ಲೋಕದರ್ಶನವರದಿ
ಮಹಾಲಿಂಗಪೂರ28 : ನಗರದಿಂದ ರಬಕವಿ ಸಮೀಪದ ಮೇನಭಾವಿ ಹತ್ತಿರವಿರುವ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆ ಮರಗಳು ಒಣಗಿ ಬಿಳ್ಳುವ ಹಂತದಲ್ಲಿದ್ದವು.ಸ್ಥಳೀಯರಿಗೆ, ವಾಹನ ಸವಾರರಿಗೆ ಇದರಿಂದ ದೊಡ್ಡ ಅಪಾಯ ಕಾದಿತ್ತು.ಇದನ್ನರಿತು ಲೋಕದರ್ಶನ ದಿನಪತ್ರಿಕೆ ಕಳೆದ 2019 ರ ಮೇ ತಿಂಗಳ 06 ನೆಯ ತಾರೀಖಿನಂದು ವಿವರವಾದ ವರದಿ ಪ್ರಕಟಿಸಿತ್ತು.ಇಲಾಖೆಗೆ ವಿಳಂಬ ಕಾರಣ ಕೇಳಿ ದೂರವಾಣಿ ಮೂಲಕ ಕೇಳಿದಾಗ ಎರಡು ದಿನಗಳಲ್ಲಿ ಶಿಥಿಲಗೊಂಡ ಮರಗಳನ್ನು ತೆರವುಗೊಳಿಸಲಾಗುವುದು ಎಂಬ ಉತ್ತರ ಸಿಕ್ಕಿತು. ಅದರಂತೆ ಇಲಾಖೆ ಜವಾನರು ಮರಗಳನ್ನು ಸೆ.26. 27 ರಂದು ತೆರವುಗೊಳಿಸಿದ್ದಾರೆ.
ಯಾವಾಗ ಎನಾಗುವುದೋ ಎಂಬ ಭಯದಲ್ಲಿದ ಸ್ಥಳೀಯರು, ಅಕ್ಕಪಕ್ಕದ ಊರುಗಳ ಜನ ನಿಟ್ಟುಸಿರು ಬಿಡುವಂತಾಗಿದೆ.ಲೇಟಾಗಿದ್ರೂ ಲೇಟೆಸ್ಟಾಗಿ ಕೆಲಸ ಮಾಡಿರುವ ಅರಣ್ಯ ಇಲಾಖೆ ಕಾರ್ಯವನ್ನು ಸದಾಶಿವ ಬುಜುರುಕ,ಮಂಜು ಬನಹಟ್ಟಿ,ವೆಂಕಪ್ಪ ಪಾಟೀಲ, ಶ್ರೀಶೈಲ ಕವಟಕೊಪ್ಪ ಮುಂತಾದವರು ಶ್ಲ್ಯಾಘಿಸಿದ್ದಾರೆ. ವರದಿಯನ್ನು ಪ್ರಕಟಿಸಿದ ಪತ್ರಿಕೆಗೂ ಧನ್ಯವಾದಗಳನ್ನು ಹೇಳಲು ಮರೆಯಲಿಲ್ಲ.