ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಆಯೋಜಿಸಿದ್ದ ರೈತ ದಿನಾಚರಣೆ

The Farmers' Day was organized by the Agriculture Department and the Farmers' Society at the office

ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಆಯೋಜಿಸಿದ್ದ ರೈತ ದಿನಾಚರಣೆ

ಹಾನಗಲ್ 23 : ರೈತ ಸಮೂಹ ಸಂಕಷ್ಟಗಳಿಂದ ಪಾರಾಗಲು ದಾರಿ ಹುಡುಕಲಿ. ಈ ಬಗ್ಗೆ ವಿಸ್ತೃತ ಚರ್ಚೆ,ಸಂವಾದಗಳು ನಡೆಯಲಿ. ಅಗತ್ಯ ಮಾರ್ಗಗಳೊಂದಿಗೆ ಆರ್ಥಿಕ ಸಬಲತೆ ಸಾಧಿಸಲು ಪ್ರೇರಣೆ ನೀಡುವ ಕೆಲಸವಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.         ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಭಾಗವಹಿಸಿ, ಮಾಜಿ ಪ್ರಧಾನಿ ಚೌದರಿ ಚರಣ ಸಿಂಗ್ ಅವರ ಭಾವಚಿತ್ರಕ್ಕೆ ಗೌರರ್ವಾಪಿಸಿ ಅವರು ಮಾತನಾಡಿದರು.  

        ಸಮಸ್ಯೆಗಳಿಗೆ ಕೊನೆ ಇಲ್ಲ. ಒಂದು ಸಮಸ್ಯೆ ಬಗೆಹರಿಸುವ ಹೊತ್ತಿಗೆ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ರೈತನಿಗೆ ಬಲ ತುಂಬುವ ಆಶಯಗಳ ಸರ್ಕಾರಗಳಿಗಿದ್ದರೂ ಸಹ ಹಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಬರೀ 5-10 ಗುಂಟೆ ಭೂಮಿಯಲ್ಲಿ ಲಕ್ಷಾಂತರ ರೂ. ಆದಾಯ ಪಡೆಯುತ್ತಿರುವ ಹಲವು ಸಾಧಕರು ನಮ್ಮ ಮಧ್ಯೆ ಇದ್ದಾರೆ. ಅಂಥವರನ್ನು ಆಹ್ವಾನಿಸಿ, ಮಾರ್ಗದರ್ಶನ ಕೊಡಿಸಿ,ದುಡಿಮೆಯ ಮಾರ್ಗಗಳ ಕುರಿತು ಮಾಹಿತಿ ದೊರಕಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

      ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ, ತಾಪಂ ಕೆಡಿಪಿ ಸದಸ್ಯ ಮಾರ್ತಾಂಡಪ್ಪ ಮಣ್ಣಮ್ಮನವರ, ರೈತ ಸಂಘಟನೆಗಳ ಮುಖಂಡರಾದ ಮರಿಗೌಡ ಪಾಟೀಲ, ಎಂ.ಎಸ್‌.ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರ​‍್ಪನವರ, ಮಹರುದ್ರ​‍್ಪ ಕೂಸನೂರ, ಚನ್ನಬಸಪ್ಪ ಹಾವಣಗಿ, ಮಹಲಿಂಗಪ್ಪ ಬಿದರಮಳಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ, ಮಣ್ಣು ವಿಜ್ಞಾನಿ ಡಾ.ರಶ್ಮಿ, ಸುವರ್ಣ ಬಿಷ್ಠಕ್ಕನವರ, ಸಂಗಮೇಶ ಹಕ್ಕಲಪ್ಪನವರ, ಯಂಕಾನಂದ ಪೂಜಾರ, ಗುರುನಾಥ ಗಾವಣೆಕರ ಸೇರಿದಂತೆ ಅನೇಕರಿದ್ದರು.