ಸಂವಿಧಾನ ಎಲ್ಲ ಜನಾಂಗಗಳ ಬದುಕಿಗೆ ದಾರಿ ದೀಪ

ಲೋಕದರ್ಶನ ವರದಿ

ಬೈಲಹೊಂಗಲ 28: ದೇಶದ ಮುಂದಿನ ಪರಿಕಲ್ಪನೆ ಇಟ್ಟುಕೊಂಡು ಡಾ.ಬಿ.ಆರ್. ಅಂಬೇಡ್ಕರ, ಅನೇಕ ವಿದ್ವಾಂಸರು ರೂಪಿಸಿದ ಸಂವಿಧಾನ ಎಲ್ಲ ಜನಾಂಗಗಳ  ಬದುಕಿಗೆ ದಾರಿ ದೀಪವಾಗಿದೆ ಎಂದು ನ್ಯಾಯಾಧೀಶೆ ಶ್ರೀಕಾವೇರಿ ಕಲ್ಮಠ ಹೇಳಿದರು.

     ಅವರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ, ನ್ಯಾಯವಾದಿಗಳ ಸಂಘ, ಪ್ಯಾನೇಲ್ ವಕೀಲರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಿಮಿತ್ಯ ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟಿಸಿ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ನ್ಯಾಯಾಧೀಶರು, ನ್ಯಾಯವಾದಿಗಳು ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿ ಸಂವಿಧಾನ ಪಾಲಿಸಬೇಕು ಎಂದರು.

ಹಿರಿಯ ನ್ಯಾಯವಾದಿ ಝಡ್.ಎ. ಗೋಕಾಕ ಉಪನ್ಯಾಸ ನೀಡಿ, ಸಂವಿಧಾನ ಕಾನೂನುಗಳ ತಾಯಿ ಇದ್ದಂತೆ ಅದು ಎಲ್ಲರಿಗೂ ಸಮಾನತೆ ನೀಡಿದೆ. ಧರ್ಮಗಳನ್ನು ಒಬ್ಬರಿಗೊಬ್ಬರು ಗೌರವಿಸಬೇಕೆಂದು ತಿಳಿಸಿದೆ. ಸಂವಿಧಾನದ ವಿರುದ್ದ ಯಾವುದೇ ಕಾನೂನು ಕಾನೂನಲ್ಲ ಎಂದರು.

    ನ್ಯಾಯವಾದಿ ಎಸ್.ಎಸ್. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಆಶಯದಂತೆ ನಡೆದುಕೊಳ್ಳುವದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

    ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೇಳವಂಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ನ್ಯಾಯಾಲಯಕ್ಕೆ ಹೈಕೋರ್ಟ ನ್ಯಾಯವಾದಿಗಳ ಛೇಂಬರ್, ಸಾಕ್ಷೀದಾರರ ಕೊಠಡಿ ಮಂಜೂರಿಸಿದ್ದು, ಸ್ಥಳದ ಕುರಿತು ಚರ್ಚಿಸಿ ಕಟ್ಟಡ ಪ್ರಾರಂಭಿಸಲಾಗುವದು ಎಂದರು.ವೇದಿಕೆಯ ಮೇಲೆ ನ್ಯಾಯಾಧೀಶೆಯರಾದ ಚೈತ್ರಾ ಎ.ಎಂ. ಸೌಭಾಗ್ಯ ಭೂಸೇರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ.ಎಸ್. ಕುಲ್ಕರ್ಣಿ, ಪ್ರಧಾನ ಕಾರ್ಯದರ್ಶಿ ದುಂಡೇಶ ಗರಗದ, ಎಪಿಪಿ ರಂಜನಾ ಪಾಟೀಲ, ಎಂ.ಎಸ್.ದೇಶಪಾಂಡೆ, ಎಜಿಪಿ ರಮೇಶ ಕೋಲಕಾರ ಇದ್ದರು.

   ಹಿರಿಯ ನ್ಯಾಯವಾದಿ ಸಿ.ಎಸ್. ಚಿಕ್ಕನಗೌಡರ, ಎಂ.ಎಂ. ಬೆಲ್ಲದ, ಜೆ.ಕೆ. ರೀಜಾ, ಬ.ಆರ್. ಅಲಸಂದಿ, ಎಂ.ವಾಯ್. ಸೋಮನ್ನವರ, ಶ್ರೀಶೈಲ ಹೊಳಿ, ರವಿ ಮೆಟಗುಡ್ಡ, ಎಸ್.ಜಿ. ಬೂದಯ್ಯನವರಮಠ, ಎಫ್.ಎಸ್. ಸಿದ್ದನಗೌಡರ, ಜಿ.ಬಿ. ಈರಪ್ಪಗೋಳ, ಬಸವಣ್ಣೆಪ್ಪ ಪೂಜೇರ, ಎಸ್.ಜಿ. ಚಿಕ್ಕಮಠ, ಸಂತೋಷ ಲದ್ದಿಗಟ್ಟಿ, ಯು.ಸಿ. ಹಿರೇಮಠ, ಎಂ.ಎಂ. ಅಬ್ಬಾಯಿ, ಸಿ.ಎಚ್. ಹೊಮನಿ, ಎನ್.ಎಂ. ಮೇಳ್ಳಿಕೇರಿ, ಪಿ.ಬಿ. ಮರಿಕಟ್ಟಿ, ಎಸ್.ವಿ. ಸಿದ್ದಮನಿ, ಬಸವರಾಜ ದೋತರದ, ಯು.ಕೆ. ಬುಲಾಖೆ, ಎ.ಆಯ್. ಧುಮಾಳೆ, ಜಿ.ಜಿ. ಬೂದಿಹಾಳ. ಸಿದ್ದು ಗದಗ, ಎಸ್.ಟಿ. ಮಲ್ಲಾರಿ, ಎಂ.ಎಸ್. ಅಂಬಡಗಟ್ಟಿ, ಅಶ್ವಿನಿ ಪತ್ತಾರ, ವಿಠಲ ಕಟದಾಳ, ಆಯ್.ಎಸ್. ಪಾಟೀಲ, ಈರಣ್ಣ, ಮೇಟಿ ಹಾಗೂ ನೂರಾರು ನ್ಯಾಯವಾದಿಗಳು ಇದ್ದರು. 

ಕೆ.ಎಸ್. ಕುಲಕರ್ಣಿ ಸ್ವಾಗತಿಸಿದರು. ಎಸ್.ಸಿ. ಕರೀಕಟ್ಟಿ ನಿರೂಪಿಸಿದರು. ಸಂತೋಷ ಭಾಂವಿ ವಂದಿಸಿದರು.