ಲಾಕ್ಡೌನ್ ಎಫೆಕ್ಟ್ ಮಂಕಾದ ಗಣಿನಾಡಿನ ಆಭರಣ ವ್ಯಾಪಾರ

ಬಳ್ಳಾರಿ24: ಸುದೀರ್ಘ ಸಮಯದ ಲಾಕ್ ಡೌನ್ ಜಿಲ್ಲೆಯ ಆಭರಣ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 

ಪ್ರತಿ ರ್ಷ ಮಾಚರ್್ ತಿಂಗಳಲ್ಲಿ ಮದುವೆ ಸೀಜನ್ ಶುರುವಾಗುತ್ತಿತ್ತು. ಆದ್ರೆ, ಈ ಬಾರಿ ಸೀಜನ್ ಶುರುವಾಗೋ ಮುನ್ನವೇ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಹೆಚ್ಚು ವ್ಯಾಪಾರ ಆಗುವ ಸಮಯದಲ್ಲೇ ಆಭರಣದಂಗಡಿಗಳು ಮುಚ್ಚಿದ್ದವು. ಸದ್ಯ ನಾಲ್ಕನೆ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಆಭರಣ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.  

ಹೀಗಾಗಿ ಆಭರಣ ವ್ಯಾಪಾರ ಪುನರಾರಂಭವಾಗಿದೆ. ಅಂಗಡಿ ತೆರೆದ ಮೊದಲ ಹತ್ತು ದಿನಗಳ ಕಾಲ ಭಾರೀ ವಹಿವಾಟು ಆಗಿತ್ತು. ಆದ್ರೆ ಬರು ಬರುತ್ತಾ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದ್ದು, ಕೆಲ ಅಂಗಡಿಗಳು ಗ್ರಾಹಕರಿಲ್ಲದೆ ಬೀಕೋ ಎನ್ನುತ್ತಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳದಿರೋದೇ ನಮಗೆ ಆತಂಕ:ಲಾಕ್ ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆ ಆರಂಭದ ಕೆಲ ದಿನ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಆಭರಣ ಖರೀದಿಗೆ ಆಗಮಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿ ಬೀಳುತ್ತಿದ್ದರು. ಇದು ನಮಗೆ ಸ್ವಲ್ಪ ಮಟ್ಟಿನ ಆತಂಕ ತಂದಿದೆ ಎಂದು ನಗರದ ರೊದ್ದಂ ಜ್ಯುವೆಲ್ಲಸರ್್ ಮಾಲೀಕ ಗೋವರ್ಧನ ಹೇಳಿದ್ದಾರೆ. 

ಮಾಚರ್್ ತಿಂಗಳಲ್ಲಿ ಮದುವೆ ಸೀಝನ್ ಇರುತ್ತದೆ. ಈ ವೇಳೆ ಹೆಚ್ಚು ವ್ಯಾಪಾರ ಆಗುತ್ತದೆ. ಆದ್ರೆ ಈ ಬಾರಿ ಲಾಕ್ ಡೌನ್ ಇದ್ದಿದ್ದರಿಂದ ಸೀಝನ್ ಸಮಯದಲ್ಲಿ ಅಂಗಡಿಗಳು ಮುಚ್ಚಿದ್ದವು . ಇದು ನಮ್ಮ ವ್ಯವಹಾರದ ಮೇಲೆ ಭಾರೀ ಹೊಡೆದ ನೀಡಿದೆ ಎಂದಿದ್ದಾರೆ.