ಮೋದಿಯನ್ನು ತಬ್ಬಿದ ರಾಹುಲ್ ಚಿತ್ರವನ್ನು ಫ್ಲೆಕ್ಸ್ ನಲ್ಲಿ ಹಾಕಿದ ಕಾಂಗ್ರೆಸ್

ಮುಂಬೈ: ಮುಂಬೈ ಕಾಂಗ್ರೆಸ್ ಘಟಕವು ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ತನ್ನ ಫ್ಲೆಕ್ಸ್ ಒಂದರಲ್ಲಿ ಅಳವಡಿಸಿಕೊಂಡಿದೆ.

ಅವಿಶ್ವಾಸ ನಿರ್ಣಯದ ವೇಳೆ ರಾಹುಲ್ ಗಾಂಧಿ ಮೋದಿಯವರನ್ನು ಅಪ್ಪಿಕೊಂಡ ಸಂಗತಿ ವ್ಯಾಪಕ ಚರ್ಚೆಯಾಗುತ್ತಿರುವಾಗಲೇ ಮುಂಬೈನ ಕಾಂಗ್ರೆಸ್ ಘಟಕ ಚಿತ್ರವಿರುವ ದೊಡ್ಡ ಫ್ಲೆಕ್ಸ್ ಅನ್ನು ಮುಂಬೈ ಸಾರ್ವಜನಿಕ ಸ್ಥಳದಲ್ಲಿ ಹಾಕಿದೆ.

ಮುಂಬೈನ ಅಂಧೇರಿಯಲ್ಲಿ ಹಾಕಲಾದ ಫ್ಲೆಕ್ಸ್ ನಲ್ಲಿ ಕೋಪದಿಂದಲ್ಲ ಪ್ರೀತಿಯಿಂದಲೇ ಗೆಲುವು ಸಾಧ್ಯ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಫ್ಲೆಕ್ಸ್ ಹಾಕಿಸಿದ್ದು ಇದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಚಿತ್ರಗಳೊಡನೆ ತಮ್ಮ ಚಿತ್ರವನ್ನೂ ಸೇರಿಸಿಕೊಂಡಿದ್ದಾರೆ.