ನಕಲಿ ವೈದ್ಯರ ಪತ್ತೆಗೆ ಆರೋಗ್ಯ ಇಲಾಖೆ ತೀವ್ರ ಕ್ರಮವಹಿಸಿ

ಗದಗ 20:  ನಕಲಿ ವೈದ್ಯರು   ಪತ್ತೆಗೆ   ಆರೋಗ್ಯ ಇಲಾಖೆಯು ಹಾಗೂ  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ನೇತೃತ್ವದಲ್ಲಿ ಸಭೆ  ನಡೆಸಿ ಕ್ರಮ ಕೈಗೊಳ್ಳಬೇಕು.  ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂಗೇಶ್ವರ  ಎಚ್.ಪಾಟೀಲ ಸೂಚಿಸಿದರು.

 ಗದಗ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು  ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ನಕಲಿ  ವೈದ್ಯರ ಪತ್ತೆ  ಕ್ರಮ ವಹಿಸಿ ಈಗಾಗಲೇ ಎಫ್.ಐ.ಆರ್.  ದಾಖಲಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ  ಡಾ. ಸುಜಾತಾ ಪಾಟೀಲ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಹೆಚ್ಚುವರಿ ಆಂಬ್ಯುಲನ್ಸ್ ಗಳ ಅವಶ್ಯಕತೆಯಿದ್ದು  ಆರೋಗ್ಯ ಇಲಾಖೆ  ಹೆಚ್ಚಿನ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸಬೇಕು  ನೆರೆ ಪೀಡಿತ ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಮರಗಳನ್ನು ಬೆಳೆಸಲು  ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಎಲ್ಲ ತಾಲೂಕುಗಳಲ್ಲಿ ಫೆ.1 ರಿಂದ ತಾಡಪತ್ರಿಗಳ ಸಮರ್ಪಕ ವಿತರಣೆಗೆ ಕೃಷಿ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಹನಿ ನೀರಾವರಿ  ಕುರಿತು ತೋಟಗಾರಿಕೆ, ಕಂದಾಯ, ಕೃಷಿ ಇಲಾಖೆಯವರಿಂದ ರೈತರಿಗೆ  ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು. ಹುಲ್ಲೂರು ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು  ಜಿ.ಪಂ. ಅಧ್ಯಕ್ಷರು  ತಿಳಿಸಿದರು.

ಕಪ್ಪತಗುಡ್ಡದಲ್ಲಿ  ಪೀಕ್ ಜಾಲಿ ತೆಗೆದರೆ ಬೇರೆ ಗಿಡಗಳ ಬೆಳವಣಿಗೆ ಸಾಧ್ಯ. ಆದುದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ   ಪೀಕ್  ಜಾಲಿ ತೆಗೆಯುವ ಕೆಲಸ ಸೇರ್ಪಡೆಗೊಳಿಸುವದಕ್ಕೆ ಕ್ರಮ ವಹಿಸಬೇಕು  ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ  ಸೂರ್ಯಸೇನ ನುಡಿದರು.   ಮಲಪ್ರಭಾ ಮತ್ತು ತುಂಗಭದ್ರಾ ನದಿ  ಪಾತ್ರ .   ಅರಣ್ಯ ಜೊತೆಗೆ  ವನ್ಯ ಮೃಗಗಳ ಸಂರಕ್ಷಣೆಗೂ  ಅರಣ್ಯ ಇಲಾಖೆ ವಿವಿಧ  ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ.   ಜಿಲ್ಲೆಯ 24  ಶಾಲೆಗಳಲ್ಲಿ ಅರಣ್ಯ ಇಲಾಖೆಯಿಂದ ಚಿಣ್ಣರ  ವನ ದರ್ಶನ,  ಮೇವುಂಡಿಯಲ್ಲಿ  ಟ್ರೀ ಪಾರ್ಕ,  ಗಜೇಂದ್ರಗಡ  ಹಾಗೂ ಕಪ್ಪತಗುಡ್ಡದ ಗಾಳಿಗುಂಡಿಯಲ್ಲಿ  ಹುಲ್ಲುಗಾವಲು ಅಭಿವೃದ್ಧಿ ಮಾಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.   

ಕಡಲೆ ಬೆಳೆ  ರೋಗಕ್ಕೆ ಔಷಧಿ ಸಿಂಪಡಿಸುವ ಕುರಿತು ರೈತರಿಗೆ ಈಗಾಗಲೇ ಮಾಹಿತಿ ಕೊಡಲಾಗಿದೆ.  ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮೊಬೈಲ್  ಆ್ಯಪ್ ಮೂಲಕ ಬೆಳೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.  ಬೆಳೆ ದರ್ಶಕ ಮೊಬೈಲ್ ಆ್ಯಪ್  ಮಾತ್ರವಲ್ಲದೇ  ಬೆಳೆ ಸಮೀಕ್ಷೆ ತಂತ್ರಾಂಶ ಮೂಲಕ , ಲಿಖಿತವಾಗಿ ರೈತರ ಸಂಪರ್ಕ ಕೇಂದ್ರಗಳಿಗೆ ಆಕ್ಷೇಪಣೆ ಸಲ್ಲಿಸಲು  ಜನೆವರಿ 30  ಕೊನೆಯ ದಿನವಾಗಿರುತ್ತದೆ.  ಜಿಲ್ಲೆಯಲ್ಲಿ 1,60,000  ರೈತರಿದ್ದು 8,000 ತಾಡಪತ್ರಿಗಳು  ಪೂರೈಕೆಯಾಗಿವೆ ಎಂದು ಜಂಟಿ ಕೃಷಿ ನಿದರ್ೆಶಕ ರುದ್ರೇಶಪ್ಪ ಸಭೆಗೆ ತಿಳಿಸಿದರು.   ಇದೇ ಸಂದರ್ಭದಲ್ಲಿ   ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ - ರೈತ ಬಾಂಧವರಲ್ಲಿ ಮನವಿ ಕುರಿತು ಕರಪತ್ರವನ್ನು  ಹಾಗೂ ಪಶುಪಾಲನಾ ಚಟುವಟಿಕೆಗಳ ಕೈಪಿಡಿಗಳನ್ನು  ಬಿಡುಗಡೆ ಮಾಡಲಾಯಿತು.   

ರಸ್ತೆ ಬದಿಯಲ್ಲಿ ಇಂಗು ಗುಂಡಿ ನಿರ್ಮಾಣದ ಪರಿಶೀಲನೆ,  ಆರೋಗ್ಯ ಇಲಾಖೆ ಹಳೆ ವಾಹನಗಳ ವಿಲೇವಾರಿ,  ಶಿಗ್ಲಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ  ಚರ್ಚಿಸಲಾಯಿತು. 

ಗದಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ,  ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ  ಹನುಮಂತಪ್ಪ ಪೂಜಾರ,  ಶಿಕ್ಷಣ ಮತ್ತು ಆರೋಗ್ಯ  ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿ.ಪಂ. ಸದಸ್ಯರುಗಳು,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಆನಂದ್ ಕೆ, ಉಪಕಾರ್ಯದಶರ್ಿ   ಬಿ. ಕಲ್ಲೇಶ , ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.