ಅಥಣಿ(ಶಿವಪುತ್ರ ಯಾದವಾಡ): ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಮಾತನಾಡುತ್ತಾ ಅಥಣಿ ತಾಲೂಕಿನಲ್ಲಿ ಎರಡು ದಶಕಗಳಿಂದ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತ ಮುಂದೆ ಸಾಗಿದೆ. ಇಂದಿನ ವಿದ್ಯಾರ್ಥಿಗಳು ಸಮಾಜ ಕಾರ್ಯಗಳಲ್ಲಿ ತೋಡಗಬೇಕಾದರೆ , ತಮ್ಮ ಕಲಿಕೆಯೊಂದಿಗೆ ಸಮಾಜ ಸೇವೆಯನ್ನು ರುಡಿಸಿಕೊಳ್ಳಬೇಕು. ಎಂದು ಕಿವಿ ಮಾತು ಹೇಳಿದರು.
ಸ್ಥಳಿಯ ರಾಷ್ಟ್ರ ಪ್ರಶಸ್ತಿ ಭೂಷಿತ ವಿಮೋಚನಾ ಸಂಸ್ಥೆಯ ಸಂತರಾಮ ಪಿಯು ಮಹಾವಿದ್ಯಾಲಯದಲ್ಲಿ ಸಮಾಜ ಸೇವೆಯಲ್ಲಿ ತೋಡಗಿರುವ ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ರೋಟ್ರ್ಯಾಕ್ಟ ಕ್ಲಬ್ ಇದರ ನೂತನ ಸದಸ್ಯರ ಪದಗ್ರಹನ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ ಆನಂದ ಕುಲಕರ್ಣಿ ರೋಟ್ರ್ಯಾಕ್ಟ ಕ್ಲಬ್ ಜಿಲ್ಲಾಪ್ರತಿನಿಧಿ ರಾಹುಲ ಮೋಹಿತ, ಪ್ರಾಚಾರ್ಯ ಭಾರತಿ ಬಿಜಾಪುರೆ ಮಾತನಾಡಿದರು.
ರೋಟ್ರ್ಯಾಕ್ಟ ಕ್ಲಬ ಅಧ್ಯಕ್ಷರಾಗಿ ದೀಪಾ ಬಳ್ಳಿಗೇರಿ, ಕಾರ್ಯದರ್ಶಿಯಾಗಿ ದಾನೇಶ್ವರಿ ಚಿಮ್ಮಡ, ಖಜಾಂಚಿಯಾಗಿ ಮಂಜುಳಾ, ಉಪಾಧ್ಯಕ್ಷರಾಗಿ ತೋಹಿದ ಬಾಲದಾರ ಸೇರಿ 15 ವಿದ್ಯಾರ್ಥಿಗಳು ನಿರ್ದೇಶಕರಾಗಿ ಪದಗ್ರಹಣ ಸ್ವೀಕರಿಸಿದರು. ರೋಟರಿ ಕ್ಲಬ್ ಹಿರಿಯ ಸದಸ್ಯರು ಬಾಲಚಂದ್ರ ಬುಕಿಟಗಾರ, ಸಚಿನ ದೇಸಾಯಿ, ಮೇಗರಾಜ ಪರಮಾರ, ಡಾ ಅಮೃತ ಕುಲಕಣರ್ಣಿ, ಶಿವಾನಂದ ಕಾರೆ ಹಾಗೂ ಕ್ಲಬಿನ ಇತರ ಸದಸ್ಯರು ಮತ್ತು ವಿಮೋಚನ ಪದಾಧಿಕಾರಿಗಳು ಉಪಸ್ಥಿತರಿದ್ದರು.