ಹಾವೇರಿ: ಮೇ 13: ನೆರೆಯಿಂದ ಹಾನಿಯಾದ ಮನೆಗಳ ಪೈಕಿ ಜಿಪಿಎಸ್ ಅಳವಡಿಕೆ, ಆಡಿಟ್ ವರದಿ, ಪರಿಹಾರ ವಿತರಣೆ ಹಾಗೂ ಮನೆ ನಿಮರ್ಾಣ ಕಾರ್ಯ ಆರಂಭಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ನಿರೀಕ್ಷಿತ ಪ್ರಗತಿ ಸಾಧಿಸಿದೇ ವಿಳಂಬ ನೀತಿ ಅನುಸರಿಸುತ್ತಿರುವ ತಹಶೀಲ್ದಾರಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬುಧವಾರ ಜಿಲ್ಲೆಯ ತಹಶೀಲ್ದಾರ ಹಾಗೂ ತಾಲೂಕು ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಗಳು, ಪಟ್ಟಣ ಪಂಚಾಯತ್, ಪುರಸಭೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ನೆರೆಹಾನಿ ಮನೆಗಳ ಪ್ರಗತಿಯ ವಿವರವನ್ನು ಪಡೆದರು.
ನೆರೆಹಾನಿಗೆ ಒಳಗಾದ ಮನೆಗಳ ನಿಮರ್ಾಣ ಕಾರ್ಯದಲ್ಲಿ ಸಮಸ್ಯೆಗಳಿದ್ದರೆ ತಹಶೀಲ್ದಾರಗಳ ಹಂತದಲ್ಲೇ ಪರಿಹರಿಸುವ ಅಧಿಕಾರವನ್ನು ಸಕರ್ಾರ ನೀಡಿದೆ. ಆದಾಗ್ಯೂ ಬಹಳಷ್ಟು ಪ್ರಕರಣಗಳು ತಹಶೀಲ್ದಾರ ಹಂತದಲ್ಲಿ ಬಾಕಿ ಉಳಿದುಕೊಂಡಿವೆ.
ಹಾನಿಗೊಳಗಾದ ಮನೆಗಳ ದುರಸ್ಥಿ ಪ್ರಕರಣಗಳು, ಪುನರ್ ನಿಮರ್ಾಣ ಮಾಡಬೇಕಾದ ಪ್ರಕರಣಗಳು, ಹಾನಿಗೊಳಗಾದ ಮನೆಯ ನಿವೇಶನ ಬದಲಾಯಿಸಿ ಬೇರೆಡೆ ಮನೆ ನಿಮರ್ಾಣ ಮಾಡುವ ಪ್ರಕರಣಗಳಿರಲಿ, ಪರಿಹಾರ ಪಡೆಯುವಲ್ಲಿ ಹಾಗೂ ಮನೆ ದುರಸ್ಥಿ, ನಿಮರ್ಾಣದಲ್ಲಿ ಕುಟುಂಬಗಳ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಯಾವುದೇ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಕ್ರಮವಹಿಸಬೇಕಾಗಿದೆ. ಈ ವಿಚಾರದಲ್ಲಿ ವಿಳಂಬಮಾಡುವುದು, ಸಮಸ್ಯೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಆದ್ಯತೆಯ ಮೇರೆಗೆ ಈ ಕಾರ್ಯವನ್ನು ಕೈಗೊಳ್ಳಿ ಎಂದು ಸೂಚಿಸಿದರು.
ಬಾಕಿ ಉಳಿದಿರುವ ಮನೆಗಳ ವಗರ್ೀಕರಣ, ಜಿ.ಪಿ.ಎಸ್. ಆಡಿಟ್ಗಳ ಕುರಿತಂತೆ ತಹಶೀಲ್ದಾರಗಳು ನೀಡುವ ಉತ್ತರಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾವುದೇ ಕಥೆ ಹೇಳಬೇಡಿ. ಮನೆ ನಿಮರ್ಾಣಕ್ಕೆ ಫಲಾನುಭವಿಗಳಿಂದ ಅಡ್ಡಿಯಾದರೆ ಎಫ್.ಐ.ಆರ್. ದಾಖಲಿಸಿ.
ಯಾವುದೇ ಒತ್ತಡಗಳಿಗೆ ಒಳಗಾಗದೆ ನೈಜತೆಯ ಆಧಾರದ ಮೇಲೆ ಸಮಸ್ಯೆಯನ್ನು ಇತ್ಯರ್ಥಪಡಿಸಿ. ಮಳೆಗಾಲ ಆರಂಭಗೊಂಡಿದೆ. ಇನ್ನೂ ಮನೆ ನಿಮರ್ಾಣಗೊಂಡಿಲ್ಲ ಎಂದರೆ ಮತ್ತೆ ಜನ ಸಮಸ್ಯೆಯಲ್ಲಿ ಬಿಳುತ್ತಾರೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೆಲಸನಿರ್ವಹಿಸಿ. ತಡಮಾಡಿದರೆ ನಿಮ್ಮ ವಿರುದ್ಧ ಸಕರ್ಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಲೋಪ ಕಂಡುಬಂದರೆ ನಿಮ್ಮ ಮೇಲೆ ಗಂಭೀರ ಕ್ರಮಗಳಾಗುತ್ತವೆ ಎಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪನಿದರ್ೆಶಕ ವಿನೋದಕುಮಾರ ಹೆಗ್ಗಳಗಿ, ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವೀರೇಂದ್ರ ಕುಂದಗೋಳ, ಪೌರಾಯುಕ್ತ ಬಸವರಾಜ ಜಿದ್ದಿ, ತಹಶೀಲ್ದಾರ ಶಂಕರ್, ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಣಾಧಿಕಾರಿ ಬಸವರಾಜ ಹಾಗೂ ವಿವಿಧ ತಾಲೂಕಿನ ತಹಶೀಲ್ದಾರಗಳು, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಣಾಧಿಕಾರಿಗಳು ಭಾಗವಹಿಸಿದ್ದರು.