ನೇಟಾಫಿಮ್ ಭಾರತೀಯ ಕೃಷಿಕರಿಗೆ ನೀವಾವರಿ ತಂತ್ರಜ್ಞಾನದಲ್ಲಿ ಅತ್ಯುನ್ನತ ಹೊಸತನವನ್ನು ತರಲಿದೆ.
ನೆಟಬೀಟ್ ಬುದ್ಧಿಮತ್ತೆ ಆಧಾರಿತ ನೀರಾವರಿ ಕುರಿತಾದ ಪ್ರಪ್ರಥಮ ವಿಧಾನವಾಗಿದೆ.
ಸ್ಮಾರ್ಟಫೋನ ಮೂಲಕವಾಗಿ ಬಹಳ ಸುಲಭವಾದ ವಿಶ್ಲೇಷಣೆ ಮಾಡಬಹುದಾದ ಸ್ವಯಂಬಾಲಿತವಾಗಿ ನಿರ್ವಹಿಸಬಹುದಾದಂಥ ವಿಧಾನ ಇದಾಗಿದೆ.
ಬೆಳಗಾವಿ 14: ನೆಟ್ಬೀಟ್ ವಿಧಾನವು ಸಕರ್ಾರಿ ಕಾರ್ಯಕ್ರಮವಾಗಿ, ಪ್ರಪ್ರಥಮವಾಗಿ ಭಾರತದಲ್ಲಿ ನೇಟಾಪೀಮ್ ಮ್ಯಾನೆಜಿಂಗ ಡಾಯರೆಕ್ಟರ ಗೌರವಾನ್ವಿತ ರಣಧೀರ ಚವ್ಹಾಣ ಇವರ ಹಾಗೂ ಇಸ್ರೇಲಿನ ನೇಟಾಪೀಮ್ನ ಡಾಯರೆಕ್ಟರ ಮಾನ್ಯ ಲಿಯೋರ ಡೋರೋನ ಹಾಗೂ ನೇಟಾಪೀಮ್ ಕಮಶರ್ಿಯಲ್ ಬಿಜಿನೆಸ್ ಡೆವಲಪಮೆಂಟನ ಮುಖ್ಯಸ್ಥ ಇಝಾರ ಗಿಲಾಡ, ಇವರುಗಳ ಸಮ್ಮುಖದಲ್ಲಿ ಪ್ರಾರಂಭಗೊಂಡಿತು.
ರಣಧೀರ ಚವ್ಹಾಣ, ಪತ್ರಿಕಾಕರ್ತರೊಡನೆ ಮಾತನಾಡುತ್ತ, "ನೇಟಾಪೀಮ" ಅತ್ಯಾಧುನಿಕ ನಾವಿನ್ಯ ಪೂರ್ಣ ಕಂಪನಿಯಾಗಿದ್ದು, ಅತೀವ ಕಡಿಮೆ ಪ್ರಮಾಣದ ಸಂಪನ್ಮೂಲಗಳಲ್ಲಿ ಬಹುಹೆಚ್ಚಿನ ಪ್ರಮಾಣದಲ್ಲಿ, ಪ್ರಪಂಚದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ನಿರಂತರವಾಗಿ ಸೃಜನಾತ್ಮಕ ತಂತ್ರಜ್ಞಾನಿಯ ಸೂತ್ರಗಳ ಬಳಕೆಗಾಗಿ ನೋಡುತ್ತಾ ಇರುತ್ತದೆ ಎಂದು ಹೇಳಿದರು, ಹಾಗೂ ನೇಟ್ಬಿಟ್ ತಾಳಿಕೆ ಬರುವಂಥ ಹಾಗೂ ನಾವಿನ್ಯಪೂರ್ಣವಾದ ವೇದಿಕೆಯನ್ನು ಸಣ್ಣ ಹಾಗೂ ದೊಡ್ಡ ರೆೈತಾಪಿಗಳಿಗೆ ಕಡಿಮೆ ಸಂಪನ್ಮೂಲಗಳಲ್ಲಿ ಹೆಚ್ಚು ಭರವಸೆಯನ್ನೂ ಕೊಡುವಂಥಹದಾಗಿದೆ ಎಂದು ಹೇಳಿದರು.
