ಹಾನಿಯ ವಾಸ್ತವ ವರದಿ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ಸೂಚನೆ

ಹಾವೇರಿ:   ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿಯ ವಿವರವನ್ನು ಮೂರುದಿನದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕನರ್ಾಟಕ ಸಕರ್ಾ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯಶರ್ಿಗಳು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ವಿ.ಮಂಜುಳಾ ಸೂಚಿಸಿದರು.

ಅತಿವೃಷ್ಠಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಗಳ ಸಭೆ ಹಾಗೂ ತಾಲೂಕಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಯಾವುದೇ ಕ್ಷಣದಲ್ಲಿ ಕೇಂದ್ರ ಸಕರ್ಾರ ವರದಿ ಕೇಳಬಹುದು. ಕೇಂದ್ರ ತಂಡವು ತಪಾಸಣೆಗೆ ಬರಬಹುದು. ಹಾನಿಯ ವರದಿ ರಾಜ್ಯ ಸಕರ್ಾರದ ಬಳಿ ಸಿದ್ಧವಾಗಿರಬೇಕು. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಹಾನಿಯ ಪ್ರಮಾಣವನ್ನು ಸಂಗ್ರಹಿಸಿ ಸಕರ್ಾರಕ್ಕೆ ಸಲ್ಲಿಸಬೇಕು. ಟೀಮ್ಗಳನ್ನು ರಚಿಸಿಕೊಂಡು ಹಗಲುರಾತ್ರಿ ಎನ್ನದೆ ಕಾರ್ಯನಿರ್ವಹಿಸಿ, ತಪ್ಪು ಮಾಹಿತಿ ನೀಡಬೇಡಿ. ಉತ್ಪೇಕ್ಷಿತ ಅಂದಾಜುಮಾಡಬೇಡಿ, ಹಳೆಯ ಕಾಮಗಾರಿಗಳನ್ನು ಅತಿವೃಷ್ಠಿಯ ಕಾಮಗಾರಿಗಳಿಗೆ ಸೇರಿಸಬೇಡಿ. ಸ್ಥಳ ಪರಿಶೀಲನೆಮಾಡಿ ವಸ್ತುಸ್ಥಿತಿ ಹಾಗೂ ನಿಖರವಾದ  ವರದಿ ಸಲ್ಲಿಸುವಂತೆ ಸೂಚಿಸಿದರು.

ಮೂಲಭೂತ ಸೌಕರ್ಯಗಳ ಹಾನಿಯ ಕುರಿತಂತೆ ವರದಿ ತಯಾರಿಸುವಾಗ ತಾತ್ಕಾಲಿಕ ಹಾಗೂ ಖಾಯಂ ದುರಸ್ಥಿ ಎಂದು ಪರಿಗಣಿಸಬೇಕು. ತಾತ್ಕಾಲಿಕವಾಗಿ ಸಂಪರ್ಕವನ್ನು ತ್ವರಿತಗತಿಯಲ್ಲಿ ಕಲ್ಪಿಸಬೇಕು. ಶಾಶ್ವತ ದುರಸ್ಥಿಯ ಕಾಮಗಾರಿಗಳ ವೆಚ್ಚದ ಕ್ರಿಯಾಯೋಜನೆಯನ್ನು ಆಯಾ ಇಲಾಖೆ ಮೂಲಕ ಅನುದಾನ ಪಡೆಯಬೇಕು. ಎನ್..ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪರಿಹಾರ ಪಡೆಯಬೇಕಾದ ವಿವರವನ್ನು ಪ್ರತ್ಯೇಕವಾಗಿ ತಯಾರಿಸಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಂಜನೀಯರಗಳಿಗೆ ಸೂಚಿಸಿದರು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿ ಕುರಿತಂತೆ ವರದಿಯನ್ನು ಸಿದ್ಧಪಡಿಸಬೇಕು. ಒಂದೊಮ್ಮೆ ಮಳೆಯ ನೀರು ಹೊಲದಲ್ಲಿ ನಿಂತಿದ್ದರೆ ಬೆಳೆ ರಕ್ಷಣೆಗೆ ಕಾಲುವೆ ತೋಡುವುದು, ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದರೆ ತಕ್ಷಣ ಪಯರ್ಾಯ ಬೆಳೆಗಳನ್ನು ಹಾಕುವ ಕುರಿತಂತೆ ರೈತರಿಗೆ ಮಾರ್ಗದರ್ಶನ ನೀಡಬೇಕು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮೂರು ಹಂತದಲ್ಲಿ ಮನೆಹಾನಿ ಸವರ್ೇ ನಡೆಸಬೇಕಾಗಿದೆ. ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜನೀಯರಗಳ ತಂಡ ರಚಿಸಿ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದರು.

  ಮೂರು ದಿನಗಳಲ್ಲಿ ಹಾನಿಯ ನಿಖರ ಮಾಹಿತಿ ಸಂಗ್ರಹಿಸಿ ನಷ್ಟಕ್ಕೊಳಗಾದವರಿಗೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿತರಣೆ ಆರಂಭವಾಗಬೇಕು. ಮನೆ ಇಲ್ಲದೆ  ಗುಡಿಸಲು ಹಾಕಿಕೊಂಡು ಮಳೆಯಿಂದ ಸಂತ್ರಸ್ಥರಾದ ಅಲೆಮಾರಿ ಹಾಗೂ ಡೊಂಬರ ಜನಾಂಗದವರಿಗೆ ನಿವೇಶನವಿದ್ದರೆ ರಾಜೀವಗಾಂಧಿ ವಸತಿ ನಿಗಮದಿಂದ ಮನೆ ನಿಮರ್ಾಣಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಗುರುತಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.

ನೆರೆ ಅತಿವೃಷ್ಠಿಯಿಂದ ಮರಣಹೊಂದಿರುವ ಜಾನುವಾರುಗಳು ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಿ ಎರಡು ದಿನದೊಳಗಾಗಿ ಪರಿಹಾರ ಹಣವನ್ನು ನೀಡಲು ಸೂಚನೆ ನೀಡಿದರು.

  ಮೊಬೈಲ್ ಟೀಮ್ಗಳನ್ನು ರಚಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆಗಳು ನಡೆಯಬೇಕು. ಗ್ರಾಮಗಳಿಗೆ ಶುದ್ಧ ನೀರನ್ನು ಪೂರೈಸಬೇಕು. ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಕ್ಲೋರಿನೇಷನ್ ಮಾಡಬೇಕು. ಪರಿಹಾರ ಕೇಂದ್ರಗಳಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸ್ಥಳವಕಾಶ, ಶೌಚಾಲಯ, ಶುದ್ಧ ಕುಡಿಯುವ ನೀರು, ನಿರಂತರ ಆರೋಗ್ಯ ತಪಾಸಣೆ, ಊಟ ಒದಗಿಸಬೇಕು.  ಉಸ್ತುವಾರಿಗೆ ಗೆಜೆಟೆಡ್ ಅಧಿಕಾರಿಯೋರ್ವವನ್ನು ನೇಮಕಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತಿ  ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.