ಜನಜಾಗೃತಿ ವಸ್ತು ಪ್ರದರ್ಶನಕ್ಕೆ ಸಿಇಓ ಚಾಲನೆ

ಬಾಗಲಕೋಟೆ: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಡಿಯುವ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಕಾರ್ಯಕ್ರಮಗಳ ಕುರಿತಂತೆ ಹಮ್ಮಿಕೊಂಡ ಜನಜಾಗೃತಿ ವಸ್ತುಪ್ರದರ್ಶನಕ್ಕೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.

     ನವನಗರದಲ್ಲಿರುವ ಜಾನಪದ ವಸ್ತು ಸಂಗ್ರಹಾಲಯದ ಮುಖ್ಯದ್ವಾರದಲ್ಲಿ ಹಮ್ಮಿಕೊಂಡ ಜನಜಾಗೃತಿ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದು ಶ್ಲಾಘನೀಯವಾದುದು.

    ಇಂತಹ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಸರಕಾರದ ವಿವಿಧ ಕಾರ್ಯಕ್ರಮಗಳ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.        ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ ಆರೋಗ್ಯದ ದೃಷ್ಠಿಯಿಂದ ಹಲವು ಉಪಯುಕ್ತವಾದ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಇಡಲಾಗಿದೆ. ಈ ವಸ್ತು ಪ್ರದರ್ಶನ ಆ. 20 ರಂದು ಸಹ ಬೆಳಿಗ್ಗೆಯಿಂದ ಸಂಜೆವರೆಗೂ ನಡೆಯಲಿದ್ದು, ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಈ ವಸ್ತು ಪ್ರದರ್ಶನದಲ್ಲಿ ಗೃಹ ಆಧಾರಿತ ನವಜಾತ ಶಿಶು ಆರೈಕೆ, ತಾಯಂದಿರ ಸಂಪೂರ್ಣ ವಾಸ್ತಲ್ಯ ಕಾರ್ಯಕ್ರಮ, ಮಾನಸಿಕ ಆರೋಗ್ಯ, ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಿಕೊಳ್ಳಿ, ಜನನಿ-ಶಿಶು ಸುರಕ್ಷಾ ಕಾರ್ಯಕ್ರಮ, ತಾಯಿ ಕಾರ್ಡ, ರಕ್ತಹೀನತೆಯನ್ನು ತಡೆಗಟ್ಟಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪೌಷ್ಠಿಕ ಆಹಾರ ಮಾದರ, ಪುನಶ್ಚೇತನ ಕೇಂದ್ರಗಳು, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ, ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಖಾಯಿಲೆಗಳನ್ನು ತಡೆಗಟ್ಟಬಹುದು.

   ಇವುಗಳ ನಿಯಂತ್ರಣ ನಿಮ್ಮ ಕೈಯಲ್ಲಿ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ನೇಕಾರರ ಸಾಲ ಮನ್ನಾ, ಸಮೃದ್ದ ಕನರ್ಾಟಕದ ನಿಮರ್ಾಣಕ್ಕೆ ದೃಢ ಹೆಜ್ಜೆಗಳು, ಮೀನುಗಾರರ ಸಾಲಮನ್ನಾ ಸೇರಿದಂತೆ ಇತರೆ ಮಾಹಿತಿ ಫಲಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.