ಇಂದಿನಿಂದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಪ್ರಾರಂಭ

ಲೋಕದರ್ಶನ ವರದಿ

ಅಥಣಿ 18: ಮಹಾ ಶಿವರಾತ್ರಿ ಅಂಗವಾಗಿ ಸ್ಥಳೀಯ ಗಚ್ಚಿನ ಮಠದ ಆಶ್ರಯದಲ್ಲಿ  ಶರಣ ಸಂಸ್ಕೃತಿ ಉತ್ಸವ ಫೆ.19 ರಿಂದ 22 ರವರೆಗೆ ವೀರಶೈವ ವಿದ್ಯಾಪೀಠದ ಆವರಣದಲ್ಲಿ ನಡೆಯಲಿದೆ ಎಂದು ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

      ಫೆ.19 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಯುವಜನ ಮೇಳ ಕಾರ್ಯಕ್ರಮದ ಸಾನಿಧ್ಯವನ್ನು ಇಳಕಲ್-ಸವದಿ ಮಠದ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗ ಬೋವಿ ವಡ್ಡರ ಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಹಾಗೂ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ವಹಿಸುವರು. ಮುಖ್ಯಅತಿಥಿಗಳಾಗಿ ಗದಗ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಶ್ರೀನಾಥ ಜೋಶಿ, ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಸಹಾಯಕ ಪ್ರಾಧ್ಯಾಪಕ ಕುಮಾರಿ ಚೈತ್ರಾ, ವಿಜಯಪುರ ಕಾಂಗ್ರೆಸ್ ಧುರೀಣ ಅಬ್ದುಲ್ ಹಮೀದ ಬಾಜಾಸಾಬ ಮುಸ್ರಿಫ್, ಎಸ್.ಜೆ.ಎಮ್ ವಿದ್ಯಾಪೀಠ ಚಿತ್ರದುರ್ಗದ ಎಮ್.ಜೆ.ದೊರೆಸ್ವಾಮಿ, ಜಿ.ಪಂ ಸದಸ್ಯೆ ಶಕುಂತಲಾ ದಿವಾನಮಳ, ಯುವಕ ಚಿಂತಕ ಅಜಿತ ನಾಡಿಗ, ಖ್ಯಾತ ವೈದ್ಯ ಡಾ.ಮಲ್ಲಿಕಾಜರ್ುನ ಹಂಜಿ, ವಿಜಯಪುರದ ಉದ್ಯಮಿ ಬಸವರಾಜ ಅಣೆಪ್ಪನವರ ಆಗಮಿಸುವರು ಎಂದರು.

      ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂತರ್ಜಾಲ ಮಾಹಿತಿ ತಜ್ಞ ಡಾ.ಅನಂತಪ್ರಭು ವಿಶೇಷ ಉಪನ್ಯಾಸ ನೀಡುವರು. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ಗೋಪಿ ಹಾಗೂ ಕೊಗುಳಿ ಕೊಟ್ರೇಶ್ ಇವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದರು. 

     ಫೆ.20 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ  ಶರಣರು ವಹಿಸುವರು, ಶರಣ ಸಂಸ್ಕೃತಿ ಮೇಳವನ್ನು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೆರವೇರಿಸುವರು, ಡಿಸಿಎಮ್ ಲಕ್ಷ್ಮಣ ಸವದಿ ಕ್ಯಾಲೇಂಡರ್ ಬಿಡುಗಡೆಗೊಳಿಸುವರು, ಮುಖ್ಯಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಸೇಡಂ ಶಾಸಕ ರಾಜಕುಮಾರ ಪಾಟೀಲ, ಧಾರವಾಡ ಶಾಸಕ ಅರವಿಂದ ಬೆಲ್ಲದ, ತಾ.ಪಂ ಅಧ್ಯಕ್ಷ ಕವಿತಾ ನಾಯಿಕ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ರಮೇಶ ಸಿಂದಗಿ ಆಗಮಿಸುವರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. 

