ಬೆಳಗಾವಿ/ಸಂಕೇಶ್ವರ 02: ರಾಜ್ಯದಲ್ಲಿ ಸಮಿಶ್ರ ಸರಕಾರದ ಪರಿಸ್ಥಿತಿ ಡೋಲಾಯಮಾನವಾಗಿದ್ದು, ಇನ್ನಾರು ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆಂದು ಮಾಜಿ ಸಚಿವ ಉಮೇಶ ಕತ್ತಿ ಭವಿಷ್ಯ ನುಡಿದಿದ್ದಾರೆ.
ಪಟ್ಟಣದಲ್ಲಿ ಹಿರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬುವ ಯೋಜನೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿಯವರೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂಬ ಹೇಳಿಕೆಗೆ ಪರೋಕ್ಷವಾಗಿ ಉತ್ತರಿಸಿರುವ ಅವರು ಕೆಲ ದಿನ ಸಮಯ ಸಿಕ್ಕಿದ್ದರೆ ಇಂದು ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದರೂ ಆದರೂ ಇನ್ನಾರು ತಿಂಗಳಿನಲ್ಲಿ ಯಾರ ಹಸ್ತಕ್ಷೇಪವೂ ಇಲ್ಲದೇ ಸರಕಾರ ಪತನವಾಗಲಿದೆ ಎಂದರು.
ವಚನಭ್ರಷ್ಟ: ಜೆಡಿಎಸ್ ಪ್ರಣಾಳಿಕೆಯಲ್ಲಿ ರಾಜ್ಯದ ರೈತರನ್ನು ಸಾಲದಿಂದ ಮುಕ್ತವನ್ನಾಗಿಸುವ ಘೋಷಣೆ ಮಾಡಿ ಇದೀಗ ಕೊಟ್ಟ ಮಾತನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಪ್ಪಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಪಕ್ಷವಾಗಿರುವ ಬಿಜೆಪಿ ಈ ವಿಷಯವನ್ನು ಹಿಂದೆ ಪಡೆಯಲು ಬಿಡುವದಿಲ್ಲ. ಸಾಲಮನ್ನಾ ಮಾಡುವದಾಗಿ ಹೇಳಿ ಇದೀಗ ಬೆಳೆಸಾಲ ಮಾತ್ರ ಮನ್ನಾ ಮಾಡುವದಾಗಿ ಹೇಳುತ್ತಿರುವುದು ಸರಿಯಲ್ಲ. ಇದು ಸಹ ವಚನಭ್ರಷ್ಟತೆಯ ಪಟ್ಟ ಪಡೆದುಕೊಳ್ಳಲಿದೆ. ಈಗ ಸರಕಾರ ಸಾಲಮನ್ನಾ ಮಾಡಿದರೂ ಮುಂಬರುವ ಸರಕಾರಗಳೇ ಅದನ್ನು ಭರಿಸಬೇಕಿದ್ದು, ಸಾಲಮನ್ನಾ ವಿಷಯದಲ್ಲಿ ಸರಕಾರ ಹಿಂದೇಟು ಹಾಕಬಾರದು ಎಂದರು.
ಉತ್ತರ ಕನರ್ಾಟಕಕ್ಕೆ ಅನ್ಯಾಯ: ರಾಜ್ಯ ಸಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉತ್ತರ ಕನರ್ಾಟಕಕ್ಕೆ ಅನ್ಯಾಯ ಮಾಡಿದ್ದು, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಉತ್ತರ ಕನರ್ಾಟಕಕ್ಕೂ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕಿತ್ತು ಎಂದು ಸಮಥರ್ಿಸಿಕೊಂಡರು.