ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ವಾಷರ್ಿಕ ಮಹಾಸಭೆ

ಖ್ಯಾತ ಉದ್ಯಮಿ ಗುಡ್ಡೋಡಗಿ ಅವರಿಗೆ 'ವಾಣಿಜ್ಯ ಭಾಸ್ಕರ' ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

  ವಿಜಯಪುರ, 14: ಆನಲೈನ್ ಮೂಲಕ ಔಷಧ ವ್ಯಾಪಾರ ನಡೆಯುತ್ತಿರುವುದರಿಂದ ಔಷಧ ವ್ಯಾಪಾರಸ್ಥರಿಗೆ ತೊಂದರೆಯಾಗಿರುವುದು ನಿಜ. ಔಷಧ ವ್ಯಾಪಾರಸ್ಥರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈ ಸಮಸ್ಯೆಗಳಿಗೆ ನಾನು ಧ್ವನಿಯಾಗಿ ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

            ನಗರದ ನೀಲಕಂಠೇಶ್ವರ ಮಂಗಲ ಕಾಯರ್ಾಲಯದಲ್ಲಿ ಜರುಗಿದ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ 36 ನೇ ವಾಷರ್ಿಕ ಮಹಾಸಭೆ ಹಾಗೂ ಖ್ಯಾತ ಉದ್ಯಮಿ ಡಿ.ಎಸ್. ಗುಡ್ಡೋಡಗಿ ಅವರಿಗೆ `ವಾಣಿಜ್ಯ ಭಾಸ್ಕರ' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆನಲೈನ್ ಮೂಲಕ ಔಷಧ ವ್ಯಾಪಾರ ಔಷಧ ವ್ಯಾಪಾರಸ್ಥರಿಗೆ ತೀವ್ರ ತೊಂದರೆ ನೀಡುತ್ತಿದೆ, ಸಮಸ್ಯೆಯ ಬಗ್ಗೆ ನನಗೆ ಸಂಪೂರ್ಣ ಅರಿವಿದೆ, ಔಷಧ ವ್ಯಾಪಾರಸ್ಥರು ಸಂಘಟಿತವಾಗಿ ತಮ್ಮ ಸಮಸ್ಯೆಯ ನಿವಾರಣೆಗಾಗಿ ಹೋರಾಟ ಮಾಡಬೇಕು, ಈ ಹೋರಾಟಕ್ಕೆ ಸದಾ ನಿಮ್ಮ ಜೊತೆ ನಿಲ್ಲುವೆ ಎಂದು ಭರವಸೆ ನೀಡಿದರು.

            ಔಷಧ ವ್ಯಾಪಾರಸ್ಥರ ಬಗ್ಗೆ ಜನಸಾಮಾನ್ಯರಲ್ಲಿ ಅಪಾರವಾದ ನಂಬಿಕೆ ಇದೆ, ಅನೇಕ ಸಾರ್ವಜನಿಕರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದಾಗ ಮೆಡಿಕಲ್ ಸ್ಟೋರ್ಗೆ ಹೋಗಿ ಒಳ್ಳೆಯ ಗುಳಿಗೆ ಕೊಡಿ ಎಂದು ಕೇಳುತ್ತಾರೆ, ಇದು ಜನರು ಔಷಧ ವ್ಯಾಪಾರಸ್ಥರ ಮೇಲೆ ಇರಿಸಿರುವ ಅಪಾರ ನಂಬಿಕೆಯ ಒಂದು ನಿದರ್ಶನ ಎಂದರು.

            ಇತ್ತೀಚಿನ ದಿನಗಳಲ್ಲಿ ಅನೇಕ ವೈದ್ಯರು ತಮ್ಮ ನಸರ್ಿಂಗ್ ಹೋಂನಲ್ಲಿಯೇ ತಮ್ಮದೇ ಆದ ಮೆಡಿಕಲ್ ಸ್ಟೋರ್ ಅದರ ಜೊತೆಗೆ ಕ್ಲಿನಿಕಲ್ ಲ್ಯಾಬೋರೇಟರಿ ಸಹ ಸ್ಥಾಪಿಸಿಕೊಳ್ಳುತ್ತಿದ್ದಾರೆ, ಇದರಿಂದಾಗಿ ಈ ಎಲ್ಲ ಉದ್ಯೋಗವನ್ನು ನಂಬಿದವರಿಗೆ ಹಿನ್ನೆಡೆಯಾಗುವ ಅಪಾಯವಿದೆ, ಯಾರು ಯಾವ ವೃತ್ತಿಯನ್ನು ಕೈಗೊಳ್ಳಬೇಕೋ, ಆ ವೃತ್ತಿ ಕೈಗೊಳ್ಳುವುದು ಸೂಕ್ತ, ಈ ಬಗ್ಗೆ ವೈದ್ಯರು ಅನ್ಯಥಾ ಭಾವಿಸುವುದು ಬೇಡ ಎಂದರು.

            ಡಿ.ಎಸ್. ಗುಡ್ಡೋಡಗಿ ಅವರಿಗೆ ವಾಣಿಜ್ಯ ಭಾಸ್ಕರ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ, ಅವರ ಶಿಸ್ತುಬದ್ಧ, ಸರಳ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ ಜೀವನ ಎಲ್ಲರಿಗೂ ಸ್ಪೂತರ್ಿ ಎಂದು ಶಿವಾನಂದ ಪಾಟೀಲ ಬಣ್ಣಿಸಿದರು.

            ಇದೇ ಸಂದರ್ಭದಲ್ಲಿ ವಿಜಯಪುರದ ಖ್ಯಾತ ಉದ್ಯಮಿ, ಔಷಧ ವ್ಯಾಪಾರಸ್ಥ ಡಿ.ಎಸ್. ಗುಡ್ಡೋಡಗಿ ಅವರಿಗೆ 'ವಾಣಿಜ್ಯ ಭಾಸ್ಕರ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

            ಸನ್ಮಾನ ಸ್ವೀಕರಿಸಿದ ಡಿ.ಎಸ್. ಗುಡ್ಡೋಡಗಿ ಮಾತನಾಡಿ, ಔಷಧ ವ್ಯಾಪಾರಸ್ಥರು ನನ್ನ ಮೇಲೆ ಅಭಿಮಾನವಿರಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಚಿರಋಣಿ ಎಂದು ತಮ್ಮ ಜೀವನಾನುಭವಗಳನ್ನು ಪ್ಷೇಕ್ಷಕರ ಮುಂದೆ ಹಂಚಿಕೊಂಡರು.

            ಔಷಧ ವ್ಯಾಪಾರಸ್ಥರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಘುನಾಥ ರೆಡ್ಡಿ, ಸಂಘದ ಜಿಲ್ಲಾಧ್ಯಕ್ಷ ಕೆ.ಆರ್. ಎತ್ತಿನಮನಿ, ಕಲಬುಗರ್ಿ ವಲಯದ ಉಪ ಔಷಧ ನಿಯಂತ್ರಕ ಗೋಪಾಲ ಭಂಡಾರಿ, ಸಹಾಯಕ ಔಷಧ ನಿಯಂತ್ರಕ ಅಣ್ಣಾರಾವ ನಾಯಕ, ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋಹರ ಶೆಟ್ಟಿ, ರಮೇಶ ಯಳಮೇಲಿ, ವಿ.ಜಿ. ಕೋರಚಗಾಂವ ಮೊದಲಾದವರು ಪಾಲ್ಗೊಂಡಿದ್ದರು.