ಕೋಝಿಕ್ಕೋಡ್, ಜ 19 : ಭದ್ರತಾ ಕಾರಣಗಳಿಂದಾಗಿ ಕೇರಳ ರಾಜ್ಯಪಾಲ ಮುಹಮ್ಮದ್ ಆರಿಫ್ ಖಾನ್ ಭಾನುವಾರ ಇಲ್ಲಿ ನಡೆಯುತ್ತಿರುವ ಕೇರಳ ಸಾಹಿತ್ಯ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಜ್ಯಪಾಲರ ಕಚೇರಿಯನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ರಾಜ್ಯಪಾಲರಿಗೆ ಮಾಹಿತಿ ನೀಡದೆ ಸಿಎಎ ವಿರುದ್ಧ ರಾಜ್ಯ ಸಕರ್ಾರ ಸುಪ್ರೀಂ ಕೋರ್ಟ್ನ್ಲ್ಲಿ ಮೊಕದ್ದಮೆ ಹೂಡಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಿಎಎ ವಿಷಯದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹಾಗೂ ಇತರ ರಾಜಕೀಯ ನಾಯಕರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಸಿಎಎ ವಿರುದ್ಧ ರಾಜ್ಯ ವಿಧಾನಮಂಡಲದಲ್ಲಿ ಕೈಗೊಂಡ ನಿರ್ಣಯಕ್ಕೆ ರಾಜ್ಯಪಾಲರು ಟೀಕಿಸಿದ್ದರು. ಸಂಸತ್ನ ಉಭಯ ಸದನಗಳು ಅಂಗೀಕರಿಸಿದ ಮತ್ತು ರಾಷ್ಟ್ರಪತಿಗಳು ಸಹಿ ಮಾಡಿದ ಕಾಯ್ದೆಯನ್ನು ಜಾರಿ ಮಾಡುವುದು ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ಕರ್ತವ್ಯ ಎಂದು ರಾಜ್ಯಪಾಲರು ಪ್ರತಿಪಾದಿಸಿದ್ದರು.