ಸುಧಾರಣೆಗಳಿಗೆ ಆರ್ಥಿಕ ಸಮೀಕ್ಷೆ ಕರೆ, ಜಿಡಿಪಿ ಶೇ 6ರಿಂದ 6.5ರಷ್ಟು ವೃದ್ಧಿ ಅಂದಾಜು

ನವದೆಹಲಿ, ಜ 31, ಬಳಕೆಯಲ್ಲಿ ಕುಸಿತ ಮತ್ತು ಹೂಡಿಕೆಯಲ್ಲೂ ಕುಸಿತದಿಂದಾಗಿ ಆರ್ಥಿಕತೆ ಕ್ಷೀಣಿಸುತ್ತಿರುವುದು ನರೇಂದ್ರ ಮೋದಿ ಸರ್ಕಾರ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ. 2020-21 ನೇ ಸಾಲಿನಲ್ಲಿ ಭಾರತದ ಆರ್ಥಿಕತೆಯು ಶೇ 6ರಿಂದ 6.5ರಷ್ಟು ಏರಿಕೆಯಾಗಲಿದೆ ಎಂದು 2019-20ರ ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ಆದರೆ, ಇದು  2019-20ರ ಶೇ5 ರಷ್ಟು ಪರಿಷ್ಕøತ ಅಂದಾಜುಗಿಂತ ಸ್ವಲ್ಪ ಹೆಚ್ಚಾಗಿದೆ.ಭಾರತದ ಆರ್ಥಿಕತೆು 2016-17ರ ನಂತರ ಸತತ ಮೂರನೇ ವರ್ಷ ಕ್ಷೀಣಿಸುವ ಸಾಧ್ಯತೆ ಇದೆ. ಆರ್ಥಿಕ ಬೆಳವಣಿಗೆ 2016-17ರಲ್ಲಿ ಶೇ 8.2ರಷ್ಟು, 2017-18ರಲ್ಲಿ 7.2 ರಷ್ಟಿದ್ದರೆ, 2018-19ರಲ್ಲಿ ಶೇ 6.8 ಕ್ಕೆ ಇಳಿದಿದೆ.

ಉದ್ಯಮ ಸುಲಭವಾಗುವಂತೆ, ಸಮೀಕ್ಷೆಯು ಸುಧಾರಣೆಗಳಿಗೆ ಕರೆ ನೀಡಿದೆ. ರಫ್ತುಗಳನ್ನು ಉತ್ತೇಜಿಸಲು ಬಂದರುಗಳಲ್ಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ಸಲಹೆ ಮಾಡಿದೆ.  ಸಮೀಕ್ಷೆಯಲ್ಲಿನ ಅಂದಾಜುಗಳನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ನೇತೃತ್ವದ ತಂಡ ಮಾಡಿದೆ. ಆರಂಭದಲ್ಲಿ ಅಂದಾಜು ಮಾಡಿದ ಶೇ 12ಕ್ಕೆ ವಿರುದ್ಧವಾಗಿ 2019-20ರಲ್ಲಿ ಜಿಡಿಪಿ ಬೆಳವಣಿಗೆ ಕೇವಲ ಶೇ 7.5ರಷ್ಟು ಮಾತ್ರ ಪ್ರಗತಿಯಾಗುವ ಸಾಧ್ಯತೆ ಇದೆ. ತೆರಿಗೆ ಸಂಗ್ರಹಣೆಯಲ್ಲಿ ಕುಸಿತವಾಗಬಹುದು ಎಂಬುದನ್ನು ಸಮೀಕ್ಷೆ ತಿಳಿಸಿದೆ. ಆದರೂ,  ಎಸ್‍ಡಿಜಿ ಇಂಡಿಯಾ ಇಂಡೆಕ್ಸ್ 2019 ರ  ವರದಿಯಂತೆ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಭಾರತ ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದು ಅಧಿಕೃತ ಹೇಳಿಕೆ. ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಂತೆ, ಕೇರಳ, ಹಿಮಾಚಲ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಗೋವಾ, ಸಿಕ್ಕಿಂ, ಚಂಡೀಗಡ ಮತ್ತು ಪುದುಚೇರಿ ಮುಂಚೂಣಿಯಲ್ಲಿವೆ.