ಪ್ರಗತಿಗೆ ವಿದ್ಯಾರ್ಥಿ ಚಳುವಳಿ ಬೆಳೆಯಬೇಕು: ಕಾಗದಗಾರ

ಲೋಕದರ್ಶನವರದಿ

ರಾಣೇಬೆನ್ನೂರು09: ಪ್ರಗತಿಪರವಾದ ವಿದ್ಯಾರ್ಥಿ ಚಳುವಳಿ ಬೆಳೆಯಬೇಕು. ಆಳುವ ವರ್ಗ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು, ವಿದ್ಯಾರ್ಥಿ-ಯುವಜನರು-ಸಾಹಿತಿ-ಕಲಾವಿದರ ಮೇಲು ಇಂದಿನ ಪ್ರಭುತ್ವ ದಾಳಿ ಮಾಡುತ್ತಿರುವುದು ಖಂಡನೀಯ ಎಂದು ಸ್ಥಳೀಯ ಕಾಗದ ಸಾಂಗತ್ಯ ವೇದಿಕೆಯ ಕಲಾವಿದ ನಾಮದೇವ ಕಾಗದಗಾರ ಹೇಳಿದರು.

  ಶನಿವಾರ ನಗರದ ಶಿಕ್ಷಕರ ಭವನದಲ್ಲಿ ಸಕರ್ಾರಿ ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ಗಳಿಗೆ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಹಾಗೂ ತಾಲ್ಲೂಕಿನ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ನಡೆಸಿದ ಎಸ್ಎಫ್ಐನ 6 ನೇ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ಭಾರತ ವಿದ್ಯಾಥರ್ಿ ಫೆಡರೇಷನ್ ದೇಶದ ಸ್ವಾತಂತ್ರ್ಯ ಚಳುವಳಿಯ ಹಾಗೂ ಅಭ್ಯಾಸ, ಹೋರಾಟ ಮತ್ತು ತ್ಯಾಗದ ಪರಂಪರೆ ಹೊಂದಿರುವ ದೇಶದ ಅತೀದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದರು.

  ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳು ಪ್ರಾರಂಭಗೊಂಡರೆ ಜಿಲ್ಲೆಯ ರೈತ ಮಕ್ಕಳಿಗೆ ಸ್ಥಳೀಯವಾಗಿ ಕೆಲಸ ಸಿಗುವಂತಾಗುತ್ತದೆ. ಆದ್ದರಿಂದ ಕೃಷಿಯಾಧಾರಿತ ಕೈಗಾರಿಕೆಗಳು ಪ್ರಾರಂಭವಾಗಬೇಕು. 

          ದೇಶದಲ್ಲಿ ವಿದ್ಯಾರ್ಥಿ-ಯುವಜನರ ಮೇಲೆ ಪ್ರಭುತ್ವದ ದಾಳಿ ಪೂರ್ವಯೋಜಿತವಾಗುತ್ತಿದೆ. ಶುಲ್ಕ ಕಡಿಮೆ ಮಾಡಲು ಹೊರಾಡುವ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸಕರ್ಾರ ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದರು.

  ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೋವಿ ಪ್ರಸ್ತಾವಿಕವಾಗಿ ಮಾತನಾಡಿದರು, ವಕೀಲರಾದ ಮೃತ್ಯುಂಜಯ ಗುದಿಗೇರ ಕಾರ್ಯಕ್ರಮ ಕುರಿತು ಮಾತನಾಡಿದರು. ರೈತ ಮುಖಂಡರಾದ ಕೃಷ್ಣಮೂತರ್ಿ ಲಮಾಣಿ, ಪ್ರಮೋದ ಮುದ್ದಿ, ಜ್ಯೋತಿ ಪೋಲಿಸ್ಗೌಡ್ರ ಹಾಗೂ ಡಿವೈಎಫ್ಐ ಮುಖಂಡರಾದ ಬೀರೇಶ್ ಹೀಲದಹಳ್ಳಿ ಸೇರಿದಂತೆ ಮತ್ತಿತರರು  ಪಾಲ್ಗೊಂಡಿದ್ದರು.