ಲಿಯೋರ್ ಡೋರೋನ್ ಮಾತನಾಡುತ್ತ, ನೆಟಬೀಟ ನೀರಾವರಿ ವ್ಯವಸ್ಥಾಪನೆಯು, ಬೌದ್ಧಿಕತೆ ಆಧಾರದ ಮೇಲೆ ರೂಪಗೊಂಡ ವ್ಯವಸ್ಥೆಯಾಗಿದೆ ಎಂದರು. ಇದು ನೀರಾವರಿಯ ಸಕಲ ಪರಿಹಾರ ಹಾಗೂ ಗೊಬ್ಬರ ನಿಯಂತ್ರಣ ಡಿಎಸ್ಎಸ್ ಮಾದರಿಗಳನ್ನೊಳಗೊಂಡ ನಿರ್ವಹಣೆ ಹಾಗೂ ವ್ಯವಸ್ಥೆಗಳನ್ನೊಳಗೊಂಡಿದೆ. ಹವಾಮಾನ ಮುನ್ಸೂಚನೆ ಎಲ್ಲಿಯೇ ಹಾಗೂ ಯಾವಾಗ ಆದರೂ ಮೋಡ ಪ್ರವೇಶಾಲೆ ಮುಂತಾದವುಗಳ ಕುರಿತು ಮಾತನಾಡಿದರು.
ಇಂದು ಸಂಭವಿಸುತ್ತಿರುವ ನಿರಂತರ ನೀರು ಹಾಗೂ ಆಹಾರ ಭದ್ರತೆಯ ಆವ್ಹಾನ್ನಗಳನ್ನು, ಅಮೂಲ್ಯ ಸಂಪನ್ಮಾಲಗಳು ನಸಿಸಿ ಹೋಗುವಿಕೆ, ಅಸಮರ್ಪಕ ನೀರಿನ ಬಳಕೆ-ಯಂಥ ಸನ್ನಿವೇಶದಲ್ಲಿ ಬೌದ್ಧಿಕತೆಯಿಂದ ರೂಪಗೊಂಡ ನೇಟಾಫಿಮ್ ಅತ್ಯುಪಯುಕ್ತ ವಿಧಾನವಾಗಿದೆ ಎಂದು ಇಝಾರ ಗಿಲಾಡ ಹೇಳಿದರು. ನೆಟ್ಬೀಟ್ ರೈತಾಪಿ ಜನಕ್ಕೆ ಸಮಯಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ, ವನಸ್ಪತಿ, ಮಣ್ಣು, ಹವಾಮಾನ ಪರಿಸ್ಥಿತಿ ಮುಂತಾದವುಗಳನ್ನು ಪ್ರತ್ಯಕ್ಷ ಹಾಗೂ ಬೇರೆ ಮೂಲಗಳಿಂದ ಸಂಗ್ರಹಿಸಿದ ಅಂಕಿ-ಸಂಖ್ಯಗಳನ್ನು ಒದಗಿಸುತ್ತದೆ. ಈ ಅಂಕಿ-ಸಂಖ್ಯೆಗಳನ್ನು ಮೋಡದಲ್ಲಿ ವಿಶ್ಲೇಷಿಸಿ ಬೆಳೆ ಮಾದಾರಿಗಳನ್ನು ಆಧರಿಸಿ 50 ವರ್ಷಗಳಲ್ಲಿನ ನೇಟಾಫಿಮ್ ಕೃಷಿವಿದ್ಯೆ, ಹಾಗೂ ಜಲಚಲನಶಾಸ್ತ್ರಗಳ ಕುರಿತು ತನ್ನ ವಿಶಿಷ್ಠ ಅನುಭವ ಹಾಗೂ ಸಂಶೋಧನೆ ನೀಡುತ್ತದೆ.
