ಪಿಡಿಓ ವರ್ಗಾವಣೆಯಲ್ಲಿ ನಿಯಮ ಉಲ್ಲಂಘಿಸಿಲ್ಲ: ಸಿಇಓ ಸ್ಪಷ್ಟನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳನ್ನು ವಗರ್ಾವಣೆ ಮಾಡುವಲ್ಲಿ ಸರಕಾರದ ನಿಯಮವನ್ನು ಉಲ್ಲಂಘಿಸಿಲ್ಲವೆಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಸ್ಪಷ್ಟ ಪಡಿಸಿದ್ದಾರೆ.

   ಸರಕಾರದ ಆದೇಶದನ್ವಯ ಶೇ.6ರ ಅನುಪಾತದಲ್ಲಿ ಪಿಡಿಓಗಳನ್ನು ವಗರ್ಾವಣೆ ಮಾಡಲಾಗಿದೆ. ಯಾವುದೇ ರೀತಿಯ ನಿಯಮ ಉಲ್ಲಂಘಿಸಿಲ್ಲ. 

 ಸರಕಾರದ ನಿಯಮ ಮೀರಿ ಪಿಡಿಓಗಳ ವಗರ್ಾವಣೆ ಮಾಡಿರುವುದಾಗಿ ಜಿ.ಪಂ ಸದಸ್ಯೆ ಶೋಭಾ ವೆಂಕಣ್ಣ ಬಿರಾದಾರಪಾಟೀಲ ಆರೋಪಿಸಿರುವುದು ಸತ್ಯಕ್ಕೆ ದೂರವಾದುದು. 

     ಈ ಹಿಂದೆ ನಿಯೋಜನೆಗೊಂಡ 105 ಪಂಚಾಯತ ಅಭಿವೃದ್ದಿ ಅಧಿಕಾರಿಗಳನ್ನು ಹಾಗೂ 45 ಕಾರ್ಯದಶರ್ಿಗಳನ್ನು ಮೂಲ ಸ್ಥಾನಕ್ಕೆ ಸರಕಾರದ ಆದೇಶದಂತೆ ಮರಳಿ ನಿಯೋಜಿಸಲಾಗಿದೆ. ನಿಮಯ ಮೀರಿ ವಗರ್ಾವಣೆ ಮಾಡಲು ಒತ್ತಡ ಬಂದಿದ್ದರು ಸಹ ಯಾವುದೇ ಒತ್ತಡಕ್ಕೆ ಒಳಗಾಗದೇ ಸರಕಾರಿ ನಿಯಮದಡಿ ಪಾರದರ್ಶಕವಾಗಿ ವಗರ್ಾವಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.