ಬೆಂಗಳೂರು, ಜ 18, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ನಿರ್ದೇಶಕ ಆರ್ ಚಂದ್ರು ಸಾರಥ್ಯದ ‘ಕಬ್ಜ’ ಚಿತ್ರದ ಶೂಟಿಂಗ್ ಇತ್ತೀಚೆಗೆ ನಗರದ ಮಿನರ್ವ ಮಿಲ್ ನಲ್ಲಿ ನಡೆಯಿತು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 8 ರಿಂದ 10 ಸೆಟ್ ಹಾಕಲಾಗಿತ್ತು1947ರಲ್ಲಿ ನಡಯುವಂತಹ ಕಥಾಹಂದರವನ್ನು ಚಿತ್ರ ಹೊಂದಿದ್ದು, ಚಂದ್ರು ಉಪ್ಪಿ ಕಾಂಬಿನೇಷನ್‍ನ ಮೂರನೇ ಸಿನಿಮಾ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ”7 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಇದು ನನಗೆ ಮೊದಲ ಚಿತ್ರದಂತೆಯೇ ಭಾಸವಾಗಿದ್ದು, ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ” ಎಂದು ಉಪೇಂದ್ರ ಹೇಳಿದ್ದಾರೆ. ಆಕ್ಷನ್ ಓರಿಯೆಂಟೆಂಡ್ ಚಿತ್ರವಾಗಿದ್ದು, ಎ ಜೆ ಶೆಟ್ಟಿ ಕ್ಯಾಮೆರಾ ಕೈಚಳಕವಿದೆ. ಜ್ಯಾನ್ ಕೊಕೇನ್ ಪ್ರಮುಖ ಪಾತ್ರ ಮಾಡಿದ್ದಾರೆ 1947 ನಿಂದ ಸಿನಿಮಾದ ಕಥೆ ಶುರುವಾಗುತ್ತೆ.. ಆಗಿನ ಕಾಲದಲ್ಲಿ ಈಗಿನ ಜನರೇಷನ್ ಗುರಿಗಳು ಇದ್ರೆ ಹೇಗ್ ಇರುತ್ತೆ ಅಂತ ನೋಡ್ಬೇಕು ಅಂದ್ರೆ ಈ.ಸಿನಿಮಾ ನೋಡಬೇಕು ಎಂದು ಚಿತ್ರತಂಡ ತಿಳಿಸಿದೆಕೆಜಿಎಫ್ ಚಿತ್ರಕ್ಕೆ ಸೆಟ್ ಹಾಕಿದ್ದ ಶಿವಕುಮಾರ್ ಅವರೇ ಈ ಚಿತ್ರಕ್ಕೂ ಆರ್ಟ್ ಡೈರೆಕ್ಟರ್. ಈಗಾಗಲೇ 7 ದಿನದ ಚಿತ್ರೀಕರಣ ಪೂರ್ಣವಾಗಿದ್ದು, ಸೆಟ್ ಅಲ್ಲಿಯೇ ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಪ್ಲಾನ್ ಇದ್ದು, ಎರಡನೇ ಶೆಡ್ಯೂಲ್ ಚಿತ್ರೀಕರಣ ಮಂಗಳೂರು ಮತ್ತು ಮುಂಬೈಯಲ್ಲಿ ನಡೆಯಲಿದೆ
ಕೊನೆ ಹಂತದ ಶೂಟಿಂಗ್ ಬೆಂಗಳೂರಿನ ಸೆಟ್ ಗಳಲ್ಲಿಯೇ ಪ್ಲಾನ್ ಆಗಿದೆ. 2020 ರ ಅಂತ್ಯಕ್ಕೆ ಚಿತ್ರ ಬಿಡುಗಡೆಯ ನಿರೀಕ್ಷೆ ಇದೆ. ಕೋಟಿ ವೆಚ್ಚದ ಸೆಟ್ ನ ಒಟ್ಟು ಬಜೆಟ್ 75 ಕೋಟಿ ಅನ್ನೊ ಮಾಹಿತಿ ಇದ್ದು, ನಿರ್ದೇಶಕ ಆರ್ ಚಂದ್ರು ಪಕ್ಕಾ ಪ್ಲಾನ್ ಮಾಡಿಯೇ ಸಿನಿಮಾ ಮಾಡ್ತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜೋಡಿಯಾಗಿ ಈ ಚಿತ್ರದಲ್ಲಿ ಕಾಜಲ್ ಅಗರವಾಲ್ ಅಭಿನಯಿಸೋದು ಬಹುತೇಕ ಫೈನಲ್ ಆಗಿದೆಯಂತೆ.