಅರವಿಂದ ಲಂಬು, ಸಂತೊಷ ಪಿರಗಾ, ಸುಭಾಸ ಚಲವಾದಿ, ಸುನಿಲ್ ಹಿಟ್ನಳ್ಳಿ, ಸತೀಶ ಹಿಮ್ಕರ್, ದಲಿತ ಮುಖಂಡರಾದ ಅಭಿಷೇಕ ಚಕ್ರವರ್ತಿ, ಭಾರತೀಯ ಭೌಧ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ವಗ್ಗ್ಯಾನವರ ಜಿಲ್ಲಾ ಕಾರ್ಯದರ್ಶಿ ಸಂತೊಷ ಶಹಾಪುರ, ರಾಜ್ಯ ಮುಖಂಡರಾದ ಬಸವರಾಜ ಚಲವಾದಿ, ಸುಜಾತಾ ಚಂಚಲಕರ್, ಅನ್ನಪೂರ್ಣ ಬೆಳ್ಳೆನವರ, ಭಾಗ್ಯಶ್ರೀ ವಗ್ಗ್ಯಾನವರ, ಸಿದ್ದಮ್ಮ ಚಲವಾದಿ, ಶಿವಾನಂದ ದೊಡಮನಿ , ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.