ಗ್ರೀನ್ ಕೋ ಕಂಪನಿ ಕಾರ್ಯವನ್ನು ಸ್ಥಗಿತಗೊಳಿಸಬೇಕು

ಲೋಕದರ್ಶನ ವರದಿ

ಬೈಲಹೊಂಗಲ 24: ರೈತರ ವಿವಿಧ ಸಮಸ್ಯೆಗಳಾದ ಭಾರತ ಸರ್ಕಾರ ಆರ್ಸಿಇಪಿ ಮುಕ್ತ ವ್ಯಾಪಾರ ಯೋಜನೆಯಿಂದ ಕೃಷಿ ಉತ್ಪನ್ನಗಳನ್ನು ಕೈಬಿಡಬೇಕು. ರಾಜ್ಯದ ಪ್ರವಾಹ ಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ, ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಮಲಪ್ರಭಾ ನದಿಯ ಸುಮಾರು 2 ಟಿಎಮ್ಸಿ ನೀರು ಬಳಸಿಕೊಂಡು ವಿದ್ಯುತ್ ತಯಾರಿಸುವ ಗ್ರೀನ್ ಕೋ ಕಂಪನಿ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಬಾಗೇವಾಡಿ-ಸವದತ್ತಿಯ ರಾಜ್ಯ ಹೆದ್ದಾರಿ ಯೋಜನೆಗೆ ಟೋಲ್ ಅಳವಡಿಸುವ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಭಾರತೀಕ ಕರಷಿಕ ಸಮಾಜದ ಸದಸ್ಯರು ಉಪವಿಭಾಗಾಧಿಕಾರಿಗಳ ಮೂಲಕ ರಾಷ್ರ್ಟಪತಿಗಳಿಗೆ ಮನವಿ ಸಲ್ಲಿಸಿದರು.

        ಭಾರತೀಯ ಕೃಷಿಕ ಸಮಾಜ ನವದೆಹಲಿ ಘಟಕದ  ರಾಜ್ಯ ಪ್ರಧಾನ ಕಾರ್ಯದರ್ಶಿ  ಮಹಾಂತೇಶ ಕಮತ ಮನವಿ ಸಲ್ಲಿಸಿ ಮಾತನಾಡಿ, ಭಾರತ ಸರ್ಕಾರ ಜಾರಿಗೆ ತರಲು ಹೊರಟಿರುವ ಆರ್ಸಿಇಪಿ ಮುಕ್ತ ವ್ಯಾಪಾರ ಯೋಜನೆಯಲ್ಲಿ ಕೃಷಿ ಉತ್ಪನ್ನಗಳನ್ನು ಈ ಯೋಜನೆಯಿಂದ ಹೊರಗಿಡಲು ನಿರ್ದೇಶನ ನೀಡಬೇಕು. ಈ ಯೋಜನೆಯಿಂದ ಭಾರತದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಸಣ್ಣ ಮತ್ತು ಮಧ್ಯಮ ರೈತರು ಜಮೀನು ಕಳೆದುಕೊಳ್ಳುವದರೊಂದಿಗೆ ಹೈನುಗಾರಿಕೆಯ ಉದ್ಯೋಗದಿಂದ ವಂಚಿತರಾಗಲಿದ್ದಾರೆ ಇದರಿಂದ ದೇಶದ ಬೆನ್ನೆಲಬು ರೈತನ ಜೀವನ ಕಷ್ಟಕರವಾಗಲಿದೆ ಎಂದರು.

      ಸವದತ್ತಿ ಎಪಿಎಮ್ಸಿ ಸದಸ್ಯರಾದ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕರ್ನಾಟಕ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಹಿಂದೆ ಎಂದು ಖಂಡರಿಯದ ಮಳೆ ಮತ್ತು ಪ್ರವಾಹ ಉಂಟಾಗಿ ರೈತರ ಜೀವನ ಅತ್ಯಂತ ದಯನೀಯ ಸ್ಥಿತಿಗೆ ತಲುಪಿದ್ದು ಜೀವನವೆ ದುಸ್ಥರವಾಗಿದೆ ಆದ್ದರಿಂದ ತಾವು ಈ ಭಾಗದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿದರ್ೇಶನ ನೀಡಬೇಕು.

        ಬೆಳಗಾವಿ ಜಿಲ್ಲೆಯ ಬಾಗೇವಾಡಿ ಗ್ರಾಮ ಮತ್ತು ಸವದತ್ತಿ ಪಟ್ಟಣ ಸೇರಿಸುವ 80ಕೀಮಿ ರಾಜ್ಯ ಹೆದ್ದಾರಿಗೆ 2 ಭಾಗಗಳಲ್ಲಿ ಟೋಲ್ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಯೋಜನೆ ಈ ಭಾಗದ ಜನರಿಗೆ ರಸ್ತೆ ಇಲ್ಲದೆ ಕಳೆದ 40 ವರ್ಷದಿಂದ ತೋದರೆ ಅನುಭವಿಸಿದ್ದು ಈಗ ಮತ್ತೆ ಟೋಲ್ ವಿಧಿಸುವ ನಿರ್ಧಾರ ಜನವಿರೋಧಿ ನೀತಿಯಾಗಿದ್ದು ಈ ಕ್ರಮವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ಧೆಶನ ನೀಡುವದಾಗಬೇಕು ಎಂದರು.

      ಜಿಲ್ಲಾ ಕಾರ್ಯಾಧ್ಯಕ್ಷ ಈರಣ್ಣ ಹುಬ್ಬಳ್ಳಿ, ಮಹಾದೇವ ಕಲಭಾಂವಿ, ಸುರೇಶ ಹೋಳಿ, ಶ್ರೀಪತಿ ಪಠಾಣಿ, ಮಲ್ಲಿಕಾರ್ಜುನ ದೇಸಾಯಿ, ಮಡಿವಾಳಪ್ಪ ಬುಳ್ಳಿ, ಸೋಮಲಿಂಗಪ್ಪ ಯಡ್ರಾವಿ, ಮನೋಜ ವಣ್ಣುರ, ಮೋಹನ ವಕ್ಕುಂದ ಇತರರು ಇದ್ದರು.