ಮಹಾಕುಂಭ ಮೇಳವು ಇಡೀ ಜಗತ್ತಿಗೆ ಎಚ್ಚರಿಕೆ ಮೂಡಿಸುವ ಕಾರ್ಯಕ್ರಮ
The Mahakumbh Mela is a wake-up call for the entire world.
ಗದಗ 17: ನಾಗಾಸಾಧುಗಳು ಪ್ರಯಾಗರಾಜ ಕ್ಷೇತ್ರದ ಮಹಾ ಕುಂಭಮೇಳವನ್ನು ಜಗತ್ತಿನ ಜನರು ನೋಡುವಂತೆ ಮಾಡಿದ್ದಾರೆ. ಮಹಾಕುಂಭ ಮೇಳವು ಇಡೀ ಜಗತ್ತಿಗೆ ಎಚ್ಚರಿಕೆ ಮೂಡಿಸುವ ಕಾರ್ಯಕ್ರಮ ಅದಾಗಿತ್ತು ಅದೇ ಸಂದೇಶವನ್ನು ತೆಗೆದುಕೊಂಡು ಬಂದಿರುವ ಸಹದೇವಾನಂದ ಗಿರಿ ಮಹಾರಾಜರು ಗದುಗಿನಲ್ಲಿ ಅತಿರುದ್ರ ಕುಂಭಮೇಳವನ್ನು ಮಾಡಿ ಮಹಾಕುಂಭದ ಒಂದು ಸ್ಯಾಂಪಲ್‌ನ್ನು ತೋರಿಸಲು ಇಲ್ಲಿಗೆ ಬಂದಿದ್ದಾರೆ ಎಂದು ಕಾಶಿ ಪೀಠದ ಚಂದ್ರಶೇಖರ ಭಗವತ್ಪಾದ ಶಿವಾಚಾರ್ಯರು ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಅತಿರುದ್ರ ಯಾಗ ಮಹಾಯಜ್ಞ ಸೇವಾ ಸಮಿತಿಯಿಂದ ನಡೆಯುತ್ತಿರುವ ಕಿರಿಯ ಕುಂಭಮೇಳದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಗದಗ ಮಹಾನಗರದಲ್ಲಿ ಇಲ್ಲಿಯವರೆಗೆ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ಜರುಗಿವೆ ಆದರೆ, ಈಗ ನಡೆಯುತ್ತಿರುವ ಕಿರಿಯ ಮಹಾಯಜ್ಞ ಹಾಗೂ ಕುಂಭಮೇಳ ಹಿಂದಿನ ಎಲ್ಲಾ ಕಾರ್ಯಕ್ರಮಗಳನ್ನು ಮೀರಿಸಿವೆ ಎಂದು ಹೇಳಿದರೆ ತಪ್ಪಾಗಲಾರದು ಮುಖ್ಯವಾಗಿ ಯಜ್ಞ ಎಂದರೆ ಭಗವಂತನಿಗೆ ಅರ್ಿಸುವ ಒಂದು ಪೂಜೆಯಾಗಿದೆ. ಸಾಮಾನ್ಯವಾಗಿ ಹಿಂದು ಸಂಸ್ಕೃತಿಯಲ್ಲಿ ನಾವು ಆರಾಧನೆ ಮಾಡುವ ದೇವತೆಗಳಿಗೆ ಹವಿಷ್ಯವನ್ನು ಕೊಡಬೇಕಾದರೆ ನೇರವಾಗಿ ಕೊಡಲು ಬರುವುದಿಲ್ಲ ಅದನ್ನು ಯಜ್ಞದ ರೂಪದಲ್ಲಿ ಕೊಡಬೇಕು ಎನ್ನುವುದು ವೈದಿಕ ಪರಂಪರೆ ಇದೆ.
ಆ ವೈದಿಕ ಪರಂಪರೆಯನ್ನು ಹಿಡಿದುಕೊಂಡು ನಾಗಸಾಧು ಸ್ವಾಮಿಗಳು ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತ ಬಹುಜನ ಹಿತಾಯ ಬಹುಜನ ಸುಖಾಯ ಎಂದು ಎಲ್ಲರ ಕಲ್ಯಾಣಕ್ಕಾಗಿ ಮಾಡಿರುವ ಕಾರ್ಯಕ್ರಮ ಇದಾಗಿದೆ. ಅತಿ ರುದ್ರಯಾಗ ಇದು ದೊಡ್ಡ ಯಾಗವಾಗಿದೆ ಅತಿ ರುದ್ರಯಾಗ ಗದಗ ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಿಲಾಗಿದೆ. ಈ ಕಾರ್ಯಕ್ರಮದಿಂದ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತ ಸಮೃದ್ಧಿಯಾಗಿ ಅನ್ನ ಬೆಳೆಯುತ್ತಾನೆ. ಜಗತ್ತು ಸುಖವಾಗಿ ಇರುತ್ತದೆ. ಈ ಕಾರ್ಯಕ್ರಮ ಬರಿ ಗದಗಿಗೆ ಮಾತ್ರವಲ್ಲದೆ ಇಡೀ ಜಗತ್ತಿನ ಜೀವಿಗಳ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಕ್ರಮವಾಗಿದೆ.
ಸಾಮಾನ್ಯವಾಗಿ ಯಾವುದೇ ಒಂದು ಕಾರ್ಯಕ್ರಮ ಜರುಗಬೇಕಾದರೆ ಒಂದು ಅರ್ಥದ ಬಲ ಬೇಕೇ ಬೇಕು ಸತ್ಕಾರ್ಯ ಮಾಡುವ ದಾನ ಬಹುಮೌಲ್ಯದಾಗಿದೆ. ಯಜ್ಞದಲ್ಲಿ ಅಹುತಿ ಮಾಡುವದು ಅಷ್ಟೇ ಅಲ್ಲದೆ, ಪ್ರತಿದಿನ 20,000ಕ್ಕೂ ಹೆಚ್ಚು ಜನರಿಗೆ ಅನ್ನಪ್ರಸಾದ ಸೇವನೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಸತ್ಕಾರ್ಯದ ಕೆಲಸವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಯಜ್ಞ ಸಮಿತಿಯ ಅಧ್ಯಕ್ಷ ಕಿರಣ ಭೂಮಾ, ಉಪಾಧ್ಯಕ್ಷ ಎಸ್.ಎಚ್. ಶಿವನಗೌಡ್ರ, ರವಿ ದಂಡಿನ, ರವಿ ಗುಜೀಕರ್ ರಮೇಶ ಸಜ್ಜಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 