ಲೋಕದರ್ಶನ ವರದಿ
ಕಾಗವಾಡ 11: ಭಕ್ತರೊಂದಿಗೆ ನನ್ನ ಸಂಬಂಧ ಅಸಾಮಾನ್ಯವಾಗಿದ್ದು, ಇಂದು ನಿನ್ನೆಯದಲ್ಲ. ಅದು ನಮ್ಮಿಬ್ಬರನ್ನು ಸಿದ್ಧ ಪರಮಾತ್ಮನ್ನಾಗಿ ಮಾಡಿದೆ. ಪಂಚಮಕಾಲದ ನನ್ನ ಕೊನೆಯ ಯಾತ್ರೆಯಲ್ಲಿ ದುಃಖ ಮತ್ತು ಸಂಸಾರದಿಂದ ಮುಕ್ತಿ ನೀಡುವಂತದ್ದಾಗಿದೆ. ಕಡಿಮೆ ಅವಧಿಯಲ್ಲಿ ನನ್ನ ದೊಡ್ಡ ಪರಿವಾರ ನಿರ್ಮಾಣವಾಗಲಿದೆ ಎಂದು ಭಾವಿಸಿರಲಿಲ್ಲ. ಯಾವುದನ್ನು ನಾನು ವಸುದೈವ ಕುಟುಂಬಕಂ ಎಂದು ಭಾವಿಸಿ ಮಾಡಿದೆನೋ ಅದು ಇಂದು ಇಷ್ಟು ದೊಡ್ಡದಾಗಿರುವುದು ಹೆಮ್ಮೆ ಮೂಡಿಸುತ್ತದೆ. ನನ್ನ ಭಕ್ತರೆಲ್ಲರೂ ಪರಮಾತ್ಮಗಳಾಗಲಿದ್ದಾರೆ. ಯಾರ್ಯಾರು ನನ್ನ ಸಂಸಾರದೊಂದಿಗೆ ಕೂಡಿದ್ದಾರೆಯೋ ಅವರೆಲ್ಲರಿಗೆ ಮೋಕ್ಷದೊಂದಿಗೆ ಸಂಸಾರದಿಂದ ಮುಕ್ತಿ ಸಿಗಲಿದೆ ಎಂದು ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜರು ತಮ್ಮ ಉಪದೇಶದಲ್ಲಿ ಹೇಳಿದರು.
ಜುಗೂಳ ಗ್ರಾಮದಲ್ಲಿ ಇಂದು ಅಪಾರ ಭಕ್ತರನ್ನು ಉದ್ದೇಶಿಸಿ ಅವರು ಪ್ರವಚನ ನೀಡುತ್ತಿದ್ದರು. ಜೀವಿಯು ಅನಾದಿ ಕಾಲದಿಂದಲೂ ಪಂಚೆಂದ್ರಿಗಳ ದಾಸನಾಗಿ ಪರಮಾತ್ಮತೆಯನ್ನು ಮರೆತಿದೆ. ಮುನಿಶ್ರೀಗಳು ನಿಮ್ಮನ್ನು ಗಮನಿಸಿಲ್ಲವೆಂದು ನಿಮಗೆ ಅನಿಸುತ್ತಿರಬಹುದು. ನಿಮ್ಮ ಮೊದಲ ಭೇಟ್ಟಿಯಲ್ಲಿಯೇ ನಿಮ್ಮನ್ನು ತಿಳಿದುಕೊಂಡಿದ್ದೇನೆ. ತಾವೆಲ್ಲರೂ ಇಲ್ಲಿಗೆ ಆಗಮಿಸಿ ನನ್ನ ಶರೀರವನ್ನು ನೋಡುತ್ತಿದ್ದೀರಿ. ನನ್ನ ಕಣ್ಣುಗಳನ್ನು ಮುಚ್ಚಿ ನಾನು ಅಂತರಮುಖಿಯಾಗಿ ನನ್ನ ಮತ್ತು ನಿಮ್ಮ ಭವ್ಯ ಸ್ವರೂಪಗಳನ್ನು ಕಾಣುತ್ತಿದ್ದೇನೆ. ಜಗತ್ತಿನಲ್ಲಿ ಈಗ ನಾನು ಪರಿಶುದ್ಧ ಭಾವನೆಗಳೊಂದಿಗೆ ಭಗವಾನನಾಗಲು ಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಶುದ್ಧ ಜ್ಞಾನ ಚೇತನದೊಂದಿಗೆ ಶುದ್ಧ ಅತ್ಮತತ್ವದ ಆನಂದವನ್ನು ಅನುಭವಿಸುತ್ತಿದ್ದೇನೆ. ನೀವು ಎಲ್ಲರೂ ಅಭೇದ ಜ್ಞಾನದೊಂದಿಗೆ ಮುನ್ನುಗ್ಗಿ ಭಗವಂತರಾಗಲು ಪ್ರಯತ್ನಿಸಿ. ಶರೀರವನ್ನು ಎಷ್ಟೇ ಪಾಲನೆ, ಪೋಷಣೆ ಮಾಡಿದರೂ ಕೂಡಾ ನಮ್ಮದಾಗಲು ಸಾಧ್ಯವಿಲ್ಲ. ನೀವು ಎಲ್ಲವನ್ನು ಮಾಡಿ ಧ್ಯರ್ಯದಿಂದ ಮುನ್ನುಗ್ಗಿ ಧರ್ಮವನ್ನು ಬೀಡಬೇಡಿ. ಮುನಿಶ್ರೀಗಳು ಇಷ್ಟೊಂದು ವೇದನೆಯನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ನೀವು ಭಾವಿಸಿರಬಹುದು. ಕೇವಲ ಕೆಲ ದಿನಗಳ ಇದು ಮುಕ್ತಾಯಗೊಳ್ಳಲಿದೆ. ನಿಮಗೆ ನನ್ನ ವೇದನೆ ಕಾಣಿಸಿದರೇ ನನಗೆ ನನ್ನ ಆತ್ಮದ ಸಂವೇದನೆ ಕಾಣುತ್ತಿದೆ. ಶರೀರ ಮತ್ತು ಸಂಸಾರದ ಹಿಂದೆ ಹೋಗಿ ನಿಮ್ಮ ಭವಿಷ್ಯ ಹಾಳಾಗದಿರಲಿ. ಶಾಸ್ವತ ಆತ್ಮ ತತ್ವವನ್ನು ತಿಳಿದು ನಿಮ್ಮ ಜೀವನವನ್ನು ಸಾರ್ಥಕಗೊಳಿಸಿ. ಇಂದು ನಾನು ಎಲ್ಲವನ್ನು ತ್ಯಾಗ ಮಾಡುತ್ತಾ ಹೊರಟಿದ್ದೇನೆ.
ಚಿಕ್ಕವನಾಗಿದ್ದಾಗ ಮುನಿಯಾಗಿ ಜ್ಞಾನಾರ್ಜನೆಗಾಗಿ ಅರಣ್ಯದಲ್ಲಿ ತಪಸ್ಸು ಮಾಡುವಾಗ ಪುಸ್ತಕಗಳನ್ನು, ಡೈರಿಗಳನ್ನು ಮತ್ತು ಜ್ಞಾನ ನೀಡುವ ಎಲ್ಲ ಸಾಧನೆಗಳನ್ನು ಇಟ್ಟುಕೊಂಡಿದ್ದೆ. ಈಗ ನಾನು ಪರಿಶುದ್ಧ ಜ್ಞಾನ ಪಡೆಯುತ್ತಾ ಹೋದಂತೆ ಎಲ್ಲವನ್ನು ತ್ಯಾಗ ಮಾಡುತ್ತೇನೆ. ಕೇವಲ ಪರಿಶುದ್ಧ ಜ್ಞಾನದ ಆತ್ಮಾರಾಧನೆಯೊಂದಿಗೆ ಮೊಕ್ಷ ಮಾರ್ಗದಲ್ಲಿ ಸಮಾಧಿಯನ್ನು ಸಫಲಗೊಳಿಸಲು ಪ್ರಯತ್ನಿಸುತ್ತೇನೆ. ನಿಮ್ಮಲ್ಲರಿಗೆ ಹೃದಯಪೂರ್ವಕ ಆಶೀರ್ವಾದ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ.
ಪರಿವಾರ ಸುಖದಿಂದ ಇರಲಿ ಧರ್ಮ ಮಾರ್ಗದಲ್ಲಿ ನಡೆದು ನಿವೆಲ್ಲ ಪಾವನರಾಗಿರಿ ಎಂದು ಹರಿಸಿದರು. ಆಚಾರ್ಯ ಜಿನಸೇನ ಮಹಾರಾಜ, ಮುನಿಶ್ರೀ ಸರಲಸಾಗರ ಮಹಾರಾಜ, ಸುಮತಿಸಾಗರ ಮಹಾರಾಜ, ಅಜೀತಸೇನ ಮಹಾರಾಜರು, ಏಲಕ ಸಿದ್ಧಾಂತ ಸಾಗರಜೀ ಮಹಾರಾಜ ಹಾಗೂ ಉದ್ಯಮಿ ಪ್ರಕಾಶ ಮೋದಿ, ಸೌ. ಸುಮನಲತಾ ಮೋದಿ ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು.