ಭಾರತ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ: ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರು ಅಂಡಗಿ


ಲೋಕದರ್ಶನ ವರದಿ

ಕೊಪ್ಪಳ 26: ಭಾರತ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಖಿತ ಹಾಗೂ ಪ್ರಪಂಚಯದ ಎಲ್ಲಾ ದೇಶಗಳಿಗೆ ಮಾದರಿಯ ಸಂವಿಧಾನವಾಗಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರು ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ. ಭಾರತದ ಸಂವಿಧಾನವು  448 ವಿಧಿಗಳು, 25 ಭಾಗಗಳು, 12 ಶೆಡ್ಯೋಲ್ ಹಾಗೂ 5 ಅನುಬಂಧವನ್ನು ಒಳಗೊಂಡ ಬಹು ದೊಡ್ಡ ಲಿಖಿತ ಸಂವಿಧಾನವಾಗಿರುವುದರ ಜೊತೆಗೆ ಟೈಪ್ ಮಾಡಿರುವುದಲ್ಲ ಅಥವಾ ಮುದ್ರತವೂ ಅಲ್ಲ.ಅದನ್ನು  ಕೈಯಲ್ಲಿ ಬರೆಯಲಾಗಿದ್ದು,ಸಂವಿಧಾನ ರಚನೆಗೆ ಬೇಕಾದ ವಿವಿಧ ಅಂಶಗಳನ್ನು ಬೇರೆ ದೇಶಗಳಿಂದ ಎರವಲು ಪಡೆಯಲಾಗಿದೆ. ಭಾರತದ ಸಂವಿಧಾನವನ್ನು 1949ರ ನವೆಂಬರ್ 26 ರಂದು ಅಂಗೀರಕಾರಗೊಂಡ ದಿನದ ಸವಿನೆನಪಿಗಾಗಿ ರಾಷ್ಟ್ರೀಯ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ.ಸಂವಿಧಾನದ ರಚನೆಗಾಗಿ 2 ವರ್ಷ 11 ತಿಂಗಳು 17 ದಿನಗಳ ಕಾಲ ನೂರಾರು ತಜ್ಞರು ಶ್ರಮಿವಹಿಸಿದ ಫಲವಾಗಿ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಸಿದ್ದವಾಗಿದೆ. ಡಾ.ಬಾಬು ರಾಜೇಂದ್ರ ಪ್ರಸಾದ ಸಂವಿಧಾನದ ರಚನಾ ಸಭೆಯ ಸಮಿಯ ಅಧ್ಯಕ್ಷರಾಗಿದ್ದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ಕರುಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ಭಾತರದ ಸಂವಿಧಾನ ದೇಶದ ಎಲ್ಲಾ ನಾಗರಿಕರಿಗೆ ಸಮಾನವಾದ ಅವಕಾಶವನ್ನು ನೀಡಲಾಗಿದೆ.ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯಗಳ ಜೊತೆಯಲ್ಲಿ ಅನೇಕ ಅಂಶವನ್ನು ಭಾರತ ಸಂವಿಧಾನ ಒಳಗೊಂಡಿದೆ.ಪ್ರತಿಯೊಬ್ಬ ನಾಗರಿಕನ್ನು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶಿಕ್ಷಕರಾದ ಗುರುರಾಜ ಕಟ್ಟಿ ಮಾತನಾಡಿ, ಭಾರತ ಸಂವಿಧಾನ ದಿನದ ಅಂಗವಾಗಿ ಮಕ್ಕಳಿಗೆ ಅದರ ಬಗ್ಗೆ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಬೇಕು ಜೊತೆಗೆ ಪ್ರಬಂಧ ಸ್ಪಧರ್ೆ,ಭಾಷಣ ಸ್ಫಧರ್ೇ ಹಾಗೂ ರಸಪ್ರಶ್ನೆಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಅಂದಾಗ ಮಾತ್ರ ಆ ಒಂದು ದಿನದ ಸಂಪೂರ್ಣ ಮಾಹಿತಿ ಮಕ್ಕಳಿಗೆ ಗೊತ್ತಾಗುವುದರ ಜೊತೆಗೆ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗಪ್ಪ ನರಿ, ಶಂಕ್ರಮ್ಮ ಬಂಗಾರಶೆಟ್ಟರ್, ಗಂಗಮ್ಮ, ಶೀಲಾ ಬಂಡಿ, ಜಯಶ್ರೀ ದೇಸಾಯಿ, ಭಾರತಿ ಕೊಡ್ಲಿ, ಗೌಸೀಯಾಬೇಗಂ, ರತ್ನಾ, ಮೋಹಿನಪಾಷಾಬೀ ಮುಂತಾದವರು ಹಾಜರಿದ್ದರು. ಬಿ.ಎಡ್. ಪ್ರಶಿಕ್ಷಣಾಥರ್ಿ ಭಾಗ್ಯಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಎಡ್.ಪ್ರಶಿಕ್ಷಣಾಥರ್ಿ ಅಕ್ಕಮಹಾದೇವಿ ಸ್ವಾಗತಿಸಿ, ಸುರೈಯಾಬೇಗಂ ವಂದಿಸಿದರು.