ನೆಟ್ಬೀಟ್ ಬೌದ್ಧಿಕ ಆಧಾರಿತ ನೀರಾವರಿ ವ್ಯವಸ್ಥೆಯ ವಿಷಯವಾಗಿದ್ದು, ಕೃಷಿಕರಿಗೆ ಸರಾಗವಾಗಿ ಸ್ಮಾರ್ಟಫೋನ ಮೂಲಕವಾಗಿ ಕೃಷಿ ನಿರ್ವಹಣೆ, ವಿಶ್ಲೇಷಣೆ ಯಾವಾಗ ಬೇಕಾದಲ್ಲಿ ನಿರ್ವಹಿಸುವಲ್ಲಿ ಸಹಾಯಕವಾಗಿದೆ. ನೆಟ್ಬೀಟ್ ಕೃಷಿ ಹಾಗೂ ಸತ್ವ ವ್ಯವಸ್ಥಾಪನೆಗಳನು ಸರಳೀಕರಣಗೋಳಿಸಿದೆ. ಗೊಂದಲಮಯ ವಿಧಾನಗಳಲ್ಲಿ ಸಹ ಸಹಾಯ ಸೂಚಿಸುತ್ತದೆ. ನೈಜ ಕೃಷಿಕನನ್ನು ದೃಷ್ಟಿಯಲ್ಲಿರಿಸಿಕೊಂಡು, ನೇಟಾಫಿಮ್ ಕಾರ್ಯನಿರ್ವಹಿಸುತ್ತದೆ.
ನೆಟಾಫಿಮ್ ಇಂಡಿಯಾ ಹಲವಾರು ಕೊಡುಗೆಗಳಾದಂಥ ಮೈಕ್ರೊ ಇರಿಗೇಶನ್, ಗ್ರಿನ ಹೌಸ, ಫೀಲ್ಡ ಆಟೋಮೇಶನ್ ಸಾಲೂಶನ್ ಕೊಡಮಾಡಿ, ಮೂರು ಉತ್ಪಾದನಾ ಘಟಕಗಳನ್ನೂ ಸ್ಥಾಪಿಸಿ-1000 ಉದ್ಯೋಗಿಗಳನ್ನು ಹಾಗೂ 1500 ಚಾನೆಲ್ ಪಾರ್ಟನರ್ಸ ನೇಮಕಮಾಡಿ ಇಡೀ ಉಪಖಂಡದಲ್ಲಿ ಕಾಯರ್ಾಚರಣೆ ನಡೆಯಿಸುವಂತೆ ಮಾಡಿದೆ. ಕಳೆದ 50 ವರ್ಷಗಳಲ್ಲಿ ಡ್ರಿಪ್ ಇರಿಗೇಶನ್ ತಂತ್ರಜ್ಞಾನವನ್ನು ಜಾರಿಗೊಳಿಸಿದ ಸಂಭ್ರಮವನ್ನು ಆಚರಿಸುತ್ತಾ ಇದೆ.
ನೇಟಾಫಿಮ್ ಇಸ್ರೇಲ ದೇಶದ ನೀರಾವರಿ ಕಂಪನಿಯವಾಗಿದ್ದು, ಭಾರತೀಯ ಕೃಷಿಕರಿಗೆ ಅತ್ಯಂತ ಹೊಸತನವನ್ನೊಳಗೊಂಡ ನೀರಾವರಿ ತಂತ್ರಜ್ಞಾನ ಒದಗಿಸುವಂಥ ತಂತ್ರಜ್ಞಾನವಾಗಿದೆ. ಅತೀವ ಕಡಿಮೆ ನೀರು ಬಳಕೆಯಿಂದ ಹೆಚ್ಚು ಕೃಷಿ ಉತ್ಪಾದನೆಯನ್ನು ನಿಗಧಿತ ಸಮಯದಲ್ಲಿ ಮಾಡಬಹುದಾದ ವಿಧಾನವಾಗಿದೆ.