ಬೆಂಗಳೂರು, ಡಿ.25-ಕಾಂಗ್ರೆಸ್ಗೆ ಅತೃಪ್ತರ ಕುಣಿಕೆ ಬಿಗಿಯಾಗತೊಡಗಿದೆ. ಒಂದೆರಡು ದಿನಗಳಲ್ಲಿ ಭಿನ್ನಮತ ಸಹಜವಾಗಿಯೇ ಬಗೆಹರಿಯುತ್ತದೆ ಎಂಬ ಕಾಂಗ್ರೆಸ್ ನಿಲುವು ಕೈಕೊಟ್ಟಂತಿದೆ.
ದಿನೇ ದಿನೇ ಅತೃಪ್ತರ ಪಟ್ಟು ಬಿಗಿಯಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರೊಂದಿಗೆ ಬಿಜೆಪಿಯವರು ಮಾತುಕತೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ.
ಹೈಕಮಾಂಡ್ ನಾಯಕರು ಮಾತುಕತೆ ನಡೆಸಲು ಆಗಮಿಸುವ ಮುನ್ನವೇ ಭಿನ್ನಮತ ಸರಿಪಡಿಸುವ ಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.
ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಹಲವು ಬಿಬಿಎಂಪಿ ಸದಸ್ಯರು ತೀಮರ್ಾನಿಸಿ, ಈ ಸಂಬಂಧ ನಾಳೆ ಸಭೆ ನಡೆಸಲು ಮುಂದಾಗಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಟ್ಟಿರುವ ರಮೇಶ್ ಜಾರಕಿ ಹೊಳಿ ಎಐಸಿಸಿ ಪ್ರಧಾನಕಾರ್ಯದಶರ್ಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲು ನಿರಾಕರಿಸಿದ್ದಾರೆ.
ಇಂದು ಸಂಜೆ ವೇಣುಗೋಪಾಲ್ ಅವರು ನಗರಕ್ಕೆ ಆಗಮಿಸಲಿದ್ದು, ಅವರ ಆಗಮನಕ್ಕೂ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರು ಬೆಳಗಾವಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಅತೃಪ್ತರ ಮನವೊಲಿಕೆ ಯತ್ನಗಳು ನಡೆದವು.
ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಭೀಮಾನಾಯಕ್, ಸುಧಾಕರ್ ಮುಂತಾದವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.
ಸಂಪುಟ ವಂಚಿತರ ಭಿನ್ನಮತ ಶಮನಗೊಂಡಿಲ್ಲ. ಹಲವರು ಸಂಪರ್ಕಕ್ಕೆ ಸಿಕ್ಕಿಲ್ಲ.ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ಈ ಎಚ್ಚರಿಕೆಗೆ ಕೇರ್ ಮಾಡದ