ಬಿಜೆಪಿ ಸರಕಾರ ಅನರ್ಹ ಶಾಸಕರ ಕೈ ಬಿಡಲ್ಲ

ಲೋಕದರ್ಶನ ವರದಿ

ಘಟಪ್ರಭಾ:  ರಾಜ್ಯದಲ್ಲಿ ಬಿಜೆಪಿ ಸರಕಾರ 17 ಜನ ಅನರ್ಹ ಶಾಸಕರ ಸಹಾಯದಿಂದಲೆ ರಚನೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಅವರನ್ನು ಈ ಸರಕಾರ ಕೈ ಬಿಡಲ್ಲ ಅವರ ಬೆನ್ನಿಗೆಬಲವಾಗಿ ಈ ಸರಕಾರ ನಿಲ್ಲುತ್ತದೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಅರಭಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅವರು ಇಂದು ಘಟಪ್ರಭಾದಲ್ಲಿ 833 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಎಡದಂಡೆ ಕಾಲುವೆಯ ಅದುನೀಕರಣ ಕಾಮಗಾರಿಯ ಉದ್ಘಾಟನಾ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಇಂದು ಎಚ್ಡಿ ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದು ಜೆಡಿಎಸ್ ತಮ್ಮ ಸರಕಾರಕ್ಕೆ ಬೆಂಬಲ ನೀಡಿದ್ದಾರೆ. 

ಅನರ್ಹ ಶಾಸಕರು ಅತಂತ್ರರೆ? ಎಂದು ಕೇಳಿದ ಪ್ರಶ್ನೆಗೆ ಸರಕಾರಕ್ಕೆ ಜೆಡಿಎಸ್ ಬೆಂಬಲ ಪಡೆಯುವ ಸಂಭವವಿಲ್ಲ ಹಾಗೂ ಸರಕಾರದಲ್ಲಿ ಎಲ್ಲಾರು ಒಗ್ಗಟ್ಟಾಗಿದ್ದೇವೆ ಡಿಸಿಎಮ್ ಲಕ್ಷಣ ಸವದಿಯವರು ಅನರ್ಹ ಶಾಸಕರ ಬಗ್ಗೆ ನೀಡಿದ ಹೇಳಿಕೆ ಸಮಂಜಸವಲ್ಲ ಹಾಗೂ ಗೋಕಾಕ ರಾಜಕಾರಣದ ಬಗ್ಗೆ ಸುಪ್ರೀಂಕೋರ್ಟತೀಪರ್ು ಬರುವತನಕ ನಾನು ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಮತ್ತು ಸಹೋದರರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಹಾಗೂ ಲಖನ ಜಾರಕಿಹೊಳಿಯವರ ಹತ್ತಿರ ಇನ್ನು ತನಕ ನಾನು ಯಾವುದೇ ಮಾತುಕತೆಯನ್ನು ನಡೆಸಲಿಲ್ಲ ಎಂದು ಹೇಳಿದರು.

ಹಾಗೂ ಧುಪದಾಳ ಜಲಶಾಯದಲ್ಲಿ ತುಂಬಿರುವ ಹೂಳನ್ನು ಎಡದಂಡೆ ಕಾಲುವೆಯ ಆದುನೀಕರಣದ ನಂತರ ಸರಕಾರದ ಜತೆ ಮಾತುಕತೆ ಮಾಡಿ ಹೂಳನ್ನು ತೆಗೆಯಿಸುವ ಪ್ರಯತ್ನ ಮಾಡಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು ಹಾಗೂ ನೇರೆ ಪೀಡಿತ ಪ್ರದೇಶಗಳಿಗೆ ಸರಕಾರ ಹೆಚ್ಚಿನಗಮನವನ್ನು ನೀಡಿದೆ ಮುಂದಿನ ದಿನದಲ್ಲಿ ಬೆಳೆ ಹಾನಿಗೂ ಪರಿಹಾರವನ್ನು ನೀಡುತ್ತೇವೆ ಅಲ್ಲದೆ ಘಟಪ್ರಭಾ ನದಿ ದಂಡೆಯಲ್ಲಿ ನೆರೆ ಹವಾಳಿಯಿಂದ ಮುಳುಗಡೆಯಾದ ಕಬ್ಬುನ್ನು ನಮ್ಮ ಘಟಪ್ರಭಾ ಸಕ್ಕರೆ ಕಾಖರ್ಾನೆಗೆ ತೆಗೆದುಕೊಂಡು ರೈತರಿಗೆ ಉತ್ತಮ ಬಿಲ್ಲನ್ನು ನೀಡುವುದಾಗಿ ಹೇಳಿದರು. 

ಕೇಂದ್ರ ಸರಕಾರ ಇನ್ನುಷ್ಟು ಅನುದಾನವನ್ನು ಬಿಡುಗಡೆ ಮಾಡಿದರೆ ಉತ್ತಮವಾಗುತ್ತದೆ ಯಾಕೆಂದರೆ ನೆರೆ ಪೀಡಿತ ಪ್ರದೇಶದವರೆಗೆ ಎಷ್ಟು ಅನುದಾನವನ್ನು ನೀಡಿದರು ಕಡಿಮೆಯಾಗುತ್ತದೆ ಯಾಕೆಂದರೆ ಅಲ್ಲಿ ಆ ರೀತಿ ಹಾನಿಯಾಗಿದೆ ಅರಭಾಂವಿ ಕ್ಷೇತ್ರಕ್ಕೆ ಶಿಕ್ಷಣ ಇಲಾಖೆಯಿಂದ 10 ಕೋಟಿ ನೀಡುತ್ತೇವೆ ಎಂದು ಹೇಳಿದ್ದಾರೆ ಹಾಗೂ ರಸ್ತೆಅಭಿವೃದ್ಧಿಗೆ 35 ಕೋಟಿ ಹಣ ಬಿಡುಗಡೆಯಗಿದೆ ಎಂದು ಹೇಳಿದರು.