ಬಾಲಕರ ವಸತಿ ನಿಲಯಕ್ಕೆ ಜಿ.ಪಂ ಸಿಇಓ ಭೇಟಿ

ಬಾಗಲಕೋಟೆ: ನವನಗರದ ಸೆಕ್ಟರ್ ನಂ.46 ರಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮಂಗಳವಾರ ರಾತ್ರಿ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಸಮರ್ಪಕ ಕಾರ್ಯನಿರ್ವಹಣೆ ಕಂಡು ವಾರ್ಡನ್ಗಳಿಗೆ ಕಾರಣಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದ ವಾರ್ಡನ್ ಇಲ್ಲದಿರುವುದು, ವಸತಿ ನಿಲಯದ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ಪರಿಶೀಲಿಸಿದಾಗ ಅವುಗಳನ್ನು ದುರಸ್ಥಿ ಮಾಡಿಸದೇ ಇರುವುದು ಕಂಡುಬಂದಿತು. ಅಲ್ಲದೇ ವಸತಿ ನಿಲಯಗಳ ಸ್ವಚ್ಚತೆಯನ್ನು ಕಾಪಾಡದೇ ಇರುವುದು ತಿಳಿದು ಬಂದಿತು. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟದ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲದೇ ವಿದ್ಯಾಥರ್ಿಗಳಿಗೆ ಗಾದಿಯನ್ನು ಸಹ ನೀಡದಿರುವದು ಕಂಡುಬಂದಿತ್ತು.

  ಇವೆಲ್ಲ ಅಂಶಗಳನ್ನು ಪರಿಗಣಿಸಿ ವಸತಿ ನಿಲಯ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದನ್ನು ವಾರ್ಡನ್ಗಳಿಗೆ ನೋಟಿಸ್ ನೀಡಲು ಕಂಡು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಅದೇ ರೀತಿ ಕಲಾದಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಸಿಬ್ಬಂದಿಗಳು ಇಲ್ಲದಿರುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಆಯುಷ್ ವೈದ್ಯಾಧಿಕಾರಿಗಳು, ಲ್ಯಾಬ್ ಟೆಕ್ನಿಸಿಯನ್ ಮತ್ತು ಪಾಮರ್ಾಸಿಸ್ಟ್ಗಳು ಗೈರು ಹಾಜರಿರುವುದು ಹಾಗೂ ದಿನನಿತ್ಯ ನಿರ್ವಹಿಸಬೇಕಾದ ರಜಿಸ್ಟರಗಳಲ್ಲಿ ಸಮರ್ಪಕ ದಾಖಲೆ ಮಾಡದೇ ಇರುವುದು ಕಂಡುಬಂದ ಹಿನ್ನಲೆಯಲ್ಲಿ ಗೈರು ಹಾಜರಾದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಹೆರಿಗೆಗೆ ಬಂದ ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿರುವ ಬಗ್ಗೆ ರೆಜಿಸ್ಟರನಲ್ಲಿ ನಮೂದಿಸಿದ್ದಾರೆ. ಆದರೆ ಮಹಿಳೆಯ ಸ್ಥಿತಿ ಗತಿ ಬಗ್ಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಬಗ್ಗೆ ರಜಿಸ್ಟರನಲ್ಲಿ ಮಾಹಿತಿ ಪರಿಶೀಲಿಸಿದಾಗ ಮಾಹಿತಿ ನಮೂದಿಸದೇ ಇರುವುದು. ನವೆಂಬರ ಮಾಹೆಯಲಿ ಹೆರಿಗೆಯಾದ ಬಹಳಷ್ಟು ಪ್ರಕರಣಗಳಲ್ಲಿ ಅಂದೇ ಬಿಡುಗಡೆ ಮಾಡಿರುವ ಬಗ್ಗೆ ತಿಳಿದು ಬಂದಿತು. ರತ್ನಾ ಈರಪ್ಪ ಎಂಬ ಮಹಿಳೆಗೆ ನವೆಂಬರ 18 ರಂದು ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿದ್ದು, ಅಂದೇ ಬಿಡುಗಡೆ ಮಾಡಿರುವುದು ಕಂಡು ಬಂದಿತು. 

ಹೆರಿಗೆಯಾದ ಮಹಿಳೆಯನ್ನು ಕನಿಷ್ಠ 48 ಗಂಟೆ ವೈದ್ಯರ ನಿಗಾವಣೆಯಲ್ಲಿ ಇಡಬೇಕು. ಮತ್ತು ಹುಟ್ಟಿದ ಮಗುವಿಗೆ ವ್ಯಾಕ್ಸಿನ್ ಹಾಕಬೇಕಾಗಿರುವುದು ವೈದ್ಯರ ಆದ್ಯ ಕರ್ತವ್ಯವಾಗಿದ್ದು, ಇದನ್ನು ಮಾಡದೇ ಎಂಎಂಆರ್ ಮತ್ತು ಆಯ್ಎಂಆರ್ ಹೆಚ್ಚಿಗೆ ಆಗಲು ಕಾರಣರಾಗಿದ್ದರಿಂದ ಆಯುಷ್ ವೈದ್ಯಾಧಿಕಾರಿ, ಲ್ಯಾಬ್ ಟೆಕ್ನಿಸಿಯನ್ ಮತ್ತು ಪಾಮರ್ಾಸಿಸ್ಟ್ಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿ.ಪಂ ಸಿಇಓ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.