ಗಣತಂತ್ರ ಈಗ ಗೂಂಡಾತಂತ್ರವಾಗಿ ಬದಲಾಗಿದೆ; ಮೋದಿ

ಬಂಕೂರ/ ಪುರುಲಿಯ 9 (ಯುಎನ್ಐ): ಪಶ್ಚಿಮ ಬಂಗಾಳ ದಲ್ಲಿ 'ಗಣತಂತ್ರ ' ವ್ಯವಸ್ಥೆ 'ಗೂಂಡಾತಂತ್ರವಾಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.  

  ಪಶ್ಚಿಮ ಬಂಗಾಳದಲ್ಲಿ ಎರಡನೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಮತಾ ಬ್ಯಾನರ್ಜಿ ಅವರು ತಮಗೆ ಕಪಾಳಮೋಕ್ಷ ಮಾಡಬೇಕೆಂದು ಬಯಸುತ್ತಿದ್ದಾರೆ. ಹಾಗಿದ್ದಲ್ಲಿ, ತಾವು ಅದನ್ನು ಹಿರಿಯ ಸಹೋದರಿಯ ಆಶಿವರ್ಾದ ಎಂದು ಸ್ವೀಕರಿಸುತ್ತೇವೆ ಎಂದಿದ್ದಾರೆ.  

   "ಈ ರಾಜ್ಯದ ದೀದಿ ನಮಗೆ ಕಪಾಳಮೋಕ್ಷ ಮಾಡಲು ಬಯಸುತ್ತಿದ್ದಾರೆ ಎಂದು ತಿಳಿಯಿತು. ಮಮತಾ, ದೀದಿ, ನಿಮ್ಮ ಕುರಿತು ಬಹಳ ಗೌರವವಿದೆ. ನಿಮ್ಮ ಕಪಾಳಮೋಕ್ಷ ಕೂಡ ನಮಗೆ ಆಶಿರ್ವಾದವಾಗಿ  ಬದಲಾಗಲಿದೆ. ಅದನ್ನು ಸ್ವೀಕರಿಸುತ್ತೇವೆ. ಆದರೆ, ನೀವು ಈ ರಾಜ್ಯದಲ್ಲಿ ನಡೆದ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾದವರಿಗೆ ಕೂಡ ಇದೇ ರೀತಿ ಕಪಾಳ ಮೋಕ್ಷ ಮಾಡುವ ಧೈರ್ಯ ತೋರಿದ್ದರೆ ಇಂದು ಇಷ್ಟು ಭಯಪಡುವ ಅಗತ್ಯವಿರಲಿಲ್ಲ" ಎಂದು ಲೇವಡಿ ಮಾಡಿದರು.  

  ಮಮತಾ ಬ್ಯಾನಜರ್ಿ ಅವರು ತೃಣಮೂಲ  ಟೋಲ್ ಬಾಜಿ ತೆರಿಗೆಯನ್ನು ಜನರ ಮೇಲೆ ಹೇರುತ್ತಿರುವ ತಮ್ಮ ಆಪ್ತರ  ಕಪಾಳಕ್ಕೆ ಹೊಡೆಯಲಿ ಎಂದು ಮೋದಿ, ಟಿಎಂಸಿ ರಕ್ಷಿಸುತ್ತಿರುವ ಅಕ್ರಮ ವಲಸಿಗರನ್ನು ಶಿಕ್ಷಿಸುವ ಭರವಸೆ ನೀಡಿದರು.  

  ಇತ್ತೀಚೆಗೆ ಸಾರ್ವಜನಿಕ ಭಾಷಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ಆಡಳಿತ ಪ್ರಜಾಪ್ರಭುತ್ವಕ್ಕೆ ಕಪಾಳಮೋಕ್ಷದಂತೆ ಎಂದಿದ್ದರು. ಇದನ್ನು ಕೆಲ ಮಾಧ್ಯಮಗಳು, ಮಮತಾ ಅವರು ಮೋದಿಗೆ ಕಪಾಳಮೋಕ್ಷ ಮಾಡಬಯಸುತ್ತಾರೆ ಎಂದು ತಪ್ಪಾಗಿ ವರದಿ ಮಾಡಿದ್ದವು.  

   ಮೋದಿ ಅವರನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ಮಮತಾ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ಅವರಿಗೆ ಪಾಕಿಸ್ತಾನ ಪ್ರಧಾನಿಯನ್ನು ತಮ್ಮ ಪ್ರಧಾನಿಯೆಂದು ಪರಿಗಣಿಸಲು ಹೆಮ್ಮೆ ಆಗುತ್ತದೆಯೇ? ಇಂತಹ ಹೇಳಿಕೆಗಳ ಮೂಲಕ ಅವರು ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದ್ದಾರೆ ಎಂದರು.  

   ಮೇ 23ರಂದು ಮೋದಿ ಸಕರ್ಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಹೊಸ  ಜಲ ಸಚಿವಾಲಯ ಸ್ಥಾಪಿಸಿ, ರೈತರಿಗೆ ಹೊಸ ಯೋಜನೆಗಳನ್ನು ಆರಂಭಿಸಲಾಗುವುದು. ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದರು.