ವಿಜೃಂಭಣೆಯಿಂದ ಜರುಗಿದ ಬಸವೇಶ್ವರ ಜಾತ್ರೆ

The Basaveshwar fair was celebrated with grandeur

ಯಮಕನಮರಡಿ 23: ಹುಕ್ಕೆರಿ ತಾಲೂಕಿನ ಕರಗುಪ್ಪಿ ಗ್ರಾಮದ ಬಸವೇಶ್ವರ ಗ್ರಾಮದ ಜಾತ್ರೆಯು ಪ್ರತಿ ವರ್ಷದ ಪದ್ಧತಿಯಂತೆ ದಿ. 18 ರಂದು ಪ್ರಾರಂಭವಾಗಿ ದಿ.23 ರಂದು ನೂತನವಾಗಿ ನಿರ್ಮಿಸಿದ ರಥೋತ್ಸವ ಸಕಲ ವಾದ್ಯಮೇಳದೊಂದಿಗೆ ಪ್ರಥಮವಾಗಿ ರಥೋತ್ಸವ ಆಚರಿಸಲಾಯಿತು. ಯಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 5 ದಿನಗಳವರೆಗೆ ಯಶಸ್ವಿಯಾಗಿ ಜರುಗಿದವು.  

ಗ್ರಾಮದಲ್ಲಿ ಎಲ್ಲ ಮನೆಗಳಲ್ಲಿ ಹಬ್ಬದ ವಾತಾವರಣ ಕಂಗೋಳಿಸುತ್ತಿದ್ದು ಸಕಲ ಭಕ್ತಾಧಿಗಳು ಸಂತಸದಿಂದ ರಥ ಯಾತ್ರೆಯಲ್ಲಿ ಪಾಲ್ಗೊಂಡು ಬಸವೇಶ್ವರರ ಕೃಪೆಗೆ ಪಾತ್ರರಾದರು.