ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಸಹಕಾರಿ

ಲೋಕದರ್ಶನ ವರದಿ

ಬೈಲಹೊಂಗಲ 26:  ವಿದ್ಯಾಥರ್ಿಗಳಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್.ಎಸ್.ಎಸ್.ಶಿಬಿರ ಸಹಕಾರಿಯಾಗಿದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು.

ಪಟ್ಟಣದ ಕೆ.ಆರ್.ಸಿ.ಇ.ಎಸ್. ಮಹಾವಿದ್ಯಾಲಯ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಶ್ರಯದಲ್ಲಿ ತಾಲೂಕಿನ ದತ್ತು ಗ್ರಾಮ ಸುಕ್ಷೇತ್ರ ಬೈಲವಾಡದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾಥರ್ಿ ಜೀವನ ಅಮೂಲ್ಯವಾಗಿದ್ದು ಕಷ್ಟಪಟ್ಟು ಅಧ್ಯಯನ ಮಾಡುವುದರ ಜೊತೆಗೆ ಸಾಮಾಜಿಕ ಕಳಕಳಿ, ದೇಶಪ್ರೇಮ, ಸಮಾಜ ಸೇವೆ ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿಮರ್ಿಸುವಲ್ಲಿ ಕಂಕಣಬದ್ಧರಾಗಬೇಕೆಂದರು.

ಡಾ.ರಾಜಶೇಖರ ಹುರಕಡ್ಲಿ, ಆರ್.ಬಿ.ಹಾಲಯ್ಯನವರ ಮಾತನಾಡಿ, ಗ್ರಾಮೀಣ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದರು. ರುದ್ರಯ್ಯ ಹಿರೇಮಠ ಉದ್ಘಾಟಿಸಿದರು. ಪ್ರಾಚಾರ್ಯ ಜಿ.ಕೆ.ಗಾಂವಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ದೇಶದ ಸಂಸ್ಕೃತಿಯತ್ತ ಒಲವು ತೋರವುದು ಅವಶ್ಯವಾಗಿದೆ ಎಂದರು.

ವೇದಿಕೆ ಮೇಲೆ ಗ್ರಾಪಂ.ಅಧ್ಯಕ್ಷೆ ದೊಡ್ಡವ್ವ ಗಿರೆಪ್ಪಗೌಡರ, ಚನ್ನಬಸಪ್ಪ ಗಾಡದ, ಬಸಪ್ಪ ಕಲ್ಲಪ್ಪಗೌಡರ, ಮೋಹನಾಯ್ಕ ರಾಮಣ್ಣ, ನಾಗನಗೌಡ ಪಾಟೀಲ ಮುಂತಾದವರು ಇದ್ದರು. ಎನ್ಎಸ್ಎಸ್ ಅಧಿಕಾರಿ ವಿ.ಎಸ್.ಗಣಾಚಾರಿ ಸ್ವಾಗತಿಸಿದರು. ಗಂಗಾಧರ ಹುಣಶೀಕಟ್ಟಿ ನಿರೂಪಿಸಿದರು. ವಿದ್ಯಾ ಗಂಗಣ್ಣವರ ವಂದಿಸಿದರು.

ಶಿಬಿರದ ಎರಡನೇ ದಿನದ ಕಾರ್ಯಕ್ರಮ ಅಂಗವಾಗಿ ಆರೋಗ್ಯ ಜಾಥಾ: ಶಿಬಿರದ ಅಂಗವಾಗಿ ಆರೋಗ್ಯ ಜಾಥಾ ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಸಂಚರಿಸಿ ಮಾರಕರೋಗಗಳು, ಸಾಮಾಜಿಕ ಪಿಡುಗುಗಳ ಕುರಿತು ಜನಜಾಗೃತಿ ಮೂಡಿಸಿದರು. ಪುರಸಭೆ ಪರಿಸರ ಅಭಿಯಂತರ ಸತೀಶ ಕಜ್ಜಿಡೋಣಿ ಮಾತನಾಡಿ, ಘನತ್ಯಾಜ್ಯವಸ್ತುಗಳನ್ನು ಸಮಪರ್ಕವಾಗಿ ಸಂಸ್ಕರಣೆ ಮಾಡದೇ ವಿಲೇವಾರಿ ಮಾಡಿದ್ದಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. 

ಸುರೇಶ ಪಾಟೀಲ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ ನಿಯಮಗಳ ಕುರಿತು ಮಾಮರ್ಿಕವಾಗಿ ವಿವರಿಸಿದರು.   ಪ್ರೋ.ವಿ.ಎಸ್.ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗಾಧರ ಹುಣಶೀಕಟ್ಟಿ, ವಿದ್ಯಾ ಗಂಗಣ್ಣವರ, ಸಂತೋಷ ಹಿರೇಮಠ, ಕಿರಣ ಮಠಪತಿ ಇದ್ದರು.  ತ್ರೀವೇಣಿ ಪಾಟೀಲ ಸ್ವಾಗತಿಸಿದರು, ರಶ್ಮಿ ಪಾಟೀಲ ನಿರೂಪಿಸಿದರು. ದೀಪಿಕಾ ಮಳಿಮಠ ವಂದಿಸಿದರು.