ರನ್ನ ಬೆಳಗಲಿ ಪುಣ್ಯಕೋಟಿ ಆಶ್ರಮದಲ್ಲಿ ಪ್ರತ್ಯಂಗಿರಾ ಹೋಮ
The Pratyangira Homa is performed at the Ranna Belagali Punyakoti Ashram
ಮಹಾಲಿಂಗಪುರ, ಜು. 7: ಪಟ್ಟಣದ ಶ್ರೀ ಚಕ್ರಪೂರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಪುಣ್ಯಕೋಟಿ ಸಿದ್ಧಾಶ್ರಮದ ಆವರಣದಲ್ಲಿ ರಾಷ್ಟ್ರದ ಸೈನಿಕರ ಸುಭದ್ರತೆ, ದೇಶದ ಶಾಂತಿ ಹಾಗೂ ಉತ್ತಮ ಮಳೆ-ಬೆಳೆ ಸಮೃದ್ಧಿಗಾಗಿ ವಿಶೇಷ ಪ್ರತ್ಯಂಗಿರಾ ಹೋಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಹೋಮದ ನೇತೃತ್ವ ವಹಿಸಿದ್ದ ವೇದಬ್ರಹ್ಮ ಡಾ. ರಮೇಶಕುಮಾರ ಶಾಸ್ತ್ರಿಜಿ ಮಾತನಾಡಿ, ಪ್ರತ್ಯಂಗಿರಾ ಹೋಮವು ಹಿಂದೂ ಧರ್ಮದ ಅತ್ಯಂತ ಶಕ್ತಿಶಾಲಿ ವೈದಿಕ ಯಜ್ಞಗಳಲ್ಲಿ ಒಂದಾಗಿದೆ. ದೇವಿ ಪ್ರತ್ಯಂಗಿರಾ ಅನುಗ್ರಹಕ್ಕಾಗಿ ಈ ಹೋಮವನ್ನು ನೆರವೇರಿಸಲಾಗುತ್ತದೆ.
ಶಾಸ್ತ್ರಗಳ ಪ್ರಕಾರ ದುಷ್ಟಶಕ್ತಿಗಳ ನಿವಾರಣೆ, ಶತ್ರುಬಾಧೆ ಶಮನ, ರಾಷ್ಟ್ರ ರಕ್ಷಣೆ ಹಾಗೂ ರೈತರಿಗೆ ಉತ್ತಮ ಮಳೆ-ಬೆಳೆ ಲಭಿಸುವ ಸಂಕಲ್ಪದಿಂದ ಈ ಯಜ್ಞವನ್ನು ಆಶ್ರಮದ ಸಂಪೂರ್ಣ ವೆಚ್ಚದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಹೋಮದಲ್ಲಿ ವೇದಬ್ರಹ್ಮ ಶ್ರೀ ಗುರುಮೂರ್ತಿ ದೇವರು (ಸಾಲೋಟಗಿ), ಶ್ರೀ ಸಿದ್ಧಯ್ಯ ಶಾಸ್ತ್ರಿಗಳು (ರಾಯಚೂರು), ವೀರಭದ್ರ ಶಾಸ್ತ್ರಿ, ವಿನಯ ಶಾಸ್ತ್ರಿ ಸೇರಿದಂತೆ ಹಲವು ವೇದಪಂಡಿತರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರು, ಪಟ್ಟಣದ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 