ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ: ಸತ್ರ ನ್ಯಾಯಾಧೀಶರು ಸಂಗ್ರೇಶಿ

ಗದಗ 28: ಭಾರತದ ಸಂವಿಧಾನ ರಚನೆಯಲ್ಲಿ ಡಾಃ ಬಿ.ಆರ್.ಅಂಬೇಡ್ಕರ್ರವರು ಪ್ರಮುಖ ಪಾತ್ರ ವಹಿಸಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಭಾರತದ ಸಂವಿಧಾನ ರಚಿಸಿದ್ದು ಭಾರತಕ್ಕೆ ದೊಡ್ಡ ಕೊಡುಗೆಯಾಗಿದೆ. ಡಾಃ ಅಂಬೇಡ್ಕರವರು ತಮ್ಮ ಜೀವನದಲ್ಲಿ ಅನುಬವಿಸಿದ ಘಟನೆಗಳ ಆಧಾರದ ಮೇಲೆ ಸಂವಿಧಾನದ ಪೀಠಿಕೆ, ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಮ್ಮ ಕರ್ತವ್ಯ ಏನು ಎಂಬುದನ್ನು ಎಲ್ಲರು ಮೊದಲು ಅರಿಯಬೇಕು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮತ್ತೊಬ್ಬರ ಹಕ್ಕಿಗೆ ಚ್ಯುತಿ ಬರದಂತೆ ನಡೆದರೆ ನಾವು ಕಾನೂನಿಗೆ ಗೌರವ ಕೊಟ್ಟಂತೆ. 'ಸರ್ವದರ್ಮ ಸದ್ಭಾವನೆ- ಸರ್ವದರ್ಮ ಸಮನ್ವಯತೆ' ಸರ್ವರಿಗೂ ನ್ಯಾಯ, ಸರ್ವರಿಗೂ ಸಮಬಾಳು,-ಸರ್ವರಿಗೂ ಸಮಪಾಲು' ನಮ್ಮ ಸಂವಿಧಾನದ ಆಶಯವಾಗಿದೆ, ಸಂವಿಧಾನ ಅಪರ್ಿಸಿಕೊಂಡು ಇಂದಿಗೆ 70 ವರ್ಷಗಳನ್ನು ಪೂರೈಸಿದ್ದು, ಆ ಸವಿನೆನಪಿಗಾಗಿ ಇಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದ್ಯಕ್ಷರಾದ ಜಿ.ಎಸ್.ಸಂಗ್ರೇಶಿ ಅವರು ನುಡಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಪ ಹಾಗೂ ನ್ಯಾಯಾಂಗ ಇಲಾಖೆ ಗದಗ ಇವರ ಸಂಯುಕ್ತಾಶ್ರಯಲ್ಲಿ ಗದಗ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಡ ಸಂಕಲ್ಪ ಮಾಡಿ ಎಂದು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ  ರೂಪಾ ಎಸ್. ನಾಯ್ಕ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ವಿ.ನರಶಿಂಸಾ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಪಿ.ಜಿ.ಚಲುವಮೂತರ್ಿ ಪಾಲ್ಗೊಂಡಿದ್ದರು. ಸಮಾರಂಬದ ಅದ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ಆರ್.ಬಿ. ಚಳ್ಳಮರದ ವಹಿಸಿದ್ದರು.

ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಪ್ರಜ್ವಲ ಕೆ.ಉಡುಪಿ ಅವರು ಸಂವಿಧಾನ ದಿನಾಚರಣೆ ಮಹತ್ಛ, ಸಂವಿಧಾನದ ಪೂರ್ವಪೀಠಿಕೆ, ಮೂಲಬೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಪ್ರಾರಂಬದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಎಸ್.ಜಿ. ಸಲಗರೆ ಅವರು ಸರ್ವರನ್ನು ಸ್ವಾಗತಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ  ವಾಯ್.ಡಿ.ತಳವಾರ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ನ್ಯಾಯಾಧೀಶರು, ವಕೀಲಬಾಂದವರು, ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.