ಗುಳೇದಗುಡ್ಡ: ಸಮೀಪದ ಪರ್ವತಿ, ಹುಲ್ಲಿಕೇರಿ, ಖಾನಾಪೂರ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಕಳೆದ 15-20 ದಿನಗಳಿಂದ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಗೊತ್ತಾಗಿದ್ದರೂ ಆರೋಗ್ಯ ಇಲಾಖೆ ಸೂಕ್ತಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಖಾರವಾಗಿ ಹೇಳಿದರು.
ಅವರು ಪಟ್ಟಣದ ಹಲವು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಡೆಂಗ್ಯೂ ಜ್ವರದಿಂದ ಬಳಲಿ ಈಗಾಗಲೇ ಹುಲ್ಲಿಕೇರಿ, ಪರ್ವತಿ ಗ್ರಾಮಗಳಲ್ಲಿ ಯುವಕರೊಬ್ಬರು, ಮಹಿಳೆಯರಿಬ್ಬರು ಅಸುನೀಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದರೂ ಆರೋಗ್ಯ ಇಲಾಖೆ ಗ್ರಾಮದಲ್ಲಿ ಹರಡಿರುವ ಜ್ವರದ ಪತ್ತೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಈಗಾಗಲೇ ಅಸುನೀಗಿದವರು ಡೆಂಗ್ಯೂ ಜ್ವರದಿಂದ ಬಳಲಿ ಸತ್ತಿಲ್ಲ. ಅವರಿಗೆ ಡೆಂಗ್ಯೂ ಜ್ವರ ಬಂದಿದೆಯೋ ಇಲ್ಲವೋ ಇನ್ನು ವರದಿ ಬಂದಿಲ್ಲ ಎನ್ನುವ ಜಿಲ್ಲಾ ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲ, ತಹಶೀಲ್ದಾರ ಕಚೇರಿಯ ಒಬ್ಬ ಸಿಬ್ಬಂದಿ ಕೂಡಾ ಗ್ರಾಮಕ್ಕೆ ಭೇಟಿ ಕೊಡದಿರುವುದು ಅವರ ಕರ್ತವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ನಂಜಯ್ಯನಮಠ ಕಟುವಾಗಿ ಆರೋಪಿಸಿದ್ದಾರೆ.
ಗ್ರಾಮದಲ್ಲಿ ಡೆಂಗ್ಯೂ ಖಾಯಿಲೆ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ರೋಗಿಗಳು ಗುಳೇದಗುಡ್ಡ, ಬಾಗಲಕೋಟದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಮೊಂಡುತನದ ಹೇಳಿಕೆ ನೀಡುತ್ತ ಗ್ರಾಮಸ್ಥರ ಆರೋಗ್ಯದೊಂದಿಗೆ ಚಲ್ಲಾಟ ವಾಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಈಗಾಗಲೇ ಖಾಯಿಲೆಯಿಂದ ಸಾಕಷ್ಟು ಜನರು ಸಕರ್ಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯೂ ಖಾಯಿಲೆಯಿಂದ ಬಳಲುತ್ತಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಡಿಎಚ್ಓ ಬಂದು ಪರಿಶೀಲಿಸಬೇಕು. ರೋಗದ ಪತ್ತೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂಜಯ ಬರಗುಂಡಿ, ಗೋಪಾಲ ಭಟ್ಟಡ, ಪುರಸಭೆ ಸದಸ್ಯ ವಿನೋದ ಮದ್ದಾನಿ, ರಾಜು ಸಂಗಮ, ವಿರೇಶ ಕಲಬುಗರ್ಿ ಇದ್ದರು.