ನವದೆಹಲಿ, ಡಿ 6- ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಸರ್ಕಾರ ಕಾರ್ಯಕ್ಷಮತೆ ಆಧಾರಿತ ರಾಜಕೀಯದಲ್ಲಿ ತೊಡಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅವರು, ಎಲ್ಲ ವಲಯಗಳ ನೀತಿ ನಿರೂಪಕದೊಂದಿಗೆ ಚರ್ಚಿಸಿ ಭವ್ಯ ಭಾರತಕ್ಕಾಗಿ ಸರ್ಕಾರ ಕಾರ್ಯಕ್ಷಮತೆ ಆಧಾರಿತ ರಾಜಕೀಯ ಅನುಸರಿಸುತ್ತಿದೆ ಎಂದರು.
ಉತ್ತಮ ನೀತಿ ರೂಪಿಸಲು ಹೊಸ ಉಪಕ್ರಮಗಳ ಕುರಿತಂತೆಯೂ ಸರ್ಕಾರ ಚರ್ಚೆ ನಡೆಸಿದೆ ಎಂದು ಪ್ರಧಾನಿ ತಿಳಿಸಿದರು. ಹಿಂದಿನ ಸರ್ಕಾರದಂತೆ ಭರವಸೆಗಳ ರಾಜಕೀಯ ನಡೆಸದೇ ಉತ್ತಮ ಪ್ರದರ್ಶನದ ರಾಜಕೀಯ ತಂತ್ರವನ್ನು ತಮ್ಮ ಸರ್ಕಾರ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.