ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ದೇಶದ ಸಂವಿಧಾನ: ಜಿಲ್ಲಾಧಿಕಾರಿ ಹಿರೇಮಠ

ಗದಗ 27: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ  ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ  ನಿನ್ನೆ ದಿ. 26ರಂದು ಜಿಲ್ಲಾಮಟ್ಟದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ಜರುಗಿತು.

      ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ದೇಶದ ಸಂವಿಧಾನ ಸಂಹಿತೆಯಾಗಿದ್ದು ಅದರಲ್ಲಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಮಗ್ರವಾಗಿ ಅಳವಡಿಸಿಕೊಂಡು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸರ್ವರೂ ಇಂದು  ಸಂವಿಧಾನ ದಿನದ ಅಂಗವಾಗಿ ಶಪಥ ಮಾಡಬೇಕು  ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ. ಆನಂದ.ಕೆ. ಅವರು ಮಾತನಾಡಿ ಸಂವಿಧಾನವನ್ನು ಕೇವಲ ಒಂದು ಪಠ್ಯವಾಗಿ ನೋಡದೇ ಅದರಲ್ಲಿರುವ ಪ್ರಜಾತಂತ್ರ, ಸಮಾಜವಾದ, ರಾಜತಂತ್ರ ಮುಂತಾದವುಗಳ ತಿರಳುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಗ್ರಾಮೀಣ ಜನರಿಗೆ ತಲುಪಿಸಿದಾಗಲೇ ಸಂವಿಧಾನದ ಆಶಯ ಸಂಪೂರ್ಣ ಈಡೇರಿದಂತಾಗುತ್ತದೆ ಎಂದು ಹೇಳಿದರು.  

ಕನರ್ಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಈಶ್ವರ ಭಟ್ ಅವರು ಮಾತನಾಡಿ ಸಂವಿಧಾನವು ರಾಷ್ಟ್ರದ ಮತ್ತು ಸಮಾಜದ ಎಲ್ಲ ರೀತಿಯ ತೊಂದರೆ ಸಮಸ್ಯಗಳಿಗೆ ಪರಿಹಾರ ಒದಗಿಸುತ್ತದೆ. ಸಂವಿಧಾನದ ಆಶಯ ವಿವಿಧತೆಯಲ್ಲಿ ಏಕತೆಯನ್ನು ಸಾರಿ ಸಾರಿ ಹೇಳುತ್ತದೆ ನಮ್ಮ ದೇಶ ಎಷ್ಟೇ ಸಾಂಸ್ಕೃತಿಕವಾಗಿ, ಬೌಗೋಳಿಕ, ಧಾಮರ್ಿಕ, ಸಾಮಾಜಿಕ  ವಿವಿಧತೆಯನ್ನು ಹೊಂದಿದ್ದರೂ ಕೂಡಾ ರಾಷ್ಟ್ರೀಯತೆಯ ಪ್ರತೀಕವಾಗಿ ಏಕತೆಯನ್ನು ಹೊಂದಿರುವುದು ನಮ್ಮ ಸಂವಿಧಾನದ ವಿಶೇಷತೆಯಾಗಿದೆ ಎಂದರು.

ಒಂದು ದೇಶ ಒಂದು ಸಂವಿಧಾನ ಕುರಿತು ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ಮತ್ತು  ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ   ಕುಲಪತಿಗಳಾದ ಪ್ರೊ. ಡಾ. ಸುರೇಶ ವ್ಹಿ. ನಾಡಗೌಡರ ಮಾತನಾಡಿ ವಿದ್ಯಾಥರ್ಿಗಳು ಯುವಜನರು ಸಂವಿಧಾನವನ್ನು ಹೆಚ್ಚು ಅಧ್ಯಯನ ಮಾಡುವಂತಾಗಬೇಕು. ಸಂವಿಧಾನವನ್ನು ಎಷ್ಟು ಆಳವಾಗಿ ತಿಳಿದರೆ ಅಷ್ಟೇ ಅದರಿಂದ ಸಮಗ್ರ ಸಹಾಯವು ಪರಿಹಾರವು ದೊರಕಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್ ಜಿ ಸಲಗೆರೆ ಅವರು ಸಂವಿಧಾನದ ಕುರಿತಂತೆ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.  ಪ್ರಕಾಶ ಮಾಚೇನಹಳ್ಳಿ ಕಾರ್ಯಕ್ರಮ ನಿರೂಪಿಪಿಸಿದರು. ನಮಿತಾ ಕಾಮತ್ ಪ್ರಾರ್ಥಿಸಿದರು.   ಉಮೇಶ ಬಾರಕೇರ ವಿಶೇಷಾಧಿಕಾರಿ ಸ್ವಾಗತಿಸಿದರು.   ಡಾ. ಶ್ರೀಧರ ಹಾದಿಮನಿ ವಂದಿಸಿದರು.