      ಫೆ.21 ರಂದು ಮುಂಜಾನೆ 7.30 ಕ್ಕೆ ಡಾ. ಶಿವಮೂರ್ತಿ  ಮುರುಘಾ ಶರಣರ ನೇತೃತ್ವದಲ್ಲಿ ನಡೆಯಲಿರುವ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ದಾವಣಗೇರೆ ವೀರಕ್ತ ಮಠದ ಬಸವ ಪ್ರಭು ಸ್ವಾಮೀಜಿ, ತೆಲಸಂಗ ಹಿರೇಮಠದ ಶ್ರೀ ವಿರೇಶ ದೇವರು, ಶೇಗುಣಸಿ ವೀರಕ್ತ ಮಠದ ಮಹಾಂತ ದೇವರು, ಚೆಳ್ಳಕೇರಿಯ ಬಸವ ಕಿರಣ ಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ.ಗೌರಿಶ ಪಾಟೀಲ, ಶೋಭಾತಾಯಿ ಮಗಾವಿ, ಧಾರವಾಡದ ನಾಗರಾಜ ಪಟ್ಟಣಶೆಟ್ಟಿ, ಧಾರವಾಡದ ಡಿ.ಬಿ.ಲಕಮನಹಳ್ಳಿ, ಈಶ್ವರ ಸಾಣಿಕೊಪ್ಪ, ಎಚ್.ಎಮ್.ಸಿದ್ಧಣ್ಣ, ಅಂದಾನೆಪ್ಪ ಬಿಳ್ಳೂರ, ಅಶೋಕ ಹೋಸುರ, ಸೋಮಶೇಖರ ವಾಂಗಿ, ಅವಿನಾಶ ಕವಿ, ವಿರೇಶ ಪಾಟೀಲ ಆಗಮಿಸುವರು ಎಂದು ತಿಳಿಸಿದರು.

      ಮುಂಜಾನೆ 9 ಗಂಟೆಗೆ ನಡೆಯಲಿರುವ ಬಸವ ಧರ್ಮ ಧ್ವಾಜಾರೋಹಣ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾದಾಸೋಹ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಚಿಂತನಗೋಷ್ಟಿಯ ಸಾನಿಧ್ಯವನ್ನು ಡಾ,ಶಿವಮೂರ್ತಿ  ಮುರುಘಾ ಶರಣರು ಹಾಗೂ ಧಾರವಾಡದ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸುವರು, ಮುಖ್ಯತಿಥಿಗಳಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬಣಜವಾಡ ಶಿಕ್ಷಣ ಸಂಸ್ಥೆಯ ಲಕ್ಷ್ಮಣ ಬಣಜವಾಡ, ಕೃಷ್ಣಾ ಶುಗರ್ಸ ಅಧ್ಯಕ್ಷ ಪರಪ್ಪ ಸವದಿ, ಕುಡಚಿ ಶಾಸಕ ಪಿ.ರಾಜೀವ, ಉದ್ಯಮಿ ರಫಿಕ್ ಢಾಂಗೆ ಆಗಮಿಸುವರು. ಉಪನ್ಯಾಸವನ್ನು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ನೀಡುವರು, ಕೆಪಿಟಿಎಲ್ನ .ಶಿವಕುಮಾರ ಹಾಗೂ ಬಸವರಾಜ ಕೆರೂಡಿ ಇವರನ್ನು ಸತ್ಕರಿಸಲಾಗುವುದು ಎಂದು ತಿಳಿಸಿದ ಅವರು ನಾಡಿನ ಶ್ರೇಷ್ಠ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಜಾಗರಣೆ ನಡೆಯುವುದು. ಫೆ.22 ರಂದು ಮುಂಜಾನೆ 7.30 ಕ್ಕೆ ನಡೆಯಲಿರುವ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಮಹಾಂತ ರುದ್ರೇಶ ಸ್ವಾಮೀಗಳು, ಹಲ್ಯಾಳದ ಗುರುಸಿದ್ಧ ಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಉದ್ಯಮಿ ಪ್ರಕಾಶ ಸಾಮ್ರಾಣಿ, ಬೆಂಗಳೂರಿನ ಅರುಣಕುಮಾರ, ಸಿ.ಪಿ.ಐ ಶಂಕರಗೌಡ ಪಾಟೀಲ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ, ಅಲ್ಲಪ್ಪ ನಿಡೋಣಿ, ಸೋಮನಿಂಗಗೌಡ ಪಾಟೀಲ, ದಾನಯ್ಯ ಹಿರೇಮಠ, ಸಿದರಾಯ ತೇಲಿ, ಮುರಿಗೆಪ್ಪ ಪಾಟೀಲ ಆಗಮಿಸುವರು ಎಂದ ಅವರು ಮಧ್ಯಾಹ್ನ ಸಿದ್ಧಲಿಂಗ ಅಪ್ಪಗಳ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.