ಕಿಡ್ನ್ಯಾಪ್ ಆಗಿ ಹತ್ಯೆಯಾದ ಬಾಲಕಿಯ ಮನೆಗೆ ಸಚಿವೆ ಭೇಟಿ

ಲೋಕದರ್ಶನ ವರದಿ

ಚಿಂಚಲಿ 20: ಮನೆ ಮುಂದೆ ಆಟವಾಡುತ್ತಿದ್ದಾಗ ಕಿಡ್ನ್ಯಾಪ್ ಆಗಿದ ಬಳಿಕ ಹತ್ಯೆಯಾದ ಅಪ್ರಾಪ್ತ ಬಾಲಕಿಯ ಮನೆಗೆ ಇಂದು ಮುಂಜಾನೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಅವರು ಸಮೀಪದ ಪರವಾನಂದ ವಾಡಿ ಗ್ರಾಮದ ಬಸವೇಶ್ವರ ನಗರದ ತೋಟದ ಕೊಲೆಯಾದ ಬಾಲಕಿಯ ಮನೆಗೆ ಭೇಟಿ ನೀಡಿದ ಸಚಿವರು ಬಾಲಕಿ ತಂದೆ ತಾಯಿ ಹಾಗೂ ಸಂಬಂಧಿಕರಿಗೆ ಧೈರ್ಯ ಹೇಳಿದರು. ನಂತರ ಮಾತನಾಡಿ ಅವರು ಬಾಲಕಿ ಲಕ್ಷ್ಮೀಗೆ ಅನ್ಯಾಯವಾಗಿದೆ. ಅವಳ ಸಾವಿಗೆ ನಾವುಗಳು ನ್ಯಾಯ ಕೊಡಿಸುವ ಜವಾಬ್ದಾರಿ ಸರಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲೆ ಇದೆ. ಇಲಾಖೆಯು ಪೋಲಿಸ್ ಅಧಿಕಾರಿಗಳೊಂದಿಗೆ ನಿಂರತರವಾಗಿ ಸಂಪರ್ಕ ಇಟ್ಟುಕೊಂಡು ಮಾಹಿತಿಯನ್ನು ಪಡೆಯುತ್ತಿದೆ. ಆರೋಪಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಸೂಚಿಸಲಾಗುತ್ತಿದೆ ಎಂದರು. ಕೊಲೆಯಾದ ಬಾಲಕಿಯ ತಾಯಿ ಸಚಿವರ ಕಾಲು ಹಿಡಿದು ನನ್ನ ಮಗಳಿಗೆ ಅನ್ಯಾಯವಾಗಿದೆ ಅವಳಿಗೆ ನ್ಯಾಯ ಕೊಡಿಸಿ. ಮುಂದೆ ಮತ್ಯಾವ ಮಕ್ಕಳಿಗೂ ಹೀಗಾಗಬಾರದು. ಇದೆ ಕೊನೆಯಾಗಬೇಕು ಎಂದು ಪದೇ ಪದೇ ಸಚಿವರ ಕಾಲಿಗೆ ಕೊಲೆಯಾದ ಲಕ್ಷ್ಮೀಯ ತಾಯಿಯ ಹಾಗೂ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.

ಬಳಿಕ ಸಚಿವೆ ಬಾಲಕಿಯ ಕುಟುಂಬಕ್ಕೆ ನೀಡುವುದಕ್ಕೆ ಚಕ್ ತಗೆದುಕೊಂಡು ಬಂದಿದರು ಅದನ್ನು ಕುಡಚಿ ಶಾಸಕ ಪಿ. ರಾಜೀವ್ ಅವರು ಪಡೆದುಕೊಂಡು ಕುಟುಂಬಸ್ಥರೊಂದಿಗೆ ಶಾಂತವಾಗಿ ಮಾತನಾಡಿ ಸಮಾಧನ ಹೇಳಿ ಚಕ್ ನೀಡಿದರು. ತಾಲೂಕಿನ ಸ್ತ್ರೀಶಕ್ತಿ ಸಂಘ, ಹಾಗೂ ಆಶಾ ಕಾರ್ಯಕತರು, ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರು ಸೇರಿ ಹೀನ ಕೃತ್ಯ ಮಾಡಿದ ಆರೋಪಿಗೆ ಅತೀ ಶಿಘ್ರದಲ್ಲಿಯೇ ಅತ್ಯಂತ ಕಠಿನ ಕ್ರಮ ಕೈಗೊಳ್ಳಿ ಅವನಿಗೆ ಗಲ್ಲು ಶಿಕ್ಷೆವಾಗಬೇಕು ಮತ್ತು ಈ ಕೃತ್ಯೆಕ್ಕೆ ಪ್ರೋತ್ಸಾಹಿಸಿದ ಆರೋಪಿಯ ಸಂಬಂದಿಕರನ್ನು ಗ್ರಾಮದಿಂದ ಗಡಿ ಪಾರಿ ಮಾಡಬೇಕೆಂದು ಒತ್ತಾಯಿಸಿ ಮಹಿಳಾ ಜಾಗೃತಿ ಮತ್ತು ರಕ್ಷಣಾ ಸಂಘದಿಂದ ಸುರ್ವಣ ಬಡಿಗೇರ  ಸಚಿವೆ ಶಶಿಕಲಾ ಜೊಲ್ಲೆ ಅವರುಗೆ ನೀಡಿದರು.

ರಾಯಬಾಗ ಶಾಸಕ ಡಿ. ಎ.ಎಮ್. ಐಹೊಳೆ, ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಮಂಡಳಿ ಅಧ್ಯಕ್ಷ ಪಿ. ರಾಜೀವ್ ಅವರು ಲಕ್ಷ್ಮೀ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನೀಮ ದುಖದಲ್ಲಿ ನಾವುಗಳು ಸಂಪೂರ್ಣವಾಗಿ ಬಾಗಿಯಾಗಿದ್ದೆಂದು ಹೇಳಿದರು. ಸಚಿವರಿಗೆ ಸಮಾಜ ಸೇವಕರಾದ ಬಸವರಾಜ ಸನದಿ, ಸಾಂತು ಅಂಬಿ, ರಾವಸಾಬ ಗಂಡೋಶಿ, ನಿಂಗಪ್ಪಾ ಮುರಗನ್ನವರ, ಡಾ. ಕೌಲಗುಂಡ, ದಸಕೀರ ಕಾಗವಾಡೆ, ಸದಾಶಿವ ದಳವಾಯಿ, ರಾಜು ಐತವಾಡಿ, ಮಾರುತಿ ಕಲ್ಯಾಣಕರ, ಅಥಣಿ ಡಿವೈಎಸ್ಪಿ ಪಿ. ಎಸ್. ಗೀರಿಶ, ಕುಡಚಿ ಪಿಎಸ್ಐ ಗೀರಿಮಲ್ಲಪ್ಪ ಉಪ್ಪಾರ, ಹಾಗೂ ಕುಡಚಿ, ರಾಯಬಾಗ ಹಾಗೂ ಹಾರೂಗೇರಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸೂಕ್ತವಾದ ಬಂದೋಬಸ್ತಿಯನ್ನು ಕೈಗೊಂಡಿದ್ದರು.