ನವದೆಹಲಿ, ಮೇ 14, ದೇಶವನ್ನು ಸ್ವಾವಲಂಬಿಯನ್ನಾಗಿಸಲು ಗಿಸಲು ಸ್ಥಳೀಯ ಉತ್ಪನ್ನಗಳಿಗೆ ಜನರು ಪ್ರೋತ್ಸಾಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನಲೆಯಲ್ಲಿ, ಯಾವ ವಸ್ತುಗಳು ಸ್ವದೇಶಿ ಎಂಬ ಬಗ್ಗೆ ಬಿಜೆಪಿ ಗುರುವಾರ ಸ್ಪಷ್ಟನೆ ನೀಡಿದೆ.ಭಾರತ ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲ ವಸ್ತುಗಳು ಸ್ವದೇಶಿ ವ್ಯಾಪ್ತಿಗೆ ಒಳಪಡುತ್ತವೆ. ದೇಶದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ ವಸ್ತುಗಳು ಕೂಡಾ ಸ್ವದೇಶಿ ಪಟ್ಟಿಗೆ ಒಳಪಡಲಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಪ್ರಕಟಿಸಿದ್ದಾರೆ
ಉದಾಹರಣೆಗೆ ಶಾಂಪೂ ಅನ್ನು ಹಲವಾರು ಕಂಪನಿಗಳು ತಯಾರು ಮಾಡುತ್ತವೆ, ಭಾರತಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಕೂಡಾ ಇವುಗಳನ್ನು ತಯಾರಿಸುತ್ತವೆ ಎಂದು ಅವರು ತಿಳಿಸಿದ್ದಾರೆ.ಆದರೆ... ಸ್ವದೇಶಿ ಎಂದರೆ ಕೇವಲ ದೇಶಿಯ ಕಂಪನಿಗಳು ತಯಾರು ಮಾಡುವ ವಸ್ತುಗಳು ಮಾತ್ರವಲ್ಲ, ಭಾರತದಲ್ಲಿ ತಯಾರಾಗುವ ಪ್ರತಿಯೊಂದು ವಸ್ತುವೂ ಸಹ ಸ್ವದೇಶಿ ವ್ಯಾಪ್ತಿಗೆ ಒಳಪಡಲಿವೆ ಎಂದು ಅವರು ಸ್ಪಷ್ಟಪಡಿಸಿದರು.ದೇಶದಲ್ಲಿ ತಯಾರಾಗುವ ಪ್ರತಿ ವಸ್ತವೂ ಸ್ವದೇಶಿಯಾಗಿದ್ದು, ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ವಸ್ತುಗಳನ್ನೇ ಖರೀದಿಸಬೇಕೆಂದು ಸೂಚಿಸುವುದಿಲ್ಲ.ಅದು ಖರೀದಿದಾರರ ಇಚ್ಚೆಗೆ ಬಿಟ್ಟಿದ್ದು ಎಂದು ತಿಳಿಸಿದರು.ಒಟ್ಟಾರೆ ಭಾರತದಲ್ಲಿ ತಯಾರಾಗುವ ವಸ್ತುಗಳೆಲ್ಲವೂ ಸ್ವದೇಶಿ ವಸ್ತುಗಳು ಆಗಿರಲಿವೆ ಎಂದು ಅವರು ಸ್ಪಷ್ಟಪಡಿಸಲಿದ್ದಾರೆ. ಕೇವಲ ಸ್ಥಳೀಯ ವಸ್ತುಗಳನ್ನು ಖರೀದಿಸಬೇಕು ಎಂಬ ಪ್ರಚಾರ ನಡೆಸುವುದು ಸರ್ಕಾರದ ಕಾರ್ಯಸೂಚಿಅಲ್ಲ, ಜನರ ಮನ ಸ್ಥಿತಿ ಬದಲಾದರೆ ಎಲ್ಲವೂ ಸರಿಹೋಗಲಿದೆ ಜಿವಿಎಲ್ ಹೇಳಿದರು.