ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ

ನವದೆಹಲಿ, ಏ ೫(ಯುಎನ್‌ಐ)  ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಮುಖ್ಯಸ್ಥ ಎ.ಪಿ.  ಮಹೇಶ್ವರಿ   ಸ್ವಯಂ  ನಿರ್ಬಂಧನಕ್ಕೊಳಗಾಗಿದ್ದಾರೆ. ಅವರ ಮುಖ್ಯ ವೈದ್ಯಾಧಿಕಾರಿಗೆ  ಕೊರೊನಾ  ವೈರಸ್   ದೃಢಪಟ್ಟಿರುವ ಹಿನ್ನಲೆಯಲ್ಲಿ  ವೈದ್ಯರ  ಸಲಹೆ   ಮೇರೆಗೆ  ಮೇರೆಗೆ   ಸ್ವಯಂ  ಕ್ವಾರಂಟೈನ್  ತೆರಳಿದ್ದಾರೆ.  ಸಿಆರ್‌ಪಿಎಫ್ ಮುಖ್ಯಸ್ಥರಲ್ಲದೆ,  ಮುಖ್ಯ ವೈದ್ಯಾಧಿಕಾರಿಯ ಸಂಪರ್ಕದಲ್ಲಿದ್ದ   ಇನ್ನೂ  ೨೦ ಮಂದಿಯನ್ನು  ಕ್ವಾರಂಟೈನ್   ಕೇಂದ್ರಗಳಿಗೆ  ಕಳುಹಿಸಲಾಗಿದೆ. ಮುನ್ನೆಚ್ಚರಿಕೆಯ  ಕ್ರಮವಾಗಿ  ಎಲ್ಲ ವ್ಯಕ್ತಿಗಳ  ರಕ್ತ, ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಾ ಕೇಂದ್ರಗಳಿಗೆ ರವಾನಿಸಿದ್ದಾರೆ.  ಸಿಆರ್‌ಪಿಎಫ್ ಮುಖ್ಯಸ್ಥರಿಗೆ  ವೈದ್ಯಕೀಯ ಸೇವೆ ಒದಗಿಸುವ ವೈದ್ಯರಿಗೆ   ಸೋಂಕು  ತಗುಲಿರುವ  ಹಿನ್ನಲೆಯಲ್ಲಿ   ಎಚ್ಚೆತ್ತುಕೊಂಡಿರುವ   ಅಧಿಕಾರಿಗಳು,   ವೈದ್ಯರ  ಸಂಪರ್ಕಕ್ಕೆ ಬಂದಿದ್ದ ಪ್ರತಿಯೊಬ್ಬರನ್ನು  ಗುರುತಿಸಿ ಪರೀಕ್ಷೆ ನಡೆಸುತ್ತಿದ್ದಾರೆ.