ದಾಸ ಪರಂಪರೆಗೆ ಐದು ಶತಮಾನಗಳ ಇತಿಹಾಸವಿದೆ: ಪ್ರೋ ಮಹೇಂದ್ರ

ಲೋಕದರ್ಶನ ವರದಿ

ಗಜೇಂದ್ರಗಡ: ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ ಕನಕದಾಸರಂತಹ ಮಹಾತ್ಮರಿಂದಾಗಿಯೇ ದಾಸ ಸಾಹಿತ್ಯ ಅತ್ಯಂತ ಶ್ರೀಮಂತವಾಗಿ ಬೆಳೆಯಲು ಸಾಧ್ಯವಾಯಿತು. ಅಂದಿನ ಸಮಾಜದಲ್ಲಿದ್ದ ಮೇಲು-ಕೀಳು, ಜಾತಿ, ಧರ್ಮ, ಮತ, ಪಂಥ, ಮೊದಲಾದವುಗಳಿಗೆಲ್ಲ ತಿತಾಂಜಲಿ ಎರೆದು ಆ ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳೆದ ಕೀರ್ತಿ  ಕನಕದಾಸರಿಗೆ ಸಲ್ಲುತ್ತದೆ. ಎಂದು ಪ್ರೋ ಮಹೇಂದ್ರ ಜಿ ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನಕದಾಸ ಜಯಂತಿ ಅಂಗವಾಗಿ ಭಕ್ತ ಕನಕದಾಸ ಎಂಬ ವಿಷಯ ಕುರಿತು ಮಾತನಾಡುತ್ತಾ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಕೆಂಚನಗೌಡರ ವಹಿಸಿದ್ದರು ಸರ್ವ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 

ಎಸ್ ಎಮ್ ಭೂಮರೆಡ್ಡಿ ಪದವಿ ಕಾಲೇಜು: ಭಕ್ತಿಯನ್ನು ಮೆರೆದ ಕನಕದಾಸರ ಜೀವನಕೊಂದು ಮೌಲ್ಯವಿತ್ತು ಅಂದಿನ ಎಲ್ಲ ಕಟ್ಟುಪಾಡುಗಳ ಎಲ್ಲೆಯನ್ನು ಮೀರಿ ತಮ್ಮ ಕೀರ್ತನೆಗಳನ್ನು ಹಾಡುವುದರೊಂದಿಗೆ ಜನಮಾನಸದಲ್ಲಿ ನೆಲೆನಿಂತ ಕೀತರ್ಿ ಕನಕದಾಸರದು ಇವರು ಪುರಂದರದಾಸರ ಸಮಕಾಲಿನವರಾಗಿದ್ದು ಸಾಕ್ಷಾತ್ಕಾರತೆಗೆ ತಮ್ಮನ್ನು ಒಗ್ಗಿಸಿಕೊಂಡು ಬಾಳಿದ್ದಾರೆಂದು ಪ್ರೋ. ಬಿ ವ್ಹಿ ಮುನವಳ್ಳಿ ಹೇಳಿದರು. ಅವರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 533 ಕನಕದಾಸರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಪ್ರೋ. ಎಸ್ ಕೆ ಕಟ್ಟಿಮನಿ, ತಮ್ಮಿನಾಳ, ಪ್ರೋ. ವದ್ನಾಳ, ಪ್ರೋ. ಕೋಟಿ, ಪ್ರೋ. ಗೌಡರ, ಎಲ್ ಕೆ ಹಿರೇಮಠ ಸೇರಿದಂತೆ ಸರ್ವ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು