ಬಾಗಲಕೋಟೆ: ಒಬ್ಬ ಸಾಮಾನ್ಯ ಮನುಷ್ಯ ಅದ್ಬುತ ಕೃತಿ ರಚಿಸುವ ಮೂಲಕ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವ ರಾಮಾಯಣದಂತಹ ಮಹಾನ್ ಗ್ರಂಥ ರಚಿಸಿದವರು ಮಹಷರ್ಿ ವಾಲ್ಮೀಕಿ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವ ಜನಾಂಗಕ್ಕೆ ದಾರಿದೀಪವಾಗಿರುವ ಹಾಗೂ ಗತಕಾಲದ ಇತಿಹಾಸ ತಿಳಿಸುಕೊಡುವ ರಾಮಾಯಣ ಗ್ರಂಥ ರಚಿಸಿದ್ದರಿಂದ ಇವರನ್ನು ಮಹಷರ್ಿ ಎಂದು ಕರೆಯಲಾಯಿತು. ಇದರಿಂದ ರಾಮಾಯಣ ಪ್ರಸಿದ್ದಿಯಾಗಬೇಕಾದರೆ ವಾಲ್ಮಿಕಿ ಕಾರಣರಾಗಿದ್ದರಿಂದ ವಾಲ್ಮೀಕಿ ರಾಮಾಯಣವೆಂದು ಪ್ರಸಿದ್ದಿ ಪಡೆಯಿತು ಎಂದರು.
ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸೀಮಿತವಾಗಿರದೇ ಮಾನವ ಕುಲೋದ್ದಾರಕರಾಗಿದ್ದರು. ಶಿಸ್ತು, ಶ್ರಮ, ಸಾಧನೆ ಹಾಗೂ ಶಿಕ್ಷಣವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ಹಲವು ಸಮುದಾಯಗಳನ್ನು ಒಳಗೊಂಡ ನಮ್ಮ ದೇಶ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಪ್ರಪಂಚದಲ್ಲಿ ಅಗ್ರಸ್ಥಾನ ಪಡೆದಿದ್ದರೂ ಸ್ವಚ್ಛತೆ ಮತ್ತು ಶಿಸ್ತಿಗೆ ಹಿಂದೂಳಿದ ದೇಶವಾಗಿರುವುದು ವಿಷಾಧನೀಯ ಸಂಗತಿಯಾಗಿದ್ದು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ ಎಂದರು.
ನವನಗರದ ಸೆಕ್ಟರ ನಂ.50 ರಲ್ಲಿ 3 ಕೋಟಿ ರೂ.ಗಳ ವೆಚ್ಚದಲ್ಲಿ ವಾಲ್ಮೀಕಿ ಭವನ ನಿಮರ್ಿಸಲಾಗಿದ್ದು, ಕಟ್ಟಡ ಸುತ್ತಲೂ ಕಂಪೌಂಡ್ ನಿಮರ್ಾಣಕ್ಕೆ ಹೆಚ್ಚುವರಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದೆಂದರು. ಎಲ್ಲ ಸಮುದಾಯದವರು ಸರಕಾರ ನೀಡಿದ ಸೌಲಭ್ಯ ಹಾಗೂ ಮೀಸಲಾತಿಯನ್ನು ಬಳಸಿಕೊಂಡು ಎಲ್ಲರೂ ಕೂಡಿ ಬಾಳಿದಾಗ ಮಾತ್ರ ಮಹಷರ್ಿ ವಾಲ್ಮೀಕಿ ಅವರಿಗೆ ಗೌರವ ತಂದಂತಾಗುವುದೆಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಅಮೀನಗಡದ ಸಂಗಮೇಶ್ವರ ಪ್ರೌಢಶಾಲೆಯ ಸಹಶಿಕ್ಷಕ ಆರ್.ಜಿ.ಸನ್ನಿ ಮಾತನಾಡಿ ವಿಶ್ವದ ಎಲ್ಲ ದೇಶದ ಸಂಸ್ಕೃತಿಗೆ ಹೋಲಿಸಿದಾಗ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ನಮ್ಮ ಭಾರತ ಸಂಸ್ಕೃತಿ. ಇಂತಹ ಸಂಸ್ಕೃತಿಗೆ ಕಾರಣವಾದ ಎರಡು ಮಹಾನ್ ಗ್ರಂಥಗಳು ರಾಮಾಯಣ ಮತ್ತು ಮಹಾಭಾರತ. ಈ ಎರಡು ಮಹಾನ್ ಕೃತಿಗಳ ರಚನೆಕಾರರು ಬೇಡನಾದ ವಾಲ್ಮೀಕಿ, ಮೀನು ಬೇಟೆಗಾರರನಾದ ವ್ಯಾಸರಿಗೆ ಸಲ್ಲುತ್ತದೆ. ಇದರಿಂದ ದೇಶದ ಸಂಸ್ಕೃತಿ ಉನ್ನತೀಕರಣಕ್ಕೆ ಕೆಳ ಸಮುದಾಯ ವ್ಯಕ್ತಿಗಳ ಕೊಡುಗೆ ಅಪಾರವಾಗಿರುವುದು ತಿಳಿದು ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಪರಿಶಿಷ್ಟ ವರ್ಗದ ವಿದ್ಯಾಥರ್ಿಗಳನ್ನು ಸಾನ್ಮಾನಿಸಿ ಪ್ರೋತ್ಸಾಹಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸದಸ್ಯರಾದ ಕವಿತಾ ದಡ್ಡಿ, ಹನಮವ್ವ ಕರಿಹೊಳೆ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮುರಗಿ, ಉಪವಿಭಾಗಾಧಿಕಾರಿ ರಂಗಪ್ಪ, ಸಮಾಜದ ಮುಖಂಡರಾದ ರಾಜು ನಾಯ್ಕರ, ದ್ಯಾಮಣ್ಣ ಗಾಳಿ, ಶಂಭುಗೌಡ ಪಾಟೀಲ, ನಿಂಗಪ್ಪ ಕ್ಯಾದಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು.
ಭಾವಚಿತ್ರದ ಮೆರವಣಿಗೆ
ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಷರ್ಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ ಪೂಜೆ ಸಲ್ಲಿಸಿ ಮೆರೆವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಜಿಲ್ಲಾ ನ್ಯಾಯಾಲಯ, ಎಸ್.ಬಿ.ಐ ಬ್ಯಾಂಕ್, ಎಲ್.ಐ.ಸಿ ಕಚೇರಿ ಮಾರ್ಗವಾಗಿ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮಹಿಳೆಯರು ಕುಂಬು ಹೊತ್ತುಕೊಂಡಿದ್ದು, ಆಕರ್ಷಣೀಯವಾಗಿತ್ತು.