ಇಂಡಿ 18: ಕರ್ನಾಟಕ ರಾಜ್ಯ ಬೇರ್ ಪುಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ವಿಜಯಪೂರ ಜಿಲ್ಲಾ ಸಮಿತಿ ವತಿಯಿಂದ, ವಿಜಯಪೂರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೀಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.
ಮಾಹ್ಮಾತ ಗಾಂಧಿ, ನರೇಗಾ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಫ್‌ಟಿ ಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಜಿಲ್ಲಾ ಬಿ ಎಫ್ ಟಿ ಸಂಘದ ವತಿಯಿಂದ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಎಫ್‌ಟಿ ಸಂಘದ ಜಿಲ್ಲಾ ಅಧ್ಯಕ್ಷರಾದ ಆನಂದ ವಾಲಿಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ನಾವಿ, ಜಿಲ್ಲಾ ಖಜಾಂಚಿ ಸೋಮನಿಂಗ ದಶವಂತ, ಸಂಘದ ಕಾರ್ಯದರ್ಶಿ ಆರೀಫ್ ಶೇಖಜಿ, ಹಾಗೂ ಸದಸ್ಯರಾದ ಕಾಶಿನಾಥ್ ಬಡಿಗೇರ, ಪ್ರದೀಪ್ ಹಳ್ಳದ, ದೇವಿಂದ್ರ ಬಳಬಟ್ಟ, ಮುತ್ತುರಾಜ್ ಶಿಂಧೆ, ಯಶವಂತ ಮೇಲಿನಕೇರಿ, ಮೋತಿರಾಮ್ ರಾಠೋಡ, ಮದರಸಾಬ ಚೌಧರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.