ಲೋಕದರ್ಶನ ವರದಿ
ದಾಂಡೇಲಿ 10: ಕಳೆದೊಂದು ವರ್ಷದಿಂದ ಹಿಂದುಗಳ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಪ್ರತಿಮೆ ಪ್ರತಿಷ್ಠಾಪನೆಗೆ ಪಟ್ಟ ಪ್ರಯತ್ನದ ಫಲವಾಗಿ ಇದೆ ಶನಿವಾರ 12 ಸೊಮಾನಿ ವೃತ್ತದ ಪೌರಾಯುಕ್ತರ ಮನೆಯ ಮುಂಬಾಗದ ನಗರ ಸಭೆಯ ಜಾಗದಲ್ಲಿ ವಿಗ್ರಹದ ಪ್ರತಿಷ್ಟಾಪನೆ ಸಾವಿರಾರು ಜನರ ಸಮ್ಮೂಖದಲ್ಲಿ ಸಡಗರ ಸಂಭ್ರಮದಿಂದ ನಡೆಯಲಿದೆ
ನಾಳೆ ಬೆಳಿಗ್ಗೆ ಮರಾಠಾ ಮಂಗಲ ಕಾಯರ್ಾಲ ಯದಿಂದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯನ್ನು ಮುಖ್ಯ ರಸ್ತಯ ಮುಕಾಂತರ ಮೆರವಣಿಗೆ ಮೂಲಕ ಪ್ರತಿಷ್ಟಾಪನಾ ಸ್ಥಳ ಸೋಮಾನಿ ವೃತ್ತಕ್ಕೆ ತರಲಾಗುವದು.
ಈಗಾಗಲೆ ಪ್ರತಿಷ್ಟಾಪನಾ ಸ್ಥಳದಲ್ಲಿ ಸ್ವಚ್ಛತಾ ಕಾರ್ಯವು ಭರದಿಂದ ಸಾಗಿದೆ
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸನ್ಮಾನ್ಯ ಆರ್, ವಿ. ದೇಶಪಾಂಡೆ ಅವರ ಅವಿರತ ಪ್ರಯತ್ನದಿಂದ ರಾಜ್ಯ ಸಚಿವ ಸಂಪೂಟ ಸಭೆಯಲ್ಲಿ ದಾಂಡೇಲಿ ನಗರ ಪ್ರದೇಶದಲ್ಲಿ ಏಳು ವಿವಿದ ಸಮಾಜದ ಗಣ್ಯರ ಮೂತರ್ಿಯನ್ನು ಪತಿಷ್ಟಾಪನೆಗೆ ಅನುಮತಿ ಪಡೆಯಲಾಗಿತ್ತು ಹಾಗೂ ಹಿಂದು ಮುಸ್ಲಿಮ್ ಭಾವೈಕ್ಯತೆಯ ಪ್ರತಿಕವಾದ ಹೇಸರು ಕವಿ ಸಂತ ಶಿಶುನಾಳ ಷರಿಫರ ಸವಿ ನೆನಪಿಗಾಗಿ ಹಳಿಯಾಳ ರಸ್ತೆಯಲ್ಲಿ ಷರಿಫರ ಮೂತರ್ಿ ಪ್ರತಿಷ್ಟಾಪನೆಗೆ ಸುಮಾರು ಐದಾರು ವರ್ಷಗಳ ಹಿಂದೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಅಂಗಿಕಾರ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.
ಕಾಮರ್ಿಕ ಮುಖಂಡರು ಮತ್ತು ದಾಂಡೇಲಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ದಿವಂಗತ ಆರ್, ಜಿ. ಸ್ಥಳೆಕರ ಮತ್ತು ದಾಂಡೇಲಿ ತಾಲೂಕ ರಚನಾ ಸಮಿತಿಯ ಅಧ್ಯಕ್ಷರಾದ ದಿವಂಗತ ಅಜಿತ ನಾಯ್ಕ ಅವರ ಮೂತರ್ಿಗಳನ್ನು ಪ್ರತಿಷ್ಟಾಪನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಚರ್ಿಸಿ ಅನುಮತಿ ಪಡೆಯ ಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