ಮಾ.13ರಂದು ದಲಿತ ವಚನಕಾರರ ಜಯಂತಿ

ಧಾರವಾಡ 06: ದಲಿತ ಸಮುದಾಯಗಳಿಗೆ ಸೇರಿದ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಜಯಂತ್ಯುತ್ಸವವನ್ನು ಮಾರ್ಚ 13ರಂದು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಚರ್್ 13 ರಂದು ಕನರ್ಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.

      ಅಂದು ಬೆಳಿಗ್ಗೆ 9 ಗಂಟೆಗೆ ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದಿಂದ ಮೆರವಣಿಗೆ ಆರಂಭಿಸಲಾಗುವುದು. ಬೆಳಿಗ್ಗೆ 10-30 ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ವಚನಕಾರರ ಕುರಿತು ತಜ್ಞರಿಂದ ಉಪನ್ಯಾಸ, ವಚನ ಗಾಯನ ಏರ್ಪಡಿಸಲಾಗುವುದು ಎಂದರು.

   ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್. ಚನ್ನೂರ ಮಾತನಾಡಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

     ಅಬಕಾರಿ ನಿರೀಕ್ಷಕಿ ಮಮತಾ, ಮುಖಂಡರಾದ ಮಾಕರ್ಂಡೇಯ ದೊಡ್ಡಮನಿ, ಲಕ್ಷ್ಮಣ ಬಕ್ಕಾಯಿ, ಸಂತೋಷ ಸವಣೂರ, ಮಹದೇವ ದೊಡ್ಡಮನಿ, ಅಶೋಕ ಭಂಡಾರಿ ಮತ್ತಿತರರು ಇದ್ದರು.