ಅಂಚೆ ಇಲಾಖೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ: ಪ್ರಭಾಕರ

ಕೊಪ್ಪಳ: ಕುಕನೂರ ತಾಲೂಕಿನ ಮಸಬಹಂಚಿನಾಳದಲ್ಲಿ ಸಂಪೂರ್ಣ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಮ ಸಂಪೂರ್ಣ ಸುಕನ್ಯಾ ಖಾತೆ ಗ್ರಾಮ ಹಾಗೂ ಸಂಪೂರ್ಣ ಅಂಚೆ ಉಳಿತಾಯ ಗ್ರಾಮಗಳ ಉದ್ಘಾಟನೆ ಹಾಗೂ ಘೋಷಣಾ ಸಮಾರಂಭವನ್ನು  ತಾಲೂಕ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭಾಕರ ಆಚಾರ ಉದ್ಘಾಟಿಸಿದರು. 

ಪ್ರಭಾಕರ ಆಚಾರ ಅವರು ಮಾತನಾಡುತ್ತಾ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಅತ್ಯಂತ ಸಮೀಪವಿರುವ ಇಲಾಖೆಯಾಗಿದೆ. ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಇಲಾಖೆಯಾಗಿದೆ ಎಂದರು. 

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಶ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಮುಖ್ಶ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಅಂಚೆಯಣ್ಣನಿಗೆ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಪೂಜ್ಶನೀಯ ಸ್ಥಾನವಿದೆ. ನಿವೃತ್ತಿಯ ದಿನವೇ ಪೆನ್ಸ್ಶನ್ ನೀಡುವ ಏಕೈಕ  ಇಲಾಖೆ ಇದಾಗಿದೆ.ಅತ್ಯಂತ ಪ್ರಾಮಾಣಿಕ ಇಲಾಖೆ ಎಂಬ ಹೆಗ್ಗಳಿಕೆ ಇದಕ್ಕಿದೆ ಎಂದರು. 

ಅಂಚೆ ಇಲಾಖೆಯ ಪಿ.3 ಬ್ರ್ಯಂಚಿನ ಅಧ್ಯಕ್ಷರಾದ ಜಿ.ಎನ್.ಹಳ್ಳಿ ಅವರು ಮಾತನಾಡುತ್ತಾ  ಅಂಚೆ ಇಲಾಖೆ ಇಂದು ಬ್ಶಾಂಕಾಗಿ ವಿಮಾ ಇಲಾಖೆಯಾಗಿಯೂ ಕೆಲಸ ಮಾಡುತ್ತಿದೆ ಎಂದರು. ಅಂಚೆ ಇಲಾಖೆಯ  ಎ.ಎಸ್.ಪಿ.ಯಾದ ಆರ್.ವಾಯ್.ಮಧುಸಾಗರ ಅವರು ಮಾತನಾಡುತ್ತಾ;  ಸಾರ್ವಜನಿಕರು ಇಲಾಖೆಯ ಸೌಲಭ್ಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. 

ಅಂಚೆ ಇಲಾಖೆಯ ನಿರೀಕ್ಷಕರಾದ ಷಣ್ಮುಖಪ್ಪ ಶಿರಹಟ್ಟಿ ಅವರು ಮಾತನಾಡುತ್ತಾ ಅಂಚೆ ಇಲಾಖೆಯಲ್ಲಿ ಸುಕನ್ಶಾ ಸಮೃದ್ಧಿ ಯೋಜನೆಯಂತಹ ಹಲವಾರು ಯೋಜನೆಗಳು ತುಂಬ ಉಪಯುಕ್ತವಾಗಿವೆ. ಈ ಗ್ರಾಮ ಸಂಪೂರ್ಣ ವಿಮಾ ಗ್ರಾಮವಾಗಿರುವುದು ಹೆಮ್ಮೆಯ ಸಂಗತಿ ಎಂದರು. 

ಬಿ.ವಿ.ಅಂಗಡಿ ಹನುಮಂತರಾವ ಕುಲಕಣರ್ಿ  ಬೀರಪ್ಪ ಕರಿಗಾರ ಈಶಪ್ಪ ಅಂಗಡಿ ನಿಂಗಪ್ಪ ಗೋಡಿಕಾರ ಹನುಮಪ್ಪ ಸೋಂಪೂರ ಎಂ.ಎಸ್.ಬಣಕಾರ;ಡಿ.ಎಂ.ದ್ರಾಕ್ಷಿ ಅಶೋಕ ಮಳ್ಳನ್ನವರ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಅಂಚೆ ಇಲಾಖೆಯ ನೀಲಕಂಠಯ್ಶ ಹಿರೇಮಠ ಹುಚ್ಚೀರಪ್ಪ ತಳವಾರ ವಿ.ಎಸ್.ಗಣಾಚಾರ ಸುಮಾ ದೇವರಮನಿ ಡಿ.ಮಂಜುನಾಥ; ವೀಣಾ ಕೆಂಬಾವಿ ಅನಾಳೆಪ್ಪ ಬಳ್ಳಾರಿ ಮಂಜುನಾಥ ಹಿರೇಮಠ ಬಸವರಾಜ ಮೇಟಿ ರಾಮಣ್ಣ ದೇವರಮನಿ ಇವರನ್ನು ಸನ್ಮಾನಿಸಲಾಯಿತು. ಮಹಮ್ಮದ ರಪಿ ಪ್ರಾಥರ್ಿಸಿದರು. ಸಕ್ರಪ್ಪ ಹೂಗಾರ ನಿರೂಪಿಸಿ ವಂದಿಸಿದರು.