ಸಂಕೇಶ್ವರ : ನಗರದಲ್ಲಿ ಪ್ರಥಮ ಬಾರಿಗೆ ಬರುವ ಮಕರ ಸಂಕ್ರಾಂತಿ ದಿನದಂದ್ದು ದಿ.15 ರಂದು ಗಾಳಿಪಟ ಉತ್ಸವವು ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ನಡೆಯಲಿದೆ ಎಂದು ಪವನ ಕಣಗಲಿ ಹೇಳಿದರು.
ಸಮೀಪದ ಕಮತನೂರಿನ ಲಿಟಲ್ ಕಿಂಗ್ ಡಮ್ ಶಾಲೆ ಹಾಗೂ ಗಾಳಿಪಟ ಉತ್ಸವದ ಆಯೋಜಕರಾದ ಪವನ ಕಣಗಲಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ
ಗಾಳಿಪಟ ಉತ್ಸವದಲ್ಲಿ ಮಕ್ಕಳ
ಬಣ್ಣ ಬಣ್ಣದ ಹಾಗೂ ಆಕರ್ಷಕ ವಿನ್ಯಾಸದ ಗಾಳಿಪಟಗಳು ಹಾರಾಡಲಿದ್ದು ಹೆಚ್ಚಿಗಿ ಶಾಲಾ ವಿದ್ಯಾಥರ್ಿಗಳು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಉತ್ಸವದಲ್ಲಿ ಎರಡು ಬಗ್ಗೆಯ ಸ್ಪಧರ್ೆ ನಡೆಯಲ್ಲಿದ್ದು 3 ರಿಂದ 9 ವರ್ಷ ವಯಸ್ಸಿನ ಆಸಕ್ತ ಮಕ್ಕಳು ಗಾಳಿಪಟ ತಯಾರಿಸುವುದು, ಗಾಳಿ ಪಟ ತಯಾರಿಸಲು ಎಲ್ಲ ಸಾಮಗ್ರಿಗಳನ್ನು ತರಬೇಕು, ಹಾಗೂ 10 ರಿಂದ 18 ವಯಸ್ಸಿನ ಮಕ್ಕಳು ಗಾಳಿಪಟವನ್ನು ಖರೀದಿಸಿ ತಂದು ಹಾರಿಸಬಹುದು, ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದರು. ಆಸಕ್ತರು 8496848485, 9845750583 ಸಂಪಕರ್ಿಸಬಹುದು.